ಮಂಡ್ಯಕ್ಕೆ ನಟಿ ರಚಿತಾ ರಾಮ್ – ನೋಡಲು ಮುಗಿಬಿದ್ದ ಮಂಡ್ಯ ಜನತೆ

ಮಂಡ್ಯ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ 19 ನೇ ಶೋರೂಂ ಅನ್ನು ಮಂಡ್ಯದಲ್ಲಿ ಚಿತ್ರ ನಟಿ ರಚಿತಾ ರಾಮ್ ಭರ್ಜರಿಯಾಗಿ ಉದ್ಘಾಟನೆ ಮಾಡಿದ್ದಾರೆ.

ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ಕೆವಿಎಸ್ ಕಮರ್ಷಿಯಲ್ ಕಾಂಪ್ಲೆಕ್ಸ್‍ನಲ್ಲಿ ಶೋರೂಂ ಅನ್ನು ರಚಿತಾ ಉದ್ಘಾಟನೆ ಮಾಡಿದ್ದು, ಈ ಶೋರೂಂ ಕರ್ನಾಟಕದಲ್ಲಿ ಉದ್ಘಾಟನೆಯಾಗುತ್ತಿರುವ 19 ನೇ ಶೋರೂಂ ಆಗಿದೆ.

ಮಂಡ್ಯಕ್ಕೆ ಆಗಮಿಸಿದ ರಚಿತಾ ಅವರನ್ನು ನೋಡಲು ಮಂಡ್ಯ ಜನರು ಮುಗಿಬಿದ್ದರು. ಅಭಿಮಾನಿಗಳಿಗಾಗಿ ಅವರು ಹಾಡನ್ನು ಹಾಡಿ ರಂಜಿಸಿದ್ದಾರೆ. ಈ ವೇಳೆ ಡ್ಯಾನ್ಸ್ ಮಾಡುವಂತೆ ಅವರನ್ನು ಅಭಿಮಾನಿಗಳು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ನನಗೆ ಮಂಡ್ಯಕ್ಕೆ ಬರಲು ತುಂಬಾ ಖುಷಿಯಾಗಿದೆ. ನಾನು ಗೌಡ್ರು ಆಗಿರುವುದರಿಂದ ಎಲ್ಲರೂ ನನ್ನನ್ನು ಹಾಸನ ಅಥವಾ ಮಂಡ್ಯದವರು ಅಂದುಕೊಳ್ಳುತ್ತಾರೆ. ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಅವರು ನೂರನೇ ಶೋರೂಂ ತೆರೆಯಲಿ ಎಂದು ಹಾರೈಸುತ್ತೇನೆ ಎಂದು ಮಾತನಾಡಿದರು.

ಇನ್ನೂ ಉದ್ಘಾಟನೆ ನಂತರ ಮಂಡ್ಯ ಸಾರ್ವಜನಿಕರು ಶೋ ರೂಂ ಒಳಗೆ ಬಂದು ಚಿನ್ನ ವೀಕ್ಷಿಸಿ ಖುಷಿ ಪಟ್ಟರು. ಜೊತೆಗೆ ಕೆಲವರು ಚಿನ್ನವನ್ನು ಖರೀದಿಸಿ ಸಂಭ್ರಮಿಸಿದ್ದಾರೆ.

Comments

Leave a Reply

Your email address will not be published. Required fields are marked *