ಹಾಟ್ ಆಗಿ ಕಾಣಿಸಿಕೊಂಡ ‘ಹೆಬ್ಬುಲಿ’ ನಾಯಕಿ

ನ್ನಡದ ‘ಹೆಬ್ಬುಲಿ’ (Hebbuli) ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಬಹುಭಾಷಾ ನಟಿ ಅಮಲಾ ಪೌಲ್ (Amala Paul) ಅವರು ಈಗ ವೇಕೆಷನ್ ಮೂಡ್‌ನಲ್ಲಿದ್ದಾರೆ. ಟ್ರಾವೆಲ್ ಮೂಡ್‌ನಲ್ಲಿರುವ ಹಾಟ್ ಫೋಟೋಗಳು, ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ.

ಮಾಲಿವುಡ್ (Mollywood) ಬೆಡಗಿ ಅಮಲಾ ಅವರು ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಪಡ್ಡೆಹುಡುಗರ ನಿದ್ದೆಕದ್ದಿದ್ದಾರೆ. ಮಹಿಳಾ ಪ್ರಧಾನ ಪಾತ್ರಗಳ ಮಾಡುವ ಮೂಲಕ ಮನಗೆದ್ದಿದ್ದಾರೆ. ವೈಯಕ್ತಿಕ ವಿಚಾರಕ್ಕೆ ಬಂದರೆ, ಎ.ಎಲ್ ವಿಜಯ್ (A.L Vijay) ಅವರನ್ನು ಪ್ರೀತಿಸಿ, ಮದುವೆಯಾಗಿದ್ದರು. ಬಳಿಕ ಹೊಂದಾಣಿಕೆ ಸಮಸ್ಯೆಯಿಂದ ಡಿವೋರ್ಸ್ (Divorce) ಪಡೆದು ಈಗ ಒಂಟಿಯಾಗಿ ನಟಿ ಜೀವನ ಸಾಗಿಸುತ್ತಿದ್ದಾರೆ.

ಸಿಂಗಲ್ ಲೈಫ್‌ನ ಮಜಾ ಮಾಡ್ತಿರುವ ಈ ನಟಿಗೆ ಟ್ರಾವೆಲಿಂಗ್ ಹೋಗುವ ಕ್ರೇಜ್ ಇದೆ. ದೇಶ- ವಿದೇಶಗಳಿಗೆ ಆಗಾಗ ಜರ್ನಿ ಮಾಡುತ್ತಲೇ ಇರುತ್ತಾರೆ. ಈಗ ಬೆಟ್ಟದ ಮೇಲೆ ನಿಂತು ಹಾಟ್ ಆಗಿ ಪೋಸ್ ನೀಡಿದ್ದಾರೆ. ಬಿಳಿ ಬಣ್ಣದ ಉಡುಗೆಯಲ್ಲಿ ಬೋಲ್ಡ್ ಆಗಿ ಅಮಲಾ ಕಾಣಿಸಿಕೊಂಡಿದ್ದಾರೆ.

ಇನ್ನೂ ಕನ್ನಡದ ‘ಹೆಬ್ಬುಲಿ’ ಸಿನಿಮಾದಲ್ಲಿ ಸುದೀಪ್‌ಗೆ (Sudeep) ನಾಯಕಿಯಾಗಿ ಅಮಲಾ ಪೌಲ್ ನಟಿಸಿದ್ದಾರೆ. ಕನ್ನಡದ ಮೊದಲ ಚಿತ್ರದಲ್ಲೇ ನಟಿ, ಅಭಿನಯದ ಮೂಲಕ ಸೈ ಎನಿಸಿಕೊಂಡಿದ್ದರು. ಇದಾದ ಬಳಿಕ ಮತ್ತೆ ಯಾವುದೇ ಕನ್ನಡದ ಚಿತ್ರದಲ್ಲಿ ಅವರು ನಟಿಸಿಲ್ಲ. ಇದನ್ನೂ ಓದಿ:ಎರಡೇ ಎರಡು ದಿನ ವೇಟ್ ಮಾಡಿ ಪ್ಲೀಸ್: ನಟ ಅನಿರುದ್ಧ ಮನವಿ

ಅಮಲಾ ಪೌಲ್ ಕೈಯಲ್ಲಿ ಮಲಯಾಳಂ, ಹಿಂದಿ ಸೇರಿದಂತೆ ಹಲವು ಸಿನಿಮಾಗಳಿವೆ. ಬಗೆ ಬಗೆಯ ಪಾತ್ರದ ಮೂಲಕ ಗಮನ ಸೆಳೆಯೋದ್ದಕ್ಕೆ ರೆಡಿಯಾಗಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]