ಅಪ್ಪನ ಜೊತೆ ರಾಹಾ ಕ್ಯೂಟ್ ಪೋಸ್- ‘ಮುದ್ದು ರಾಜಕುಮಾರಿ’ ಎಂದ ಫ್ಯಾನ್ಸ್

ಬಾಲಿವುಡ್ ನಟ ರಣ್‌ಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಯುರೋಪ್ ವೆಕೇಷನ್ ಮುಗಿಸಿ ಭಾರತಕ್ಕೆ ಮರಳಿದ್ದಾರೆ. ಅಂಬಾನಿ ಮನೆಯ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ಮುಗಿಸಿ ಮುಂಬೈ ಏರ್‌ಪೋರ್ಟ್‌ನಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದು, ಅಪ್ಪನ ಜೊತೆಗಿನ ರಾಹಾ ತುಂಟಾಟದ ಪೋಸ್ ನೆಟ್ಟಿಗರ ಗಮನ ಸೆಳೆದಿದೆ. ರಾಹಾಗೆ ಮುದ್ದು ರಾಜಕುಮಾರಿ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.

 

View this post on Instagram

 

A post shared by Viral Bhayani (@viralbhayani)

ಮುಂಬೈ ವಿಮಾನ ನಿಲ್ದಾಣದಿಂದ ರಣ್‌ಬೀರ್ ಜೊತೆ ಮನೆಗೆ ತೆರಳುವಾಗ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಾಳೆ. ರಾಹಾ ಮುದ್ದು ಮುಖ ನೋಡಿ ನೆಟ್ಟಿಗರು ಬಗೆ ಬಗೆಯ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ರಿಷಿ ಕಪೂರ್ ಹೋಲಿಸಿ ರಾಹಾ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ:ನಾನು ರಿಲೇಷನ್‌ಶಿಪ್‌ನಲ್ಲಿದ್ದೇನೆ ಎಂದು ಪಡ್ಡೆಹುಡುಗರಿಗೆ ಶಾಕ್ ಕೊಟ್ಟ ಕೃತಿ ಶೆಟ್ಟಿ

ರಾಹಾಳನ್ನು ಕ್ಯಾಮೆರಾ ಕಣ್ಣಿಂದ ರಣ್‌ಬೀರ್ ಕಪೂರ್ ದಂಪತಿ ದೂರವಿಟ್ಟಿದ್ದಾರೆ. ವರ್ಷಗಳ ಬಳಿಕ ಕಳೆದ ಕ್ರಿಸ್‌ಮಸ್ ವೇಳೆ ಮಗಳ ಮುಖವನ್ನು ಮೊದಲ ಬಾರಿಗೆ ರಿವೀಲ್ ಮಾಡಿದ್ದರು.

ಅಂದಹಾಗೆ, ‘ರಾಮಾಯಣ’ ಮತ್ತು ‘ಅನಿಮಲ್’ ಪಾರ್ಕ್ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಬ್ಯುಸಿಯಾಗಿದ್ದಾರೆ. ಆಲಿಯಾ ಭಟ್, ವಾರ್ 2 ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ.