ಹಾಟ್ ಆಗಿ ಕಾಣಿಸಿಕೊಂಡ ‘ಕಾಂಚನ 3’ ನಟಿ ನಿಕ್ಕಿ

ಕಾಲಿವುಡ್‌ನ ‘ಕಾಂಚನ 3’ (Kanchana 3) ಮೂಲಕ ಮನೆ ಮಾತಾದ ಯುವ ನಟಿ ನಿಕ್ಕಿ ತಂಬೋಲಿ(Nikki Tamboli) ಅವರು ಇದೀಗ ಹಾಟ್ ಫೋಟೋಶೂಟ್ (Hot Photos) ಮೂಲಕ ಇಂಟರ್‌ನೆಟ್ ಬೆಂಕಿ ಹಚ್ಚಿದ್ದಾರೆ. ನಟಿಯ ಬೋಲ್ಡ್ ಅವತಾರದಿಂದ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ತಮಿಳಿನ ಕಾಂಚನ 3 ಸಿನಿಮಾದ ಮೂಲಕ ಗಮನ ಸೆಳೆದ ಹಾಟ್ ನಟಿ ನಿಕ್ಕಿ ತಂಬೋಲಿ ಅವರು ‘ಬಿಗ್ ಬಾಸ್ 14’ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಬಾಲಿವುಡ್‌ನ ಜೋಗಿರಾ ಸಾರಾ ರಾ ರಾ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು.

ಸಿನಿಮಾ ಅವಕಾಶಕ್ಕಿಂತ ಸದಾ ಒಂದಲ್ಲಾ ಒಂದು ಹಾಟ್ ಫೋಟೋಶೂಟ್ ಮೂಲಕ ನಟಿ ಸೌಂಡ್ ಮಾಡ್ತಿದ್ದಾರೆ. ಹಸಿಬಿಸಿ ಫೋಟೋ ಹಂಚಿಕೊಳ್ಳುವ ಮೂಲಕ ಪಡ್ಡೆಹೈಕ್ಳ ನಿದ್ದೆಗೆಡಿಸಿದ್ದಾರೆ. ಈಗ ಬಿಕಿನಿ ಉಡುಪಿನಲ್ಲಿ ನಿಕ್ಕಿ ಹಾಟ್ ಹಾಟ್ ಕಾಣಿಸಿಕೊಳ್ಳುವ ಮೂಲಕ ಗಂಡ್ ಹೈಕ್ಳ ಇಷ್ಟದೇವತೆಯಾಗಿ ಮೋಡಿ ಮಾಡ್ತಿದ್ದಾರೆ.

ಬಿಳಿ ಬಣ್ಣ ಬಿಕಿನಿಗೆ ಗಿಳಿ ಹಸಿರು ಬಣ್ಣದ ಸ್ಕರ್ಟ್ ಮತ್ತು ಕೋಟ್ ಧರಿಸಿ ಕ್ಯಾಮೆರಾ ಕಣ್ಣಿಗೆ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ಸದ್ಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಾಡೆಲ್‌, ನಟಿಯಾಗಿ ಗುರುತಿಸಿಕೊಂಡಿರುವ ನಿಕ್ಕಿ, ಹೊಸ ಬಗೆಯ ಅವಕಾಶಗಳಿಗಾಗಿ ಕಾಯ್ತಿದ್ದಾರೆ. ಇದನ್ನೂ ಓದಿ:ಗುಟ್ಟಾಗಿ ಮದುವೆಯಾದ್ರಾ ‘ಕೆಜಿಎಫ್’ ನಟಿ ಶ್ರೀನಿಧಿ ಶೆಟ್ಟಿ?

ಸಿನಿಮಾಗಿಂತ ಬೋಲ್ಡ್‌ ಫೋಟೋಶೂಟ್‌ ಮೂಲಕನೇ ಹೈಲೆಟ್‌ ಆಗಿರುವ ನಿಕ್ಕಿ, ಬಿಗ್‌ ಬಾಸ್‌ (Bigg Boss) ಶೋನಲ್ಲಿ ಸ್ಪರ್ಧಿಯಾಗಿ ಗಮನ ಸೆಳೆದಿದ್ರು. ಅವರ ಆಟ, ವ್ಯಕ್ತಿತ್ವ ಅಭಿಮಾನಿಗಳಿಗೆ ಇಂಪ್ರೆಸ್‌ ಆಗಿತ್ತು.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]