ಬೆಂಗಳೂರು: ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ತಮ್ಮ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ರಕ್ಷಿತ್ ಶೆಟ್ಟಿಗೆ ಚಾಲೆಂಜ್ ಹಾಕಿದ್ದರು. ರಕ್ಷಿತ್ ಚಾಲೆಂಜ್ ಸ್ವೀಕರಿಸಿ ತನ್ನ ಭಾವಿ ಪತ್ನಿ ರಶ್ಮಿಕಾ ಮಂದಣ್ಣಗೆ ಚಾಲೆಂಜ್ ಹಾಕಿದ್ದರು. ಈಗ ರಶ್ಮಿಕಾ ತನ್ನ ಭಾವಿ ಪತಿಯ ಚಾಲೆಂಜ್ ಪೂರ್ಣಗೊಳಿಸಿದ್ದಾರೆ.
ತನ್ನ ಭಾವಿ ಪತಿ ನೀಡಿದ ಚಾಲೆಂಜ್ ಅನ್ನು ಸ್ವೀಕರಿಸಿದ ರಶ್ಮಿಕಾ ತಮ್ಮ ಫಿಟ್ನೆಸ್ ವಿಡಿಯೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ರಶ್ಮಿಕಾ ಅವರ ಫಿಟ್ನೆಸ್ ವಿಡಿಯೋ ನೋಡಿದ ಅಭಿಮಾನಿಗಳು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ನಟಿ ರಶ್ಮಿಕಾ ತಾವು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಜಿಮ್ನಲ್ಲಿ ತಮ್ಮ ಚಾಲೆಂಜ್ ಪೂರ್ಣಗೊಳಿಸಿದ್ದಾರೆ. ರಶ್ಮಿಕಾ ಭಾರೀ ಗಾತ್ರದ ಟ್ರ್ಯಾಕ್ಟರ್ ಟಯರ್ ಅನ್ನು ಉರುಳಿಸಿ ತಾವು ಫಿಟ್ ಎಂಬುದನ್ನು ಸಾಬೀತು ಮಾಡಿದ್ದಾರೆ.
ರಶ್ಮಿಕಾ ತಮ್ಮ ಫಿಟ್ನೆಸ್ ವಿಡಿಯೋ ಹಾಕಿ ಅದಕ್ಕೆ, “ನಾನು ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜ್ ಸ್ವೀಕರಿಸಿದ್ದೇನೆ. ಈ ವಿಡಿಯೋದಲ್ಲಿ ಒಂದು ವಿಶೇಷವಿದೆ. ಗಮನಿಸಿ” ಎಂದು ಟ್ವೀಟ್ ಮಾಡಿದ್ದಾರೆ.
ಈ ಚಾಲೆಂಜ್ ನೀಡಿದ ಸಾನ್ವಿ ಹಾಗೂ ರಕ್ಷಿತ್ ಶೆಟ್ಟಿಗೆ ರಶ್ಮಿಕಾ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಸನಾ ಹೆಗಡೆ, ದಿಗಂತ್, ಪೂಜಾ, ರುಕ್ಸಾರ್ ಹಾಗೂ ತನ್ನ ಟ್ರೈನರ್ ಆದಿಗೆ ಈ ಚಾಲೆಂಜ್ ನೀಡುತ್ತಿದ್ದೇನೆ ಎಂದು ರಶ್ಮಿಕಾ ವಿಡಿಯೋದಲ್ಲಿ ತಿಳಿಸಿದ್ದಾರೆ.
Taking challenge on #HumFitTohIndiaFit ☺ and there’s something special in the video, INVESTIGATE 😎🤟🏽💪 pic.twitter.com/p7XfY7SCxH
— Rashmika Mandanna (@iamRashmika) June 26, 2018
https://twitter.com/rakshitshetty/status/1007674658454372352

Leave a Reply