ಸೋಶಿಯಲ್ ಮೀಡಿಯಾ ಜಗತ್ತಿಗೆ ಕಾಲಿಟ್ಟ ನಯನತಾರಾ

‘ಜವಾನ್’ (Jawan) ಬ್ಯೂಟಿ ನಯನತಾರಾ (Nayanatara) ಇದೀಗ ಇನ್ಸ್ಟಾಗ್ರಾಂಗೆ ಲಗ್ಗೆ ಇಟ್ಟಿದ್ದಾರೆ. ಹೊಸ ಖಾತೆಯನ್ನ ನಟಿ ಕ್ರಿಯೇಟ್ ಮಾಡಿದ ಕೆಲವೇ ಗಂಟೆಯಲ್ಲಿ 1.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ನಟಿಯ ನಯಾ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿವೆ.

ಸಿನಿಮಾ ಮತ್ತು ವೈಯಕ್ತಿಕ ಜೀವನದಲ್ಲಿ ನಯನತಾರಾ ಆ್ಯಕ್ಟೀವ್ ಆಗಿದ್ದರು. ಆದರೆ ಸಾಮಾಜಿಕ ಜಾಲತಾಣಗಳಿಂದ ನಟಿ ದೂರವಿದ್ದರು. ಈಗ ಇನ್ಸ್ಟಾಗ್ರಾಂಗೆ ಎಂಟ್ರಿ ಕೊಟ್ಟಿದ್ದಾರೆ. 15 ಲಕ್ಷ ಫಾಲೋವರ್ಸ್‌ ಹೊಂದಿರುವ ನಟಿ ಮೊದಲ ಪೋಸ್ಟ್ ಆಗಿ ‘ಜವಾನ್’ ಸಿನಿಮಾದ ಟ್ರೈಲರ್ ಹಂಚಿಕೊಂಡಿದ್ದಾರೆ. ಬಳಿಕ ಅವಳಿ ಮಕ್ಕಳ ಜೊತೆಯಿರುವ ಮುದ್ದಾದ ಫೋಟೋವನ್ನ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಮೂಗುತಿ ಧರಿಸಿ ಮಿಂಚಿದ ರಶ್ಮಿಕಾ ಮಂದಣ್ಣ

 

View this post on Instagram

 

A post shared by N A Y A N T H A R A (@nayanthara)

ಇದೇ ಸೆ.7ಕ್ಕೆ ಜವಾನ್ ಸಿನಿಮಾ ಬಹುಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಮೊದಲ ಬಾರಿಗೆ ಶಾರುಖ್ ಖಾನ್‌ಗೆ(Sharukh Khan) ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ. ಚಿತ್ರದ ಟೀಸರ್, ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.

ಜವಾನ್ ಸಿನಿಮಾದಲ್ಲಿ ಶಾರುಖ್, ನಯನತಾರಾ, ವಿಜಯ್ ಸೇತುಪತಿ(Vijay Sethupathi), ಪ್ರಿಯಾಮಣಿ (Priyamani) ಸೇರಿದಂತೆ ಹಲವರು ನಟಿಸಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]