ಖ್ಯಾತ ಗಾಯಕಿ ಎಂ.ಎಸ್ ಸುಬ್ಬಲಕ್ಷ್ಮಿ ಬಯೋಪಿಕ್‌ನಲ್ಲಿ ಕೀರ್ತಿ ಸುರೇಶ್

ಸಿನಿಮಾರಂಗದಲ್ಲಿ ಬಯೋಪಿಕ್‌ಗಳ ಹಾವಳಿ ಜೋರಾಗಿದೆ. ಸದ್ಯ ಖ್ಯಾತ ಗಾಯಕಿ ಎಂ.ಎಸ್ ಸುಬ್ಬಲಕ್ಷ್ಮಿ (MS Subbulakshmi) ಅವರ ಜೀವನ ಚರಿತ್ರೆಯನ್ನು ಸಿನಿಮಾ ರೂಪದಲ್ಲಿ ತೋರಿಸಲು ಪ್ರತಿಷ್ಠಿತ ಸಂಸ್ಥೆಯೊಂದು ಮುಂದಾಗಿದೆ. ಖ್ಯಾತ ಗಾಯಕಿ ಸುಬ್ಬಲಕ್ಷ್ಮಿ ಪಾತ್ರದಲ್ಲಿ ಮಹಾನಟಿ ಕೀರ್ತಿ ಸುರೇಶ್ (Keerthy Suresh) ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಹಾಗಾಗಿ ಗಾಯಕಿ ಎಂ.ಎಸ್ ಸುಬ್ಬಲಕ್ಷ್ಮಿ ಬಯೋಪಿಕ್ (MS Subbulakshmi Biopic) ಮಾಡಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಗಾಯಕಿ ಸುಬ್ಬಲಕ್ಷ್ಮಿ ಪಾತ್ರಕ್ಕೆ ಕೀರ್ತಿ ಸುರೇಶ್ ಜೀವ ತುಂಬಲಿದ್ದಾರೆ ಎನ್ನಲಾಗಿದೆ. ಹೀಗೊಂದು ಸುದ್ದಿ ಕಾಲಿವುಡ್ ಚರ್ಚೆ ಶುರುವಾಗಿದೆ. ಆದರೆ ಚಿತ್ರದ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದನ್ನೂ ಓದಿ:ನಾನು ಸಿಂಗಲ್‌, ಹೊಸ ಸಂಬಂಧಕ್ಕೆ ಸಿದ್ಧಳಾಗಿದ್ದೇನೆ ಎಂದು ಬ್ರೇಕಪ್‌ ಬಗ್ಗೆ ತಿಳಿಸಿದ ‘ಸಲಾರ್‌’ ನಟಿ

ತಮಿಳುನಾಡಿನ ಮಧುರೈನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಸುಬ್ಬಲಕ್ಷ್ಮಿ ಜಗತ್ತೇ ಹೆಮ್ಮೆ ಪಡುವ ಗಾಯಕಿಯಾದದ್ದು ಹೇಗೆ? ಆಕೆ ಎದುರಿಸಿದ ಸವಾಲುಗಳು ಮತ್ತು ಆಕೆಯ ಜೀವನದಲ್ಲಿ ನಡೆದ ದುರಂತ ಘಟನೆಗಳ ಹಿನ್ನೆಲೆಯಲ್ಲಿ ಚಿತ್ರ ಮೂಡಿ ಬರಲಿದೆ. ಸುಬ್ಬಲಕ್ಷ್ಮಿ ಪಾತ್ರಕ್ಕೆ ಕೀರ್ತಿ ಸೂಕ್ತ ಎಂದೆನಿಸಿ ಅವರನ್ನು ಚಿತ್ರತಂಡ ಸಂಪರ್ಕಿಸಿದೆ ಎನ್ನಲಾಗಿದೆ. ಅಧಿಕೃತ ಮಾಹಿತಿಗಾಗಿ ಕಾದುನೋಡಬೇಕಿದೆ.

ಸೌತ್ ನಟಿ ಕೀರ್ತಿ ಸುರೇಶ್ ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರವೇ ತಾವಾಗಿ ನಟಿಸುವ ಪ್ರತಿಭಾನ್ವಿತ ನಟಿ. ಅದಕ್ಕೆ ತಾಜಾ ಉದಾಹರಣೆ ಅಂದರೆ, ‘ಮಹಾನಟಿ’ (Mahanati) ಸಿನಿಮಾ ಎಂದರೆ ತಪ್ಪಾಗಲಾರದು. ಈ ಸಿನಿಮಾದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಕೀರ್ತಿ ಪಡೆದರು.

ಸದ್ಯ ಬಾಲಿವುಡ್‌ನಲ್ಲಿ (Bollywood) ಇಬ್ಬರು ಸ್ಟಾರ್ ನಟರ ಚಿತ್ರಗಳಿಗೆ ಕೀರ್ತಿ ನಾಯಕಿಯಾಗಿದ್ದಾರೆ. ತೆಲುಗಿನಲ್ಲಿಯೂ ನಟಿಗೆ ಬೇಡಿಕೆಯಿದೆ.