ಬಾಲ್ಯದ ಕನಸು ನನಸಾಗಿದೆ ಎಂದು ಸಂಭ್ರಮಿಸಿದ ರಶ್ಮಿಕಾ ಮಂದಣ್ಣ

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಇಂಟರ್‌ನ್ಯಾಷನಲ್ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ದಿನದಿಂದ ದಿನಕ್ಕೆ ನಟಿಗೆ ಬೇಡಿಕೆ ಹೆಚ್ಚಾಗಿದೆ. ಇದೀಗ ಬಾಲ್ಯ ಕನಸು ನನಸಾಗಿದೆ ಎಂದು ರಶ್ಮಿಕಾ ಸಂಭ್ರಮಿಸಿದ್ದಾರೆ.

ಹಲವಾರು ವರ್ಷಗಳಿಂದ ನಾನು ಹೋಗಬೇಕೆಂದುಕೊಂಡಿದ್ದ ಸ್ಥಳ ಜಪಾನ್. ನನ್ನ ಬಾಲ್ಯದಿಂದಲೂ ನಾನು ಇದನ್ನು ಆಸೆ ಪಟ್ಟಿದ್ದೆ. ಆದರೆ ಜಪಾನ್‌ಗೆ ಹೋಗುವ ನನ್ನ ಕನಸು ನನಸಾಗಬಹುದೆಂದು ಅಂದುಕೊಂಡಿರಲಿಲ್ಲ ಎಂದು ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅವಾರ್ಡ್ ಶೋಗೆ ಒಬ್ಬರೇ ಬಂದಿರುವುದು, ಅವಾರ್ಡ್ ನೀಡುವುದು. ಅಂತೂ ಕನಸು ನನಸಾಗಿದೆ ಎಂದು ನಟಿ ಹಾರ್ಟ್ ಇಮೋಜಿಗಳ ಜೊತೆ ಎಮೋಷನಲ್‌ ಆಗಿ ಕ್ಯಾಪ್ಷನ್ ಬರೆದಿದ್ದಾರೆ. ಜಪಾನ್‌ನಲ್ಲಿ ಕ್ಲಿಕ್ಕಿಸಿಕೊಂಡಿರುವ ಕೆಲವೊಂದು ಫೋಟೋಗಳನ್ನು ರಶ್ಮಿಕಾ ಅಪ್‌ಲೋಡ್ ಮಾಡಿದ್ದಾರೆ.

ಎಲ್ಲರನ್ನೂ ಇಲ್ಲಿ ಭೇಟಿಯಾಗುವುದು, ಇಷ್ಟೊಂದು ಪ್ರೀತಿ ಪಡೆಯುವುದು, ವಿಶೇಷವಾದ ಸ್ವಾಗತ ಪಡೆಯುವುದು. ಇಲ್ಲಿನ ಆಹಾರ, ಸ್ಥಳ, ಲವ್ಲಿ ಜನರು, ಎಲ್ಲವೂ ಅದ್ಭುತವಾಗಿದೆ ಎಂದು ಜಪಾನ್ ಕುರಿತು ನಟಿ ಸಂತಸ ವ್ಯಕ್ತಪಡಿಸಿದ್ದಾರೆ.

ಧನ್ಯವಾದಗಳು ಜಪಾನ್. ಐ ಲವ್ ಯೂ. ನೀನು ನಿಜಕ್ಕೂ ಸ್ಪೆಷಲ್. ಇನ್ನೂ ನಾನು ಪ್ರತಿ ವರ್ಷವೂ ಇಲ್ಲಿಗೆ ಬರುತ್ತೇನೆ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು ‘ಮಾಣಿಕ್ಯ’ ನಟಿ ಎಂಗೇಜ್‌ಮೆಂಟ್

ಅಂದಹಾಗೆ ರಶ್ಮಿಕಾ ಮಂದಣ್ಣ ಜಪಾನ್‌ನಲ್ಲಿ (Japan) ನಡೆದ ಅನಿಮೆ ಅವಾರ್ಡ್ ಫಂಕ್ಷನ್‌ನಲ್ಲಿ (Anime Awards) ಮೊದಲ ಬಾರಿಗೆ ಭಾಗವಹಿಸಿದ್ದಾರೆ. ಇದನ್ನೂ ಓದಿ:ಸ್ವರ್ಗವನ್ನು ಧರೆಗಿಳಿಸಿದ ಅಂಬಾನಿ ಮಗನ ಪ್ರೀ-ವೆಡ್ಡಿಂಗ್‌ನಲ್ಲಿ ಸಿನಿತಾರೆಯರ ದಂಡು

ಪುಷ್ಪ 2 (Pushpa 2) , ರೈನ್‌ಬೋ, ಗರ್ಲ್‌ಫ್ರೆಂಡ್‌, ಅನಿಮಲ್ 2, ಧನುಷ್ (Dhanush) ಜೊತೆಗಿನ ಹೊಸ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಮಂದಣ್ಣ ಕೈಯಲ್ಲಿದೆ.