ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಮದುವೆಗೆ ಮನೆಯವರಿಂದ ಸಿಕ್ತು ಗ್ರೀನ್ ಸಿಗ್ನಲ್

ಚಿತ್ರರಂಗದಲ್ಲಿ ಗಟ್ಟಿಮೇಳದ ಸದ್ದು ಜೋರಾಗಿದೆ. ರಾಹುಲ್ -ಅಥಿಯಾ, ಸಿದ್-ಕಿಯಾರಾ ಬಳಿಕ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghva Chadha) ಜೋಡಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಬಾಲಿವುಡ್ (Bollywood) ಅಡ್ಡಾದಲ್ಲಿ ಸೌಂಡ್ ಮಾಡ್ತಿದೆ.

ಇತ್ತೀಚಿಗೆ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಪರಿಣಿತಿ (Parineeti Chopra) ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಒಟ್ಟಿಗೆ ಕಾಣಿಸಿಕೊಂಡಿದ್ದು, ಡೇಟಿಂಗ್ ರೂಮರ್ಸ್ ಹರಡಲು ಕಾರಣವಾಯ್ತು. ಹೊಟೇಲ್ ಭೇಟಿಯ ವೇಳೆ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮೂಲಗಳ ಪ್ರಕಾರ, ಪರಿಣಿತಿ- ರಾಘವ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ. ಕುಟುಂಬಗಳು ಈಗಾಗಲೇ ರೋಕಾ (ನಿಶ್ಚಯ) ಸಮಾರಂಭಕ್ಕೆ ಸಿದ್ಧತೆಗಳನ್ನು ನಡೆಸುತ್ತಿವೆ. ಅಂದಹಾಗೆ ರೋಕಾ ಎನ್ನುವುದು ಪಂಜಾಬಿ ವಿವಾಹದ ಮೊದಲು ನಡೆಯುವ ಅತ್ಯಂತ ಮಹತ್ವದ ಸಮಾರಂಭಗಳಲ್ಲಿ ಒಂದಾಗಿದೆ.

ರಾಘವ್ ಮತ್ತು ಪರಿಣಿತಿ ಚೋಪ್ರಾ ಇಬ್ಬರೂ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ಓದಿದ್ದಾರೆ. ಹಾಗೆಯೇ ಇಬ್ಬರೂ ಅನೇಕ ಕಾಮನ್ ಫ್ರೆಂಡ್ಸ್ ಹೊಂದಿದ್ದಾರೆ ಎಂಬ ಅಂಶವನ್ನು ಹೊರತುಪಡಿಸಿ, ತಮ್ಮ ಸಂಬಂಧದ ಸ್ಥಿತಿಯ ಬಗ್ಗೆ ಯಾರಿಗೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಸಿದ್-ಕಿಯಾರಾ ಮದುವೆ ನಂತರ ಇದೀಗ ಪರಿಣಿತಿ ಚೋಪ್ರಾ ಹಸೆಮಣೆ ಏರುವುದು ಗ್ಯಾರೆಂಟಿ ಎಂದು ಹೇಳಲಾಗುತ್ತಿದೆ.