ಮಹಾರಾಣಿ ಧಿರಿಸಿನಲ್ಲಿ ಮೇಘನಾ ಫುಲ್ ಮಿಂಚಿಂಗ್

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ, ಸರ್ಜಾ ಕುಟುಂಬದ ಸೊಸೆಯಾಗಿರುವ ಮೇಘನಾ ರಾಜ್ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ನಾಳೆ ಚಿರು ಸರ್ಜಾ ಹುಟ್ಟುಹಬ್ಬದ ಹಿನ್ನಲೆ ಪತಿಯ ಸವಿನೆನೆಪಿನಾರ್ಥಕವಾಗಿ ಒಂದು ಫೋಟೋಶೂಟ್ ಮಾಡಿಸಿದ್ದಾರೆ.

ರಾಜ ರಾಣಿ ಥೀಮ್‍ನಲ್ಲಿ ಮಾಡಿರುವ ಹೊಸ ಫೋಟೋಶೂಟ್ ಇದಾಗಿದೆ. ರಾಜ ವಿಧಿವಶರಾದ ಬಳಿಕ ರಾಣಿ, ಮಗನಿಗೆ ಆ ರಾಜನ ಬಗ್ಗೆ ತಿಳಿಸುವ ಥೀಮ್ ಅನ್ನು ಫೋಟೋಶೂಟ್ ಒಳಗೊಂಡಿದೆ. ರಾಜನ ನಿಧನದ ಬಳಿಕ ರಾಣಿ ತನ್ನ ಸಾಮ್ರಾಜ್ಯವನ್ನು ಹೇಗೆ ಸಮರ್ಥವಾಗಿ ಮುನ್ನಡೆಸುತ್ತಾಳೆ ಎಂಬ ಥೀಮ್‍ನಲ್ಲಿ ಮೇಘನಾ ಕಾಣಿಸಿಕೊಂಡಿದ್ದಾರೆ.

ಚಿರಂಜೀವಿ ಸರ್ಜಾ ಫೋಟೋ ಪೇಂಟಿಂಗ್ ಮಾಡುತ್ತಿರುವ ಮೇಘನಾ ರಾಜ್ ರಾಣಿಯಂತೆ ಕಾಣಿಸುತ್ತಿದ್ದಾರೆ. ಮೇಘನಾ ಮಗ ರಾಯನ್ ಸರ್ಜಾ ಈ ಫೋಟೋಗಳಲ್ಲಿ ಕಾಣಿಸಿಕೊಂಡಿಲ್ಲ. ಫೋಟೋಶೂಟ್ ಥೀಮ್ ತುಂಬಾ ಚೆನ್ನಾಗಿದೆ. ಮಧುರಾ ರೆಡ್ಡಿ ಅವರ ಕಾನ್ಸೆಪ್ಟ್‍ನಲ್ಲಿ ಎಎಂ ಸ್ಟುಡಿಯೋ ಜೊತೆ ಸೇರಿ ಈ ಹೊಸ ಫೋಟೋಶೂಟ್ ಮಾಡಲಾಗಿದೆ. ನಾಳೆ ಚಿರು ಹುಟ್ಟುಹಬ್ಬವಾಗಿದ್ದು, ಮೇಘನಾ ರಾಜ್ ಅವರ ಹೊಸ ಸಿನಿಮಾ ಕೂಡ ಲಾಂಚ್ ಆಗಲಿದೆ. 2 ವರ್ಷಗಳ ಬಳಿಕ ಮತ್ತೆ ಬಿಗ್ ಸ್ಕ್ರೀನ್‍ಗೆ ಮೇಘನಾ ರಾಜ್ ಮರಳಲಿದ್ದಾರೆ. ಇದನ್ನೂ ಓದಿ: 16 ಕೆ.ಜಿ ಚಿನ್ನದ ಸೀರೆ ಉಡಿಸಿ ಮಹಾಲಕ್ಷ್ಮಿ ದೇವಿಗೆ ಅಲಂಕಾರ

ಒಟ್ಟಿನಲ್ಲಿ ಮೇಘನಾ ಅವರಿಗೆ ಈ ಅಕ್ಟೋಬರ್ ತಿಂಗಳು ತುಂಬಾ ವಿಶೇಷವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಮಗ ರಾಯನ್ ರಜ್ ಸರ್ಜಾರ ಮತ್ತು ಪತಿ ಚಿರಂಜೀವಿ ಸರ್ಜಾ ಒಂದೆ ತಿಂಗಳಿನಲ್ಲಿ ಜನಿಸಿದ್ದಾರೆ. ಈ ಕುಟುಂಬದಲ್ಲಿ ಚಿರು ಜೊತೆಗೆ ಇಲ್ಲ ಎನ್ನುವ ದುಃಖ ಇದೆ. ಚಿರುವ ಅವರ ಸವಿನೆನೆಪನ್ನು ವಿಶೇಷವಾಗಿಸಲು ಮೇಘನಾ ರಾಜ, ರಾಣಿ ಕಾನ್ಸೆಪ್ಟ್‍ನಲ್ಲಿ ಜೀವನದ ಕಥೆ ಹೇಳುವ ಪ್ರಯತ್ನ ತುಂಬಾ ವಿಭಿನ್ನವಾಗಿದೆ. ಮೇಘನಾ ಮುದ್ದು ಮಗ ರಾಯಜ್ ರಾಜ್ ಆರೈಕೆಯಲ್ಲಿ ತೊಡಗಿಕೊಂಡಿದ್ದರು. ಇದೀಗ ಅವರು ತೆರೆ ಮೇಲೆ ಬಂದು ಅಭಿಮಾನಿಗಳನ್ನು ರಂಜಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:  ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್

Comments

Leave a Reply

Your email address will not be published. Required fields are marked *