ರಣ್‌ಬೀರ್ ಜೊತೆಯೂ ರಶ್ಮಿಕಾ ಲಿಪ್ ಲಾಕ್

ಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಲಿಪ್ ಲಾಕ್ ವಿಚಾರವಾಗಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಆಲಿಯಾ ಪತಿ, ರಣ್‌ಬೀರ್ ಕಪೂರ್ ಜೊತೆ ‘ಪುಷ್ಪ’ (Pushpa) ನಟಿ ಲಿಪ್ ಲಾಕ್ ಮಾಡಿದ್ದಾರೆ. ಇಬ್ಬರ ರೊಮ್ಯಾಂಟಿಕ್ ಫೋಟೋ ಸಖತ್ ವೈರಲ್ ಆಗುತ್ತಿದೆ.

‘ಅನಿಮಲ್’ (Animal) ಸಿನಿಮಾದಲ್ಲಿ ರಣ್‌ಬೀರ್‌ಗೆ ರಶ್ಮಿಕಾ ಜೊತೆಯಾಗಿದ್ದಾರೆ. ಕೆಲ ದಿನಗಳ ಹಿಂದೆ ಟ್ರೈಲರ್ ಮೂಲಕ ‘ಅನಿಮಲ್’ ಚಿತ್ರದ ತುಣುಕು ಗಮನ ಸೆಳೆದಿತ್ತು. ಈಗ ಚಿತ್ರದ ಪೋಸ್ಟರ್‌ನಲ್ಲಿ ಹಸಿ ಬಿಸಿ ದೃಶ್ಯದ ಫೋಟೋ ಪಡ್ಡೆಹುಡುಗರ ನಿದ್ದೆ ಕೆಡಿಸಿದೆ.

ರಶ್ಮಿಕಾಗೆ ಲಿಪ್ ಲಾಕ್ ದೃಶ್ಯದಲ್ಲಿ ನಟಿಸೋದು ಹೊಸದೇನಲ್ಲ. ಈ ಹಿಂದೆ ‘ಗೀತಾ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ವಿಜಯ್ ದೇವರಕೊಂಡ (Vijay Devarakonda) ಜೊತೆ ನಟಿ ಬೋಲ್ಡ್ ಆಗಿಯೇ ಲಿಪ್ ಲಾಕ್ ಮಾಡಿದ್ದರು. ಈಗ ರಣ್‌ಬೀರ್ ಜೊತೆ ಚುಂಬನದ ದೃಶ್ಯದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.

ಅಕ್ಟೋಬರ್ 11ರಂದು ಈ ಚಿತ್ರದ ರೊಮ್ಯಾಂಟಿಕ್ ಸಾಂಗ್‌ವೊಂದು ರಿಲೀಸ್ ಆಗಲಿದೆ. ಅದೇ ಹಾಡಿನಲ್ಲಿ ಲಿಪ್ ಲಾಕ್ ಸೀನ್ ಇರಲಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಇದ್ದದ್ದೇ ಎರಡ್ಮೂರು ಗಂಟೆ : ಪ್ರದೀಪ್ ಈಶ್ವರ್

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಸಿನಿಮಾ ಡಿಸೆಂಬರ್ 1ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಈ ಚಿತ್ರದ ಮೂಲಕ ರಶ್ಮಿಕಾ ಅವರ ಬಾಲಿವುಡ್‌ನ(Bollywood) ಭವಿಷ್ಯ ತಿಳಿಯಲಿದೆ. ಈ ಹಿಂದೆ, ರಶ್ಮಿಕಾ ನಟಿಸಿದ ಗುಡ್ ಬೈ, ಮಿಷನ್ ಮಜ್ನು ಚಿತ್ರಗಳು ಮಕಾಡೆ ಮಲಗಿವೆ. ರಣ್‌ಬೀರ್ (Ranbir Kapoor) ಜೊತೆ ‘ಕಿರಿಕ್ ಪಾರ್ಟಿ’ (Kirik Paty) ನಟಿ ಗೆದ್ದು ಬೀಗುತ್ತಾರಾ ಕಾಯಬೇಕಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]