ಲವ್‌, ಬ್ರೇಕಪ್‌ ಬಗ್ಗೆ ಸ್ಫೋಟಕ ವಿಚಾರ ಬಿಚ್ಚಿಟ್ಟ ‘ಕಿರಾತಕ’ ನಟಿ

ಶ್‌ಗೆ (Yash) ‘ಕಿರಾತಕ’ (Kirataka Film) ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಓವಿಯಾ (Actress Oviya) ಈಗ ಚಿತ್ರರಂಗದಲ್ಲಿ ಬೇಡಿಕೆ ಕಮ್ಮಿಯಾಗಿದೆ. ಸದಾ ಒಂದಲ್ಲಾ ಒಂದು ವಿಚಾರಗಳ ಮೂಲಕ ಸದ್ದು ಮಾಡುವ ನಟಿ ಓವಿಯಾ ಈಗ ತಮ್ಮ ರಿಲೇಷನ್‌ಶಿಪ್, ಬ್ರೇಕಪ್ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:ತಮಿಳಿನಲ್ಲಿ ಬಿಗ್‌ ಚಾನ್ಸ್‌ ಗಿಟ್ಟಿಸಿಕೊಂಡ ಕೊಡಗಿನ ಕುವರಿ ಅಕ್ಷಿತಾ

ಪ್ರೀತಿಯಲ್ಲಿ ಬಿದ್ದು ಮೋಸ ಹೋಗ್ತಾರೆ. ನಾನು ಕೂಡ ಈ ಮೊದಲು ರಿಲೇಷನ್‌ಶಿಪ್‌ನಲ್ಲಿದ್ದೆ. ಅದ್ಯಾವುದೂ ಕೈಗೂಡಲಿಲ್ಲ. ಕೆಲವರು ಹಣಕ್ಕಾಗಿ ಮೋಸ ಮಾಡುತ್ತಾರೆ. ಇನ್ಮುಂದೆ ಲಿವಿಂಗ್ ಟುಗೆದರ್ ಸಂಬಂಧವನ್ನು ನಾನು ನಂಬುವುದಿಲ್ಲ. ನಿಮಗೆ ಅನಿಸಿದನ್ನು ನೀವು ಮಾಡಿ ಎಂದಿದ್ದಾರೆ. ಪರ್ಸನಲ್ ವಿಚಾರಕ್ಕೆ ನಾವೆಂದೂ ತೊಂದರೆ ಕೊಡಬಾರದು ಎಂದು ‘ಕಿರಾತಕ’ ನಟಿ ಓವಿಯಾ ಮುಕ್ತವಾಗಿ ಮಾತನಾಡಿದ್ದಾರೆ.

ಕನ್ನಡದ ಕಿರಾತಕ, ಮಿಸ್ಟರ್ ಮೊಮ್ಮಗ ಸಿನಿಮಾದಲ್ಲಿ ಓವಿಯಾ ನಟಿಸಿದ್ದಾರೆ. ತಮಿಳಿನಲ್ಲಿ ಕಲಾವಾಣಿ, ಮರೀನಾ, 90 ಎಂಎಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಹೊಸ ಸಿನಿಮಾ ಅವಕಾಶಗಳಿಗಾಗಿ ಎದುರು ನೋಡ್ತಿದ್ದಾರೆ.