ಸ್ಯಾಂಡಲ್‌ವುಡ್ ಬ್ಯೂಟಿ ಹರಿಪ್ರಿಯಾ (Haripriya) ಮತ್ತು ವಸಿಷ್ಠ (Vasista Simha) ಜೋಡಿ ಎಂಗೇಜ್‌ಮೆಂಟ್ ಇಂದು ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ವಿಶೇಷವಾದ ಪೋಸ್ಟ್ ಕೂಡ ಹಂಚಿಕೊಂಡಿದ್ದಾರೆ. ಈ ಮೂಲಕ ವಸಿಷ್ಠ ಅವರ ಪ್ರೀತಿಗೆ ನಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಎಂಗೇಜ್‌ಮೆಂಟ್ ಸುದ್ದಿ ಸೆನ್ಸೆಷನ್ ಕ್ರಿಯೆಟ್ ಮಾಡಿದೆ. ಇಷ್ಟೇಲ್ಲಾ ಸುದ್ದಿ ಸದ್ದು ಮಾಡ್ತಿದ್ದರು ಕೂಡ ಇಬ್ಬರು ಗಪ್‌ಚುಪ್ ಅಂತಾ ಸೈಲೆಂಟ್ ಆಗಿದ್ದಾರೆ. ಗುಟ್ಟಾಗಿ ನಿಶ್ವಿತಾರ್ಥ ಮಾಡಿಕೊಂಡಿರುವ ಬೆನ್ನಲ್ಲೇ ಸಿಂಹನ ಕೈಯಲ್ಲಿ ಮುದ್ದಾದ ಹೆಣ್ಣು ಬಾಲೆ ಇರುವ ಫೋಟೋ ಶೇರ್ ಮಾಡಿ, ಪರೋಕ್ಷವಾಗಿ ಪ್ರೀತಿಯ ಬಗ್ಗೆ ನಟಿ ಸೂಚನೆ ನೀಡಿದ್ದಾರೆ.
View this post on Instagram
ಚಂದನವನದ ಸದ್ಯದ ಹಾಟ್ ನ್ಯೂಸ್ ಎಂದರೆ ಹರಿಪ್ರಿಯಾ ಮತ್ತು ವಸಿಷ್ಠ ಜೋಡಿಯ ಪ್ರೇಮ ಕಹಾನಿ. ಕಳೆದ ಕೆಲವು ದಿನಗಳಿಂದ ಈ ಜೋಡಿಯದ್ದೇ ಸಖತ್ ಸುದ್ದಿಯಾಗುತ್ತಿದ್ದರು. ಯಾವುದೇ ಪ್ರತಿಕ್ರಿಯೆ ನೀಡದೇ ಸೈಲೆಂಟ್ ಆಗಿ ಇದೀಗ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿದ್ದಾರೆ. ಇದನ್ನೂ ಓದಿ: `ಕಾಂತಾರ’ ವರಾಹ ರೂಪಂ ಹಾಡಿನ ವಿವಾದಕ್ಕೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ

ವಸಿಷ್ಠ ಅವರಿಗಿಂತ ಹರಿಪ್ರಿಯಾ ಮೂರು ವರ್ಷ ಸಣ್ಣವರು. ಇಬ್ಬರು ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದೆ.

Leave a Reply