ಕಂಗನಾಗೆ ‘ಹುಚ್ಚಿ’ ಎಂದು ಕರೆದವರು ಯಾರು?: ಬಾಲಿವುಡ್ ಕುರಿತು ಜನ್ಮಜಾಲಾಡಿದ ನಟಿ

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ (Kangana Ranaut) ಮತ್ತೊಮ್ಮೆ ಬಾಲಿವುಡ್ ಮೇಲೆ ಹರಿಹಾಯ್ದಿದ್ದಾರೆ. ಬಿಟೌನ್ ಇತಿಹಾಸವನ್ನು ಒಂದೊಂದಾಗಿ ಬಿಚ್ಚಿಟ್ಟಿದ್ದಾರೆ. ತಮ್ಮನ್ನು ಹುಚ್ಚಿ (Mad) ಎಂದು ಕರೆದು, ಜೈಲಿಗೆ ಕಳುಹಿಸುವ ಹುನ್ನಾರ ನಡೆದ ಬಗ್ಗೆಯೂ ಅವರು ಮಾತನಾಡಿದ್ದಾರೆ. ನಾನು ನೇರ, ದಿಟ್ಟ ಹುಡುಗಿ. ತಪ್ಪನ್ನು ತಪ್ಪು ಎಂದೇ ಹೇಳುತ್ತೇನೆ. ಹಾಗಾಗಿ ನನಗೆ ಹುಚ್ಚಿ ಪಟ್ಟ ಕಟ್ಟಲಾಯಿತು ಎಂದಿದ್ದಾರೆ.

ಬಾಲಿವುಡ್ (Bollywood) ಮಾಫಿಯಾ ಬಗ್ಗೆ ನಾನು ಹೆಚ್ಚೆಚ್ಚು ಮಾತನಾಡಲು ಶುರು ಮಾಡಿದೆ. ಇದೊಂದು ದೊಡ್ಡ ಮಾಫಿಯಾ. ಅವರು ಹೇಳಿದಂತೆ ಕೇಳಿದರೆ ಮಾತ್ರ ಬದುಕಲು ಸಾಧ್ಯ. ಅವರ ವಿರುದ್ಧ ಈಜುತ್ತೇನೆ ಎಂದರೆ ತೊಂದರೆಗಳು ಶುರುವಾಗುತ್ತವೆ. ನಾನು ತೊಂದರೆಗಳನ್ನು ಅನುಭವಿಸಿದ್ದೇ ಅವರ ವಿರುದ್ಧ ಮಾತನಾಡಿದೆ ಎನ್ನುವ ಕಾರಣಕ್ಕಾಗಿ. ನಾನು ಬೇರೆಯ ಹುಡುಗಿಯರ ತರಹ ಅಲ್ಲ. ಹಾಗಾಗಿ ನನ್ನನ್ನು ದುರಂಹಕಾರಿ ಅಂತಾನೂ ಕರೆದರು ಎನ್ನುತ್ತಾರೆ ಕಂಗನಾ. ಇದನ್ನೂ ಓದಿ: ಪೂಜಾ ಗಾಂಧಿ ಕನ್ನಡ ಪ್ರೀತಿಗೆ ಭೇಷ್ ಎಂದ ಕನ್ನಡಿಗರು

ಮುಂದುವರೆದು ಮಾತನಾಡಿರುವ ಅವರು, ‘ನಾನು ಹೀರೋಗಳ ರೂಮ್ ಬಾಗಿಲು ತಟ್ಟುವುದಿಲ್ಲ. ಹಲ್ಲು ಕಿರಿದು ನಿಲ್ಲುವುದಿಲ್ಲ. ಐಟಂ ಡಾನ್ಸ್ ಮಾಡುವುದಿಲ್ಲ. ನಿರ್ಮಾಪಕರು ಕರೆದಲ್ಲಿಗೆ ಹೋಗುವುದಿಲ್ಲ. ಮದುವೆ, ಸಮಾರಂಭಗಳಿಗೆ ಹೋಗಿ ಡಾನ್ಸ್ ಕೂಡ ಮಾಡುವುದಿಲ್ಲ. ಹೀಗಾಗಿ ಬಾಲಿವುಡ್ ಮಂದಿಗೆ ನಾನು ಹುಚ್ಚಿ. ಹುಚ್ಚರ ಸಂತೆಯಲ್ಲಿ ಚೆನ್ನಾಗಿದ್ದವರೇ ಹುಚ್ಚರು ಅಲ್ಲವೆ?’ ಎಂದು ಪ್ರಶ್ನೆ ಮಾಡಿದ್ದಾರೆ.

ಬಾಲಿವುಡ್ ನಟರು, ನಟಿಯರು, ನಿರ್ದೇಶಕರು ಮತ್ತು ನಿರ್ಮಾಪಕರ ಬಗ್ಗೆ ಆಗಾಗ್ಗೆ ಹೀಗೆ ಸಿಡುಕುತ್ತಲೇ ಇರುತ್ತಾರೆ ಕಂಗನಾ. ಅವರ ಸಿಡುಕಿಗೆ ಒಂದೊಂದು ಬಾರಿ ಕಾರಣವೂ ಇರುವುದಿಲ್ಲ. ಆದರೂ, ಟಾಂಗ್ ಕೊಡುತ್ತಾ ಬಾಲಿವುಡ್ ಬಣ್ಣ ಬಯಲು ಮಾಡುತ್ತಾರೆ. ಈ ಬಾರಿ ಮತ್ತಷ್ಟು ರೊಚ್ಚಿಗೆದಿದ್ದಾರೆ.

Comments

Leave a Reply

Your email address will not be published. Required fields are marked *