ಜೀವನದಲ್ಲಿ ಯಶಸ್ವಿಯಾಗಲು ಪವಿತ್ರಾ ಗೌಡ ಟಿಪ್ಸ್

ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಪವಿತ್ರಾ ಗೌಡ (Pavithra Gowda) ಜೀವನದಲ್ಲಿ ಯಶಸ್ವಿಯಾಗಲು ಸಲಹೆ ಕೊಟ್ಟಿದ್ದಾರೆ. ಫ್ಯಾಷನ್ ಡಿಸೈನರ್ ಆಗಿ ತಮ್ಮದೇ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪವಿತ್ರಾ ಫ್ಯಾನ್ಸ್‌ಗೆ ಸಕ್ಸಸ್ ಕುರಿತು ಟಿಪ್ಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳೊಂದಿಗೆ ‘ಅಪ್ಪು’ ಸಿನಿಮಾ ವೀಕ್ಷಿಸಿದ ರಕ್ಷಿತಾ

ನಾನೊಂದು ವ್ಯವಹಾರ ಆರಂಭಿಸಿರುವುದಕ್ಕೆ ನಿಜಕ್ಕೂ ಅದೃಷ್ಟಶಾಲಿ. ಅದು ನನಗೆ ಆರ್ಥಿಕ, ಬೌದ್ಧಿಕ ಮತ್ತು ವೈಯಕ್ತಿಕವಾಗಿ ತೃಪ್ತಿಕರವಾಗಷ್ಟೇ ಇಲ್ಲ. ನಾನು ಉತ್ಸಾಹದಿಂದ ಬದುಕಲು ಅವಕಾಶ ಮಾಡಿಕೊಟ್ಟಿದೆ. ಜೀವನದಲ್ಲಿ ಯಶಸ್ವಿಯಾಗಲು ಮೊದಲು ಮಾಡಬೇಕಾದ ಕೆಲಸವೆಂದರೆ ನಿಮ್ಮ ಕೆಲಸವನ್ನು ಪ್ರೀತಿಸುವುದು ಎಂದು ನಟಿ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಬಂದಿವೆ.

ಇತ್ತೀಚೆಗೆ ‘ರೆಡ್ ಕಾರ್ಪೆಟ್ ಸ್ಟುಡಿಯೋ’ ಬೂಟಿಕ್ ಅನ್ನು ಪವಿತ್ರಾ ರೀ ಲಾಂಚ್ ಮಾಡಿದ್ದಾರೆ. ಉದ್ಯಮದಲ್ಲಿ ಮತ್ತೆ ನಟಿ ಬ್ಯುಸಿಯಾಗಿದ್ದಾರೆ.