ಪಿಂಕ್ ನೋಟಿನ ಹಿಂದೆ ಬಿದ್ದ ಭಾವನಾ : ದ್ವಿಪಾತ್ರದಲ್ಲಿ ಜಾಕಿ ಬೆಡಗಿ

ಜಾಕಿ ಖ್ಯಾತಿಯ ಭಾವನಾ ಮತ್ತೆ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದಾರೆ. ಭಜರಂಗಿ 2 ಸಿನಿಮಾದ ನಂತರ ಅವರಿಗೆ ಮತ್ತಷ್ಟು ಅವಕಾಶಗಳು ಬರುತ್ತಿದ್ದು, ಇದೀಗ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಪಿಂಕ್ ನೋಟ್ ಎಂದು ಹೆಸರು ಇಡಲಾಗಿದೆ. ಇದನ್ನೂ ಓದಿ : ಮಗುವಿಗಾಗಿ ಪ್ಲ್ಯಾನ್ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

ದುಡ್ಡಿನ ಹಿಂದೆ ಬಿದ್ದಾಗ ಮನುಷ್ಯ ಏನೆಲ್ಲ ಆಗುತ್ತಾನೆ ಎನ್ನುವ ಕುರಿತಾದ ಕಥಾ ಹಂದರ ಈ ಸಿನಿಮಾದಲ್ಲಿದ್ದು, ಮಂಗಳೂರಿನಲ್ಲಿ ನಡೆದ ನೈಜ ಘಟನೆಯನ್ನು ಈ ಸಿನಿಮಾಗಾಗಿ ಬಳಸಿಕೊಂಡಿದ್ದಾರಂತೆ ನಿರ್ದೇಶಕರು. ಮಧ್ಯಮ ವರ್ಗದ ಕುಟುಂಬದಲ್ಲಿ ನಡೆದ ಘಟನೆ ಇದಾಗಿದ್ದು, ಭಾವನಾ ಕೂಡ ಮಧ್ಯಮ ವರ್ಗದ ಅಕ್ಕ-ತಂಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ವಿವಾದ : ಶಶಿ ತರೂರು ಮತ್ತು ಅನುಪಮ್ ಖೇರ್ ಜಟಾಪಟಿ

ದಿಗಂತ್ ಅಲಿಯಾಸ್ ರಕ್ಷಣ್ ಈ ಸಿನಿಮಾದ ನಿರ್ದೇಶಕರಾಗಿದ್ದು, ಅಮ್ಮ ಎಂಟರ್ ಟೇನ್ಮೆಂಟ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ತಯಾರಾಗಲಿದೆ. ಬುಧವಾರವಷ್ಟೇ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಮುಹೂರ್ತವಾಗಿದ್ದು, ಮೊದಲ ದೃಶ್ಯಕ್ಕೆ ಶಿವಮೂರ್ತಿ ಮುರಘಾ ಶರಣರು ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಇದನ್ನೂ ಓದಿ : ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ

‘2010ರಂದು ಮಂಗಳೂರಿನಲ್ಲಿ ನಡೆದ ಘಟನೆಯನ್ನು ನಿರ್ದೇಶಕರು ಹೇಳಿದಾಗ ಥ್ರಿಲ್ ಆಯಿತು. ದ್ವಿಪಾತ್ರ ಮಾಡುವುದು ಸವಾಲಿನ ಕೆಲಸವಾದರೂ, ಇಂತಹ ಪಾತ್ರದಲ್ಲಿ ನಟಿಸುವುದು ಥ್ರಿಲ್ ಅನಿಸುತ್ತದೆ’ ಎಂದಿದ್ದಾರೆ ಭಾವನಾ. ಪಾತ್ರದ ಹಿನ್ನೆಲೆ ಮತ್ತು ಕಥೆಯ ಗುಟ್ಟವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

ಸದ್ಯ ನಾಯಕಿಯನ್ನು ಮಾತ್ರ ಆಯ್ಕೆ ಮಾಡಿದ್ದು, ನಾಯಕನ ಪಾತ್ರವನ್ನು ಮುಂದಿನ ದಿನಗಳಲ್ಲಿ ಬಹಿರಂಗ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಶ್ರೀನಿವಾಸ್ ಪ್ರಭು, ಪದ್ಮಜರಾವ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಬಹುತೇಕ ಕಥೆಯು ಅರಬ್ ಪ್ರಾಂತ್ಯದಲ್ಲಿ ನಡೆಯುವುದರಿಂದ ದುಬೈನ ರಸಾಸೆಲ್ ಖೈಮ್ ದಲ್ಲಿ ಶೇಕಡಾ ಅರವತ್ತರಷ್ಟು ಶೂಟಿಂಗ್ ಮಾಡುತ್ತಾರಂತೆ ನಿರ್ದೇಶಕರು.

Comments

Leave a Reply

Your email address will not be published. Required fields are marked *