ವಿವಾಹ ವಾರ್ಷಿಕೋತ್ಸವಕ್ಕೆ ಹ್ಯಾಪಿ ಫ್ರೆಂಡ್‍ಶಿಪ್ ಡೇ ಎಂದು ರಕ್ಷಿತಾ ವಿಶ್

ಬೆಂಗಳೂರು: ಸ್ಯಾಂಡಲ್‍ವುಡ್‍ನ ಕ್ರೇಜಿ ಕ್ವೀನ್ ರಕ್ಷಿತಾ ಮತ್ತು ನಿರ್ದೇಶಕ ಪ್ರೇಮ್ ದಂಪತಿ ಇಂದು ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

ರಕ್ಷಿತಾ ಮತ್ತು ಪ್ರೇಮ್ ದಂಪತಿ ಮದುವೆಯಾಗಿ ಇಂದು 13 ವರ್ಷಗಳಾಗಿದೆ. ಹೀಗಾಗಿ ತಮ್ಮ 13ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಕ್ಷಿತಾ ತಮ್ಮ ಪತಿಗೆ ಸೋಶಿಯಲ್ ಮೀಡಿಯಾದ ಮೂಲಕ ಶುಭಾಶಯ ತಿಳಿಸಿದ್ದಾರೆ.

ರಕ್ಷಿತಾ ಅವರು ತಮ್ಮ ಮದುವೆ ವಾರ್ಷಿಕೋತ್ಸವ ಸಂಭ್ರಮದಂದು ಸ್ನೇಹಿತರ ದಿನಾಚರಣೆಗೆ ಶುಭ ಕೂರಿದ್ದಾರೆ. ಈ ಮೂಲಕ ತಮ್ಮ ವಿವಾಹ ವಾರ್ಷಿಕೋತ್ಸವವ ಫ್ರೆಂಡ್‍ಶಿಪ್ ಡೇಗೆ ಹೋಲಿಸಿದ್ದಾರೆ. “ಸ್ನೇಹಿತರ ದಿನಾಚರಣೆಗೆ ಶುಭಾಯಗಳು. ನಾವಿಬ್ಬರು ಮದುವೆಯಾಗಿ 13 ವರ್ಷಗಳಾಗಿದೆ. ನಾವಿಬ್ಬರು ಹೀಗೆ ಮುಂದಕ್ಕೂ ಇರುತ್ತೇವೆ ಎಂದು ನಾನು ಭಾವಿಸಿದ್ದೇನೆ. ಯಾವಾಗಲೂ ಸಂತೋಷವಾಗಿರಿ. ದೇವರು ನಿಮಗೆ ಆರ್ಶೀವಾದ ಮಾಡಲಿ” ಎಂದು ರಕ್ಷಿತಾ ಅವರು ಇನ್ಸ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಜೊತೆಗೆ ತಮ್ಮ ಮದುವೆಯ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಇಬ್ಬರಿಗೂ ಶುಭಾಶಯ ಕೋರುತ್ತಿದ್ದಾರೆ. ಮಾರ್ಚ್ 9, 2007 ರಂದು ರಕ್ಷಿತಾ ಮತ್ತು ಪ್ರೇಮ್ ಹಸೆಮಣೆ ಏರಿದ್ದರು. ಈ ದಂಪತಿಗೆ ಸೂರ್ಯ ಎನ್ನುವ ಮಗನಿದ್ದಾನೆ.

https://www.instagram.com/p/B9fB96FpIdE/

ರಕ್ಷಿತಾ ಮದುವೆ ನಂತರ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಅನೇಕ ಕಿರುತೆರೆ ಕಾರ್ಯಕ್ರಮಗಳಲ್ಲಿ ತೀರ್ಪಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಪ್ರೇಮ್ ‘ಏಕ್ ಲವ್ ಯಾ’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ರಕ್ಷಿತಾ ನಿರ್ಮಾಣ ಮಾಡುತ್ತಿದ್ದು, ಜೊತೆಗೆ ಈ ಸಿನಿಮಾದ ಹಾಡೊಂದಕ್ಕೆ ರಕ್ಷಿತಾ ಅವರು ಡ್ಯಾನ್ಸ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *