ಕಣ್ಸನ್ನೆ ಬೆಡಗಿಯ ಕ್ಯೂಟ್ ಫೋಟೋ ವೈರಲ್

ಬೆಂಗಳೂರು: ಒಂದು ಕಣ್ಸನ್ನೆ ಮೂಲಕ ನ್ಯಾಶನಲ್ ಕ್ರಶ್ ಅಂತಾ ಕರೆಸಿಕೊಳ್ಳುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ತಮ್ಮ ಬಾಲ್ಯದ ಫೋಟೋವನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ. ಫೋಟೋ ನೋಡಿದವರು ಕ್ಯೂಟ್ ಅಂತಾ ಕಮೆಂಟ್ ಮಾಡುತ್ತಿದ್ದಾರೆ.

ಫೋಟೋ ಅಪ್ಲೋಡ್ ಮಾಡಿಕೊಂಡ 14 ಗಂಟೆಯಲ್ಲಿ 2.4 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಫೋಟೋ ಜೊತೆಗೆ ‘ಫೋಸ್ ನೀಡೋದು ಶಾಶ್ವತವಾಗಿ ಬದಲಾದ ಹಾಗಿದೆ’ ಎಂಬ ಸಾಲುಗಳನ್ನು ಸಹ ಪ್ರಿಯಾ ಬರೆದುಕೊಂಡಿದ್ದಾರೆ. ಪ್ರಿಯಾ ಅಭಿಮಾನಿಗಳಂತೂ ಫೋಟೋ ನೋಡಿದ ಕೂಡಲೇ ತುಂಬಾ ಮುದ್ದಾಗಿ ಕಾಣುತ್ತಿದ್ದೀರಿ ಎಂದು ಪ್ರತಿಕ್ರಿಯಿಸಿದ್ದಾರೆ.

‘ಓರು ಅಡಾರ್ ಲವ್’ ಮಲಯಾಳಂ ಸಿನಿಮಾದಲ್ಲಿ ಸದ್ಯ ಪ್ರಿಯಾ ನಟಿಸುತ್ತಿದ್ದು, ಚಿತ್ರ ತೆರೆಕಾಣಬೇಕಿದೆ. ಈಗಾಗಲೇ ಚಿತ್ರದ ಎರಡು ಟ್ರೇಲರ್‍ಗಳು ಸೂಪರ್ ಹಿಟ್ ಆಗಿದ್ದು, ದೇಶಾದ್ಯಂತ ಸಂಚಲನ ಮೂಡಿಸಿವೆ. ಓರು ಅಡಾರ್ ಲವ್ ಸಿನಿಮಾ ಸೆಪ್ಟೆಂಬರ್ 14ರಂದು ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಪ್ರಿಯಾ ಕಣ್ಸನ್ನೆ ಮತ್ತು ಕ್ಲಾಸ್ ರೂಮ್ ನಲ್ಲಿ ಶೂಟ್ ಮಾಡುವ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಬಾಲಿವುಡ್ ನಿಂದಲೂ ಆಫರ್ ಗಳು ಬರುತ್ತಿವೆ ಎಂದು ವರದಿಯಾಗಿದೆ. ಇತ್ತ ಕನ್ನಡ ‘ಯೋಗಿ ಲವ್ಸ್ ಸುಪ್ರಿಯಾ’ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಯುವ ನಿರ್ದೇಶಕ ಯೋಗಿ ಈ ಚಿತ್ರದ ಮೂಲಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ನಿರ್ದೇಶಕರಾದ ಓಂ ಪ್ರಕಾಶ್ ರಾವ್, ರಾಘವ್ ಲೋಕಿ, ಎಸ್. ಮಹೇಂದರ್, ಕಿರಣ್ ಗೋವಿ ಸೇರಿದಂತೆ ಸಾಕಷ್ಟು ಜನರ ಜೊತೆ ಕೆಲಸ ಮಾಡಿ ಅನುಭವವನ್ನು ಯೋಗಿ ಹೊಂದಿದ್ದಾರೆ.

https://www.instagram.com/p/BlVrRS3DrIu/?taken-by=priya.p.varrier

Comments

Leave a Reply

Your email address will not be published. Required fields are marked *