ತಂದೆಯ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಕ್ಕೆ ಖುಷ್ಬೂಗೆ ನೆಟ್ಟಿಗರಿಂದ ಕ್ಲಾಸ್

ಅಂಜದ ಗಂಡು, ಯುಗಪುರುಷ, ರಣಧೀರ ಸೇರಿದಂತೆ ಕನ್ನಡದ ಸಾಕಷ್ಟು ಸಿನಿಮಾದಲ್ಲಿ ನಟಿಸಿರುವ ಖುಷ್ಬೂ ಸುಂದರ್ (Kushboo Sundar) ಇತ್ತೀಚಿಗೆ ತನ್ನ ತಂದೆಯಿಂದಲೇ ಎದುರಿಸಿದ ದೌರ್ಜನ್ಯದ ಬಗ್ಗೆ ನಟಿ ಹೇಳಿಕೊಂಡಿದ್ದರು. ಈಗ ನಟಿ ಈ ರೀತಿ ಮಾತನಾಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಮಾತುಗಳು ಕೇಳಿ ಬಂದಿದೆ. ಈ ಬಗ್ಗೆ ಖುಷ್ಬೂ ಮೌನ ಮುರಿದಿದ್ದಾರೆ.

ತಮ್ಮ 8ನೇ ವಯಸ್ಸಿಗೆ ಖುಷ್ಬೂ ತಮ್ಮ ತಂದೆಯಿಂದಲೇ (Father) ದೌರ್ಜನ್ಯ ಎದುರಿಸಿದ್ದರು. ತಾಯಿಗೂ ಹೇಳದೇ ಇರುವಂತಹ ವಾತಾವರಣ ನಿರ್ಮಾಣವಾಗಿತ್ತು. ಇದರ ಬಗ್ಗೆ ಇತ್ತೀಚಿಗೆ ಸಂದರ್ಶನದಲ್ಲಿ ನಟಿ ಬಾಯ್ಬಿಟ್ಟಿದ್ದರು. ಈ ಕುರಿತು ಸಾಕಷ್ಟು ವಿರೋಧ ಬಂದಿರುವ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಆಶ್ಚರ್ಯಕರ ಹೇಳಿಕೆಯೇನೂ ನೀಡಿಲ್ಲ. ನಾನು ಪ್ರಾಮಾಣಿಕತೆಯಿಂದ ಈ ಮಾತು ಹೇಳಿದ್ದೇನೆ. ನನ್ನ ಜೊತೆ ಈ ರೀತಿ ಆಯ್ತು, ಅಪರಾಧ ಮಾಡಿದವರು ನಾಚಿಕೆ ಪಡಬೇಕು ಎಂದು ಖುಷ್ಬೂ ಸುಂದರ್ ಅವರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಧ್ವನಿಯಿಂದ ಎದುರಿಸಿದ ಟೀಕೆ ಬಗ್ಗೆ ಬಾಯ್ಬಿಟ್ಟ ರಾಣಿ ಮುಖರ್ಜಿ

ಗಟ್ಟಿಯಾಗಿ ನಿಲ್ಲಿ ಇದೇ ರಸ್ತೆಯ ಅಂತ್ಯ ಎಂದು ಭಾವಿಸಬೇಡಿ ಎಂದು ಎಲ್ಲರಿಗೂ ನಾನು ಸಂದೇಶ ಕಳಿಸಬೇಕಿದೆ. ನಾನು ಈ ಮಾತು ಹೇಳಿರೋದಿಕ್ಕೆ ಇಷ್ಟು ವರ್ಷ ತೆಗೆದುಕೊಂಡೆ ಎಂದರೆ ಮಹಿಳೆಯರು ಈ ಬಗ್ಗೆ ಮಾತನಾಡಲೇಬೇಕಾದ ಅಗತ್ಯವಿದೆ. ನನ್ನ ಜೊತೆ ಈ ರೀತಿ ಆಯ್ತು, ಏನೇ ಆಗಲಿ ನಾನು ನನ್ನ ಜರ್ನಿಯನ್ನು ಮುಂದುವರೆಸುತ್ತೇನೆ ಎಂದು ಖುಷ್ಬೂ ಹೇಳಿದ್ದಾರೆ.

ನನ್ನ ಹೆಣ್ಣು ಮಕ್ಕಳಿಗೆ, ಪತಿಗೆ ಈ ವಿಷಯ ಮೊದಲೇ ಗೊತ್ತಿತ್ತು. ಪ್ರತಿ ಸಲ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆದರೆ ನೀನು ಯಾವ ರೀತಿ ಬಟ್ಟೆ ಹಾಕಿದ್ದೆ? ಏನು ಮಾಡುತ್ತಿದ್ದೆ ಎಂದು ಪ್ರಶ್ನೆ ಮಾಡಲಾಗುತ್ತದೆ. ನನ್ನ ಮೇಲೆ ದೌರ್ಜನ್ಯ ಆದಾಗ ನನಗೆ 8 ವರ್ಷ. ನನಗೆ ಆ ವಯಸ್ಸಿನಲ್ಲಿ ಏನು ಗೊತ್ತಾಗುತ್ತದೆ? ನಾನು ಈಗ ಈ ದೌರ್ಜನ್ಯದ ಬಗ್ಗೆ ಮಾತನಾಡಿದ್ದರಿಂದ ನನ್ನ ಪತಿ, ನೀನು ಈಗ ಇದರಿಂದ ಹೊರಗಡೆ ಬಂದಿದ್ದೀಯಾ ಅಲ್ವಾ, ಈಗ ನೀನು ಓಕೆನಾ ಎಂದು ಕೇಳಿದ್ದರು. ಈ ವೇಳೆ ತಮ್ಮ ಕುಟುಂಬದ ಬೆಂಬಲದ ಬಗ್ಗೆ ಖುಷ್ಬೂ ಮಾತನಾಡಿದ್ದಾರೆ. ಈ ಮೂಲಕ ತನ್ನ ಹೇಳಿಕೆಗೆ ವಿರೋಧಿಸಿವರಿಗೆ ತಕ್ಕ ಉತ್ತರ ನೀಡಿದ್ದಾರೆ.

Comments

Leave a Reply

Your email address will not be published. Required fields are marked *