ಕೆಂಪು ಬಣ್ಣದ ಸೀರೆಯಲ್ಲಿ ಗ್ಲ್ಯಾಮರಸ್ ಆಗಿ ಮಿಂಚಿದ ಮಾನ್ವಿತಾ

ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ (Manvitha Kamath) ಅವರು ಮತ್ತೆ ನಟನೆ, ಫೋಟೋಶೂಟ್ ಅಂತಾ ಆಕ್ಟೀವ್ ಆಗಿದ್ದಾರೆ. ಹೊಸ ಫೋಟೋಶೂಟ್‌ನಲ್ಲಿ ಸಖತ್ ಹಾಟ್ & ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ‘ಟಗರು’ (Tagaru) ಪುಟ್ಟಿಯ ನಯಾ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:ಉಪೇಂದ್ರ UI ಚಿತ್ರದಲ್ಲಿ ‘ವೇದ’ ನಟಿ ವೀಣಾ ಪೊನ್ನಪ್ಪ

ಆರ್‌ಜೆ ಆಗಿದ್ದ ಮಾನ್ವಿತಾ, ‘ಕೆಂಡಸಂಪಿಗೆ’ (Kendasampige) ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood)  ನಾಯಕಿಯಾಗಿ ಎಂಟ್ರಿ ಕೊಟ್ಟರು. ತಮಗೆ ಸಿಕ್ಕ ಮೊದಲ ಸಿನಿಮಾ ಅವಕಾಶವನ್ನ ಸರಿಯಾಗಿ ಸದುಪಯೋಗಪಡಿಸಿಕೊಂಡು ಭರವಸೆಯ ನಟಿಯಾಗಿ ಗುರುತಿಸಿಕೊಂಡರು. ಬಳಿಕ ಟಗರು, ಚೌಕ, ಶಿವ 143 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು.

ಇತ್ತೀಚಿಗೆ ಮಾನ್ವಿತಾ, ತಾಯಿ ಸುಜಾತ ಕಾಮತ್ ಅವರು ಕಿಡ್ನಿ ವೈಪಲ್ಯದಿಂದ ನಿಧನರಾದರು. ಇದೀಗ ನಿಧಾನಕ್ಕೆ ಆ ನೋವಿನಿಂದ ಹೊರಬರುತ್ತಿದ್ದಾರೆ. ಅಮ್ಮನ ಆಸೆಯಂತೆಯೇ ಸಿನಿಮಾಗಳಲ್ಲಿ ನಟಿಸುವ ಜೊತೆಗೆ ತಮ್ಮದೇ ‘ಸ್ಟುಡಿಯೋ ಮ್ಯಾನ್‌ಕಿನ್’ (Studio Manekin) ಎಂಬ ಆ್ಯನಿಮೇಷನ್ ಸ್ಟುಡಿಯೋವೊಂದನ್ನ ತೆರೆದಿದ್ದಾರೆ. ಇತ್ತೀಚಿಗೆ ಮಾನ್ವಿತಾ, ಹೊಸ ಆಫೀಸ್‌ಗೆ ಲಗ್ಗೆ ಇಟ್ಟಿದ್ದಾರೆ. 2 ವರ್ಷಗಳ ಹಿಂದೆಯೇ ಈ ಬಗ್ಗೆ ನಟಿ ಹೇಳಿದ್ದರು. ಇದೀಗ ಹೊಸ ಕಾರ್ಯಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ.

ಒಂದು ಚಿತ್ರಕ್ಕೆ ಬೇಕಾದ ಸ್ಟೋರಿ ಬೋರ್ಡ್ ಅನ್ನು ಆ್ಯನಿಮೇಷನ್ ರೂಪದಲ್ಲಿ ಮಾಡಿಕೊಡುವುದು. ಹಾಲಿವುಡ್‌ನಲ್ಲಿ ಸ್ಟೋರಿ ಬೋರ್ಡ್ ಇಲ್ಲದೇ ಯಾವ ಚಿತ್ರವೂ ಶೂಟಿಂಗ್ ಮಾಡಲ್ಲ. ಕನ್ನಡದಲ್ಲಿ ಸ್ಟೋರಿ ಬೋರ್ಡ್‌ಗಳ ಬಗ್ಗೆ ತಿಳುವಳಿಕೆ ಇದ್ದರೂ ಅದರ ಸೌಲಭ್ಯಗಳು ಇಲ್ಲ. ಹಾಗಾಗಿ ನಟಿ ಮಾನ್ವಿತಾ ಕಾಮತ್ ಅವರು ‘ಸ್ಟುಡಿಯೋ ಮ್ಯಾನ್‌ಕಿನ್ʼ ಮೂಲಕ ಚಿತ್ರಗಳಿಗೆ ಬೇಕಾಗುವ ಸ್ಟೋರಿ ಬೋರ್ಡ್‌ ಆ್ಯನಿಮೇಷನ್ ರೂಪದಲ್ಲಿ ಮಾಡಿಕೊಡುತ್ತಾರೆ. ಈ ಮೂಲಕ ಹೊಸದೊಂದು ಪ್ರಯತ್ನಕ್ಕೆ ನಟಿ ಕೈ ಹಾಕಿದ್ದಾರೆ.

ಇದೆಲ್ಲದರ ನಡುವೆ ಮಾನ್ವಿತಾ ಕಾಮತ್ ಹೊಸ ಫೋಟೋಶೂಟ್‌ನಲ್ಲಿ ಗ್ಲ್ಯಾಮರಸ್ ಆಗಿ ಮಿಂಚಿದ್ದಾರೆ. ಕೆಂಪು ಬಣ್ಣದ ಸೀರೆಯಲ್ಲಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತಷ್ಟು ಫಿಟ್ ಆಗಿರುವ ಮಾನ್ವಿತಾ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸ್ಟೈಲ್‌ಗೆ ತಕ್ಕಂತೆ ಚೆಂದದ ಬ್ಯಾಗ್ ಕೂಡ ಹಿಡಿದು ಕ್ಯಾಮೆರಾಗೆ ಮಾನ್ವಿತಾ ಮುದ್ದಾಗಿ ಪೋಸ್ ನೀಡಿದ್ದಾರೆ. ಅಂದಹಾಗೆ, ವೇಣು ಕ್ರಿಷ್‌ ಕ್ಯಾಮೆರಾ ಕಣ್ಣಿನಲ್ಲಿ ಈ ಅದ್ಭುತವಾಗಿ ಫೋಟೋಶೂಟ್‌ ಮೂಡಿ ಬಂದಿದೆ.