ಮತ್ತೆ ದೇಸಾಯಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಹರ್ಷಿಕಾ ಪೂಣಚ್ಚ!

ಬೆಂಗಳೂರು: ವರ್ಷಾಂತರಗಳ ಹಿಂದೆ ತೆರೆ ಕಂಡಿದ್ದ ರೇ ಚಿತ್ರದ ನಂತರ ಖ್ಯಾತ ನಿರ್ದೇಶಕರಾದ ಸುನಿಲ್ ಕುಮಾರ್ ದೇಸಾಯಿ ಸ್ವಲ್ಪ ವಿರಾಮ ತೆಗೆದುಕೊಂಡಂತಿದ್ದರು. ಆ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಹರ್ಷಿಕಾ ಪೂಣಚ್ಚ ಕೂಡಾ ಹಾಗೆಯೇ ಕಣ್ಮರೆಯಾದಂತಿದ್ದರು. ಆದರೀಗ ಹರ್ಷಿಕಾ ಸುನಿಲ್ ಕುಮಾರ್ ದೇಸಾಯಿ ಅವರ ಚಿತ್ರದ ಮೂಲಕವೇ ಮತ್ತೆ ಮರಳಿದ್ದಾರೆ.

ಕನ್ನಡ ಚಿತ್ರ ರಂಗದ ಪಾಲಿಗೆ ಮೈಲಿಗಲ್ಲಿನಂಥಾ ಚಿತ್ರಗಳನ್ನು ನಿರ್ದೇಶನ ಮಾಡುವ ಮೂಲಕವೇ ಹೆಸರಾಗಿರುವವರು ಸುನಿಲ್ ಕುಮಾರ್ ದೇಸಾಯಿ. ಅವರು ದಶಕಗಳ ಹಿಂದೆ ನಿರ್ದೇಶನ ಮಾಡಿದ್ದ ಉತ್ಕರ್ಷ ಚಿತ್ರದ ಹೆಸರಿನಲ್ಲಿಯೇ ಈಗ ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದರಲ್ಲಿನ ಮುಖ್ಯ ಪಾತ್ರದಲ್ಲಿ ಹರ್ಷಿಕಾ ನಟಿಸುತ್ತಿದ್ದಾರೆ.

ವರ್ಷದ ಹಿಂದೆ ರಮೇಶ್ ಅರವಿಂದ್ ಮುಖ್ಯಭೂಮಿಕೆಯಲ್ಲಿದ್ದ ರೇ ಚಿತ್ರ ಒಂದಷ್ಟು ಸದ್ದು ಮಾಡಿತ್ತಲ್ಲಾ? ಆ ಚಿತ್ರದಲ್ಲಿ ಹರ್ಷಿಕಾ ಕೂಡಾ ನಟಿಸಿದ್ದರು. ಈಗ ಮತ್ತೆ ಒಂದು ಥ್ರಿಲ್ಲರ್ ಕಥಾನಕವನ್ನು ಹೊಂದಿರುವ ಉತ್ಕರ್ಷ ಚಿತ್ರದಲ್ಲಿಯೂ ಹರ್ಷಿಕಾ ನಟಿಸಿದ್ದಾರಂತೆ. ಸದ್ದಿಲ್ಲದೇ ಸುನಿಲ್ ಕುಮಾರ್ ದೇಸಾಯಿ ಅವರು ಮೈಸೂರು ಸುತ್ತಮುತ್ತಲ ಸುಂದರ ಪ್ರದೇಶಗಳಲ್ಲಿ ಚಿತ್ರೀಕರಣವನ್ನೂ ನಡೆಸಿದ್ದಾರಂತೆ. ಇದರಲ್ಲಿ ಹರ್ಷಿಕಾ ಪಾತ್ರವೇನೆಂಬುದು ನಿಗೂಢವಾಗಿದೆಯಾದರೂ ಈ ಮೂಲಕವೇ ತನಗೆ ಬ್ರೇಕ್ ಸಿಗಲಿದೆ ಎಂಬ ನಿರೀಕ್ಷೆ ಹರ್ಷಿಕಾಗಿದೆ.

Comments

Leave a Reply

Your email address will not be published. Required fields are marked *