ರೆಡ್ ಡ್ರೆಸ್‌ನಲ್ಲಿ ಕಂಗೊಳಿಸಿದ ನಿವಿ- ಗೌನ್ ನೋಡಿ ಟಾರ್ಪಲ್ ಎಂದ ನೆಟ್ಟಿಗರು

‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ನಿವೇದಿತಾ ಗೌಡ ಅವರು ಸದ್ಯ ನಟನೆಯಲ್ಲಿ ಗುರುತಿಸಿಕೊಳ್ತಿದ್ದಾರೆ. ‘ಗಿಚ್ಚಿ ಗಿಲಿಗಿಲಿ 2’ (Gicchi Giligil 2) ಶೋ ಮುಗಿಯುತ್ತಿದ್ದಂತೆ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ. ನಿವಿ ನಯಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಚಂದನ್ (Chandan Shetty) ಪತ್ನಿ ನಿವೇದಿತಾ, ‘ಬಿಗ್ ಬಾಸ್’ ಬಳಿಕ ನಟಿಯಾಗಿ ಗಮನ ಸೆಳೆಯುತ್ತಿದ್ದಾರೆ. ‘ಗಿಚ್ಚಿ ಗಿಲಿಗಿಲಿ’ ಎರಡು ಸೀಸನ್‌ನಲ್ಲಿ ನಟಿಸಿ ನಿವಿ ಸೈ ಎನಿಸಿಕೊಂಡಿದ್ದಾರೆ.

ಇದೀಗ ‘ಗಿಚ್ಚಿ ಗಿಲಿಗಿಲಿ’ ಶೋ ಮುಗಿದಿದೆ. ಕಾರ್ಯಕ್ರಮಕ್ಕೆ ತೆರೆ ಬೀಳುತ್ತಿದ್ದಂತೆ ನಿವೇದಿತಾ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಕೆಂಪು ಬಣ್ಣದ ಗೌನ್ ಧರಿಸಿ ನಿವೇದಿತಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾಗೆ ಬೋಲ್ಡ್ ಆಗಿ ನಟಿ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಮತ್ತೆ ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಸಿನಿಮಾಗೆ ಚಾಲನೆ

ನಿವೇದಿತಾ ಹೊಸ ಫೋಟೋಶೂಟ್ ವೈರಲ್ ಆಗ್ತಿದ್ದಂತೆ ಬಗೆ ಬಗೆಯ ರೀತಿಯಲ್ಲಿ ಕಾಮೆಂಟ್ಸ್ ಹರಿದು ಬಂದಿದೆ. ನಿವಿ ಫೋಟೋ ನೋಡಿ, ಕರೆ ಬಳಿ ನಿಮಗೇನು ಕೆಲಸ ಅಂತಿದ್ದಾರೆ. ಇನ್ನೂ ಕೆಲವರು, ನಿಮ್ಮ ಬಟ್ಟೆ ಕೊಡಿ ಟಾರ್ಪಲ್ ಹಾಕಿಕೊಳ್ತೀವಿ ಅಂತಿದ್ದಾರೆ. ಈ ಮೂಲಕ ಮತ್ತೆ ನಿವೇದಿತಾ ಫೋಟೋ ಟ್ರೋಲಿಗರ ಬಾಯಿಗೆ ಆಹಾರವಾಗಿದೆ.