ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟ ‘ಅರಸು’ ನಟಿ- ತೆಲುಗಿಗೆ ಮೀರಾ ಜಾಸ್ಮಿನ್ ಕಮ್‌‌ ಬ್ಯಾಕ್

ನ್ನಡದ ಮೌರ್ಯ, ಅರಸು, ಹೂ ಸಿನಿಮಾಗಳು ಮೂಲಕ ಮೋಡಿ ಮಾಡಿದ ಬಹುಭಾಷಾ ನಟಿ ಮೀರಾ ಜಾಸ್ಮಿನ್ (Meera Jasmine) ಇದೀಗ ಹಲವು ವರ್ಷಗಳ ನಂತರ ತೆಲುಗಿಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಹೊಸ ಸಿನಿಮಾದಲ್ಲಿ ಮಹಾರಾಣಿಯಂತೆ ಮೀರಾ ಕಂಗೊಳಿಸಿದ್ದಾರೆ. ಸಿನಿಮಾದ ಪೋಸ್ಟರ್ ಕೂಡ ಇದೀಗ ರಿಲೀಸ್ ಆಗಿದೆ.

ವೈಯಕ್ತಿಕ ಜೀವನದಲ್ಲಿ ನಡೆದ ಕಹಿ ಘಟನೆಗಳಿಂದ ನಟಿ ಸಿನಿಮಾದಿಂದ ದೂರಾಗಿದ್ದರು. ಕಳೆದ ಎರಡ್ಮೂರು ವರ್ಷಗಳಿಂದ ಸಿನಿಮಾದಲ್ಲಿ ನಟಿ ಆ್ಯಕ್ಟೀವ್ ಆಗಿದ್ದಾರೆ. ಹಲವು ವರ್ಷಗಳ ಬಳಿಕ ಮತ್ತೆ ಟಾಲಿವುಡ್‌ಗೆ ಮೀರಾ ಕಮ್‌ ಬ್ಯಾಕ್‌ ಆಗಿದ್ದು, ಒಂದೊಳ್ಳೆ ಸಿನಿಮಾ ಟೀಮ್‌ ಜೊತೆ ನಟಿ ಕೈಜೋಡಿಸಿದ್ದಾರೆ. ಇದನ್ನೂ ಓದಿ:ಸಾಮಾನ್ಯರಂತೆ ರೋಡ್ ಸೈಡ್‌ನಲ್ಲಿ ಸ್ನೇಹಿತರ ಜೊತೆ ಚಾಟ್ಸ್ ಸವಿದ ಧ್ರುವ ಸರ್ಜಾ

 

View this post on Instagram

 

A post shared by Meera Jasmine (@meerajasmine)

ತೆಲುಗಿನ ಹೀರೋ ಶ್ರೀವಿಷ್ಣು ಜೊತೆ ಮೀರಾ ಎಂಟ್ರಿ ಕೊಟ್ಟಿದ್ದಾರೆ. ‘ಸ್ವಾಗ್’ (Swag Film) ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ರಾಣಿ ಉತ್ಪಲಾ ದೇವಿ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ. ಸದ್ಯ ನಟಿಯ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ. ಈ ಪೋಸ್ಟರ್‌ನಲ್ಲಿ ‘ಅರಸು’ ನಟಿ ಕಂಗೊಳಿಸಿದ್ದಾರೆ.

ಟಾಲಿವುಡ್‌ನಲ್ಲಿ ಪವನ್‌ ಕಲ್ಯಾಣ್‌, ರವಿ ತೇಜ, ಬಾಲಯ್ಯ, ಜೊತೆ ಮೀರಾ ದಶಕಗಳ ಹಿಂದೆ ನಟಿಸಿದ್ದರು. ಈಗ ಮತ್ತೆ ರೀ ಎಂಟ್ರಿ ಕೊಟ್ಟಿರುವ ಮೀರಾರನ್ನು ನೋಡಿ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ. ಪ್ರಸ್ತುತ ತಮಿಳಿನ ‘ದಿ ಟೆಸ್ಟ್’ ಮತ್ತು ತೆಲುಗಿನ ‘ಸ್ವಾಗ್’ ಸಿನಿಮಾಗಳು ನಟಿಯ ಕೈಯಲ್ಲಿವೆ.