ಕನ್ನಡತಿಗೆ ಸಲ್ಮಾನ್ ಜೊತೆ ನಟಿಸುವ ಅವಕಾಶ

ಮುಂಬೈ: ಕನ್ನಡದ ನಟಿಗೆ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಜೊತೆ ನಾಯಕಿಯಾಗಿ ನಟಿಸುವ ಅವಕಾಶ ಲಭಿಸಿದೆ ಎಂದು ವರದಿಯಾಗಿದೆ. ಈ ಬಗ್ಗೆ ‘ಕಭೀ ಈದ್, ಕಭೀ ದಿವಾಲಿ’ ಚಿತ್ರತಂಡ ಸಣ್ಣ ಸುಳಿವು ನೀಡಿದ್ದು, ಅಧಿಕೃತವಾಗಿ ನಟಿ ಹೆಸರನ್ನು ಘೋಷಣೆ ಮಾಡಿಲ್ಲ.

ಮೆಹೆಂಜೋದಾರೋ ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಕರಾವಳಿ ಚೆಲುವೆ ಪೂಜಾ ಹೆಗ್ಡೆ. ಸಿನಿಮಾ ಯಶಸ್ಸು ಕಾಣದಿದ್ದರೂ, ಪೂಜಾ ಹೆಗ್ಡೆ ನಟನೆ ನಿರ್ದೇಶಕರನ್ನು ಸೆಳೆದಿತ್ತು. ತೆಲಗು ಸಿನಿಮಾಗಳಲ್ಲಿಯೂ ಬ್ಯುಸಿಯಾಗಿರುವ ಪೂಜಾ ಹಗ್ಡೆ, ಸಲ್ಮಾನ್ ಖಾನ್ ಜೊತೆ ನಟಿಸಲಿದ್ದಾರೆ ಸುದ್ದಿಯೊಂದು ಬಾಲಿವುಡ್ ಗಲ್ಲಿಗಳಲ್ಲಿ ಹರಿದಾಡುತ್ತಿದೆ.

ಸಾಜಿದ್ ನಾಡಿಯಡ್ವಾಲ್ ನಿರ್ಮಾಣದಲ್ಲಿ ‘ಕಭೀ ಈದ್, ಕಭೀ ದಿವಾಲಿ’ ಸಿನಿಮಾ ಮೂಡಿ ಬರುತ್ತಿದೆ. ಕೆಲವೇ ದಿನಗಳಲ್ಲಿ ಸೆಟ್ಟೇರಲಿರುವ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನದಲ್ಲಿ ಸಾಜಿದ್ ತಮ್ಮ ಮುಂಬರುವ ಸಿನಿಮಾದ ಕುರಿತ ಕೆಲ ವಿಷಯಗಳನ್ನು ಹಂಚಿಕೊಂಡರು. ಈ ಮೊದಲು ಸಾಜಿದ್ ನಿರ್ಮಾಣದ ‘ಹೌಸ್ ಫುಲ್’ ಚಿತ್ರದಲ್ಲಿ ಪೂಜಾ ಹೆಗ್ಡೆ ಕೆಲಸ ಮಾಡಿದ್ದರು. ಸಂದರ್ಶನದಲ್ಲಿ ಹೌಸ್ ಫುಲ್ ಸಿನಿಮಾದಲ್ಲಿ ನಟಿಸಿದ ಕಲಾವಿದೆ ಮುಂದಿನ ಚಿತ್ರಕ್ಕೆ ಸೂಕ್ತ ಅನ್ನೋದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.

ಹೌಸ್ ಫುಲ್ ಚಿತ್ರದಲ್ಲಿ ಕಿಲಾಡಿ ಅಕ್ಷಯ್ ಕುಮಾರ್ ಗೆ ಜೊತೆಯಾಗಿ ಪೂಜಾ ಹೆಗ್ಡೆ ನಟಿಸಿದ್ದರು. ಪೂಜಾ ಹೆಗ್ಡೆ ನಟನೆಯನ್ನು ಸಾಜಿದ್ ಮೆಚ್ಚಿಕೊಂಡಿದ್ದರು. ಹಾಗಾಗಿ ಪೂಜಾ ಹೆಗ್ಡೆ ನಟಿಸೋದು ಪಕ್ಕಾ ಎಂದು ಬಾಲಿವುಡ್ ಗಲ್ಲಿಗಳು ಹೇಳುತ್ತಿವೆ. ಅಕ್ಟೋಬರ್ ನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, 2021ರ ರಂಜಾನ್ ಹಬ್ಬಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳಿವೆ.

Comments

Leave a Reply

Your email address will not be published. Required fields are marked *