ರಮ್ಯಾ ಈ ಗುಣ ನನಗೆ ಇಷ್ಟ, ಸಹನಟಿಗೆ ಪತ್ರ ಬರೆದ ಪೂಜಾ ಗಾಂಧಿ

ಮೋಹಕತಾರೆ ರಮ್ಯಾರಂತೆಯೇ ಸಿನಿಮಾ ಮತ್ತು ರಾಜಕೀಯ ಕ್ಷೇತ್ರದಲ್ಲಿ ಪೂಜಾ ಗಾಂಧಿ ಗುರುತಿಸಿಕೊಂಡಿದ್ದಾರೆ. ಸದ್ಯ ರಾಜಕೀಯದಿಂದ ದೂರವಿರೋ ಪೂಜಾ ಗಾಂಧಿ ತಮ್ಮ ಮುಂದಿನ ಸಿನಿಮಾ `ಸಂಹಾರಿಣಿ’ ರಿಲೀಸ್‌ಗೆ ಎದುರು ನೋಡ್ತಿದ್ದಾರೆ. ಆಗಾಗ ಕನ್ನಡದ ವಿಚಾರವಾಗಿ ಗಮನ ಸೆಳೆಯುವ ಪೂಜಾ ಗಾಂಧಿ (Pooja Gandhi) ಇದೀಗ ಸಹನಟಿ ರಮ್ಯಾಗೆ (Ramya)  ಕನ್ನಡದಲ್ಲೊಂದು ಪತ್ರ ಬರೆದಿದ್ದಾರೆ. ರಮ್ಯಾರನ್ನ ಪೂಜಾ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಸಿಹಿಸುದ್ದಿ ಹಂಚಿಕೊಂಡ `ರಾಧಾ ಕಲ್ಯಾಣ’ ಸೀರಿಯಲ್ ನಟಿ ರಾಧಿಕಾ ರಾವ್

`ಮುಂಗಾಳು ಮಳೆ’ (Mungarumale) ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ನಟಿ ಪೂಜಾ ಗಾಂಧಿ ಅವರು ಕೃಷ್ಣ, ಮಿಲನ, ದಂಡುಪಾಳ್ಯ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ರಾಜಕೀಯದಲ್ಲೂ ಗುರುತಿಸಿಕೊಂಡರು. ಇದೀಗ ಕನ್ನಡಿಗರು ಕಾಯುತ್ತಿರುವ ವೀಕೆಂಡ್ ವಿತ್ ರಮೇಶ್ ಶೋ ನೋಡೋಕೆ ನಾನು ಕಾಯ್ತಾ ಇದ್ದೀನಿ ಎಂದು ಪೂಜಾ ಪತ್ರ ಬರೆದಿದ್ದಾರೆ.

ರಮೇಶ್ ಸರ್, ನಿಮ್ಮ ಮತ್ತು ರಮ್ಯ ಮಧ್ಯೆ ನಡೆಯುವ ಮಾತಿನ ಜುಗಲ್‌ಬಂದಿ ನೋಡೋದಕ್ಕೆ ಲಕ್ಷಾಂತರ ಕನ್ನಡಿಗರ ರೀತಿ ನಾನೂ ಕೂಡ ಕಾತರದಿಂದ ಕಾಯುತ್ತಿದ್ದೇನೆ. ರಮ್ಯಾ ಒಳ್ಳೆಯ ವ್ಯಕ್ತಿ. ಅವರಿಗೆ ಏನು ಅನಿಸುತ್ತದೆಯೋ ಅದನ್ನೇ ಹೇಳುತ್ತಾರೆ ಎಂದು ಪೂಜಾ ಪತ್ರ ಆರಂಭ ಮಾಡಿದ್ದಾರೆ.

ನನಗೆ ವೈಯಕ್ತಿಕವಾಗಿ ರಮ್ಯಾ ಯಾಕೆ ಇಷ್ಟ ಆಗ್ತಾರೆ ಅಂದ್ರೆ, ಅವರು ತಮ್ಮ ಸಹ ಕಲಾವಿದರ ಪರವಾಗಿ ನಿಲ್ಲುತ್ತಾರೆ. ಅವರಲ್ಲಿನ ಈ ಗುಣ ನನಗೆ ಇಷ್ಟ ಆಗುತ್ತದೆ. ನನಗೆ ಈಗಲೂ ನೆನಪಿದೆ. ರಾಯಚೂರಿನ ಚುನಾವಣೆಯಲ್ಲಿ ನಾನು ಕೆಟ್ಟದಾಗಿ ಸೋತಾಗ, ಪೂಜಾ ಒಳ್ಳೆಯ ಪ್ರಯತ್ನ ಮಾಡಿದ್ದೀರಿ ಎಂದು ರಮ್ಯಾ ಹೇಳಿದ್ದರು. ರಮ್ಯಾ ನಿಮ್ಮ ಪ್ರೊಡಕ್ಷನ್ ಕಂಪನಿಗೆ ಶುಭಾವಾಗಲಿ. ನಿಮ್ಮ ಸಂಸ್ಥೆಯಿಂದ ರಾಷ್ಟ್ರಮಟ್ಟದ ಕನ್ನಡ ಸಿನಿಮಾಗಳು ಮೂಡಿ ಬರಲಿ ಎಂದು ನಟಿ ಪೂಜಾ ಗಾಂಧಿ ಶುಭಹಾರೈಸಿದ್ದಾರೆ. ನಟಿಯ ಪೋಸ್ಟ್‌ಗೆ ರಮ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಂದಹಾಗೆ ರಮ್ಯಾ ಜೊತೆಗಿನ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮಕ್ಕೆ ಕೌಂಟ್‌ಡೌನ್‌ ಶುರುವಾಗಿದೆ.  ಮಾರ್ಚ್‌ 25ರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

Comments

Leave a Reply

Your email address will not be published. Required fields are marked *