ಬೆಂಗಳೂರು: ‘ಅಮೆರಿಕಾ ಅಮೆರಿಕಾ’ ಚಿತ್ರದಿಂದ ನಾಯಕಿಯಾಗಿ ಗುರುತಿಸಿಕೊಂಡ ನಟಿ ಹೇಮಾ ಪಂಚಮುಖಿ ಗುರುವಾರ ಎರಡನೇ ಮಗುವಿಗೆ ಜನ್ಮ ನೀಡಿದರು.
ಹೇಮಾ ಕೆಲವು ತಿಂಗಳ ಹಿಂದೆ ತಮ್ಮ ಮನೆಯವರ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸೀಮಂತ ಮಾಡಿಕೊಂಡಿದ್ದರು. ಆದರೆ ಗುರುವಾರ ಅಂದರೆ ಸೆಪ್ಟೆಂಬರ್ 6ರಂದು ಹೇಮಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈ ವಿಷಯವನ್ನು ಹೇಮಾ ಹಾಗೂ ಅವರ ಪತಿ ಪ್ರಶಾಂತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಹೇಮಾ ಅವರಿಗೆ ಈಗಾಗಲೇ ಒಬ್ಬಳು ಮಗಳಿದ್ದಾರೆ. ಹೇಮಾ ಭರತನಾಟ್ಯ ಅಭಿನೇತ್ರಿಯಾಗಿದ್ದು, ಅವರ ಮಗಳು ಕೂಡ ವಿದ್ಯಾಭ್ಯಾಸದ ಜೊತೆ ಭರತನಾಟ್ಯ ಕೂಡ ಕಲಿಯುತ್ತಿದ್ದಾಳೆ. ಅಲದೇ ಆಕೆ ಚಿಕ್ಕ ವಯಸ್ಸಿನಿಂದಲೂ ತನ್ನ ತಾಯಿಯ ಬಳಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾಳೆ.

ಹೇಮಾ ‘ರಂಗೋಲಿ’ ಚಿತ್ರದ ನಟ ಪ್ರಶಾಂತ್ ಗೋಪಾಲ್ ಅವರ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದರು. ಸದ್ಯ ಹೇಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ ವಿಷಯ ತಿಳಿದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ತಿಳಿಸುತ್ತಿದ್ದಾರೆ.
ಹೇಮಾ ಅಮೆರಿಕಾ ಅಮೆರಿಕಾ, ದೊರೆ, ಸಂಭ್ರಮ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ಚಿತ್ರರಂಗದಿಂದ ದೂರ ಉಳಿದಿರುವ ಹೇಮಾ ಹಾಗೂ ಅವರ ಪತಿ ಪ್ರಶಾಂತ್ ನಾಟ್ಯ ಶಾಲೆ ಮೂಲಕ ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply