ಮಾಳವಿಕಾ ಅವಿನಾಶ್ ಬಹುಭಾಷೆಗಳಲ್ಲಿ ಮಿಂಚುತ್ತಿರುವ ಪ್ರತಿಭಾವಂತ ನಟಿ, ಸಿನಿಮಾ ವಿಷ್ಯವಾಗಿ ಸುದ್ದಿಯಲ್ಲಿರುತ್ತಿದ್ದ ನಟಿ ಈಗ ತಮ್ಮ ಖಾಸಗಿ ಬದುಕಿನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಬುದ್ದಿಮಾಂದ್ಯ ಮಗನ ನೆನೆದು ನಟಿ ಮಾಳವಿಕಾ ಕಣ್ಣೀರಿಟ್ಟಿದ್ದಾರೆ.

ಕಲಾವಿದರು ಪರದೆಯ ಮೇಲೆ ನಗಿಸುತ್ತಾರೆ. ಖುಷಿ ಖುಷಿಯಾಗಿ ನಟಿಸುತ್ತಾರೆ. ಆದರೆ ತೆರೆ ಹಿಂದಿನ ವೈಯಕ್ತಿಕ ಬದುಕಿನಲ್ಲಿ ನಡೆಯುವ ಕಲಾವಿದರ ಕಷ್ಟ ಹೇಗಿರುತ್ತೆ ಎಂಬುದು ನೋಡುಗರಿಗೆ ತಿಳಿದಿರುವುದಿಲ್ಲ. ಇದೀಗ ನಟಿ ಮಾಳವಿಕಾ ಅವಿನಾಶ್ ಅವರ ಬದುಕಿನಲ್ಲಿ ನೋವಿನ ಕತೆಯಿದೆ. ಖಾಸಗಿ ವಾಹಿನಿಯೊಂದರ ಶೋನಲ್ಲಿ ಬುದ್ದಿಮಾಂದ್ಯ ಮಗನನ್ನ ನೆನೆದು ಭಾವುಕರಾಗಿದ್ದಾರೆ.

ಶೋನಲ್ಲಿ ಸಹನಾ ಎಂಬ ಸ್ಪರ್ಧಿಗೆ ಕಿವಿ ಕೇಳುವುದಿಲ್ಲ. ಆದರೆ ತನ್ನಲ್ಲಿರುವ ಕೊರತೆಯನ್ನ ಮೆಟ್ಟಿ ನಿಂತು ಎಲ್ಲರಿಗೂ ಸ್ಪೂರ್ತಿಯಾಗುವಂತೆ ವೇದಿಕೆಯ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಮಾಳವಿಕಾ ಕೂಡ ಸಹನಾ ಪ್ರತಿಭೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವುದಲ್ಲದೇ ತಮ್ಮ ಅಂಗವಿಕಲ, ಬುದ್ದಿಮಾಂದ್ಯ ಮಗನನ್ನ ನೆನೆದು ಕಣ್ಣೀರಿಟ್ಟಿದ್ದಾರೆ. ಎಲ್ಲಾ ಮಕ್ಕಳು ದೇವರು ಮಕ್ಕಳು ಎಂದು ಹೇಳಿ, ಭಾವುಕರಾಗಿದ್ದಾರೆ.

ನನ್ನ ಮಗನಿಗೆ 8 ತಿಂಗಳು ಇರುವಾಗಲೇ ಸಂಗೀತದ ಅಭಿರುಚಿಯಿದೆ. ಕೆಲಸದ ಒತ್ತಡ ಮಧ್ಯೆ ದಿನದ ಕಡೆಯ ಮಗನೊಂದಿಗೆ ಮಾಡಲು ಇಷ್ಟಪಡುತ್ತೇನೆ. ಮಗನಿಗೆ ಊಟ ಮಾಡಿಸುವ ಬೇರೆ ಮಾರ್ಗ ನಮಗೆ ಗೊತ್ತಿಲ್ಲ. ಟಾಮ್ ಆ್ಯಂಡ್ ಜೆರಿ, ಛೋಟಾ ಭೀಮ ಅವನಿಗೆ ಗೊತ್ತಿಲ್ಲ. ಸಂಗೀತ ಒಂದೇ ಮಗನಿಗೆ ಅರ್ಥವಾಗುವ ಭಾಷೆ ಎಂದು ಮಗನ ಬಗ್ಗೆ ಮಾಳವಿಕಾ ಭಾವುಕರಾಗಿದ್ದಾರೆ. ಡಿಕೆಡಿ ಮತ್ತು ಜೋಡಿ ನಂಬರ್ ಒನ್ ಮಹಾಸಂಗಮ ಶೋನಲ್ಲಿ ಈ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ:ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಮಿಂಚಿದ ಬಾಲಿವುಡ್ ನಟಿ ಬಿಪಾಶಾ ಬಸು
View this post on Instagram
ಅಪ್ಪಾಜಿ ನಟನೆಯ ಹಾಡುಗಳು, ಅರ್ಜುನ್ ಜನ್ಯ ಅವರ ಸಾಂಗ್ಸ್, ಶಿವಣ್ಣ ನಟನೆಯ `ಓಂ’ ಚಿತ್ರದ ಹಾಡಗಳನ್ನ ಮಗ ಕೇಳುತ್ತಾನೆ. ಸಂಗೀತದ ಮೇಲಿರುವ ಒಲವಿರುವ ಬುದ್ದಿಮಾಂದ್ಯ ಮಗನ ಬಗ್ಗೆ ಮಾಳವಿಕಾ ಎಮೋಷನಲ್ ಆಗಿ ಮಾತನಾಡಿದ್ದಾರೆ.

Leave a Reply