ಮಾತುಕೊಟ್ಟಂತೆ ಗುಡ್ ನ್ಯೂಸ್ ಕೊಟ್ಟ ನಟಿ ಹರಿಪ್ರಿಯಾ

ರಡ್ಮೂರು ದಿನಗಳ ಹಿಂದೆಯಷ್ಟೇ ಸೋಷಿಯಲ್ ಮೀಡಿಯಾ ಮೂಲಕ ಗುಡ್ ನ್ಯೂಸ್ ಕೊಡುವುದಾಗಿ ನಟಿ ಹರಿಪ್ರಿಯಾ (Haripriya) ಹೇಳಿಕೊಂಡಿದ್ದರು. ಮದುವೆಯಾಗಿ ಎರಡು ತಿಂಗಳು ಕೂಡ ಕಳೆದಿಲ್ಲ ಏನಿರಬಹುದಪ್ಪಾ ಗುಡ್ ನ್ಯೂಸ್ (Good News) ಎಂದು ಅಭಿಮಾನಿಗಳು ತಲೆಕೆರೆದುಕೊಂಡಿದ್ದರು. ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ ಕೂಡ ಮಾಡಿದ್ದರು. ಪತಿ ವಸಿಷ್ಠ ಸಿಂಹ (Vasishtha Simha) ಅವರನ್ನೂ ಎಳೆದು ತಂದಿದ್ದರು.

ಹರಿಪ್ರಿಯಾ ನಾನಾ ರೀತಿಯಲ್ಲಿ ಅರ್ಥ ಕೊಡುವಂತೆ ಪೋಸ್ಟ್ ಮಾಡಿದ್ದರಿಂದ, ಗುಡ್ ನ್ಯೂಸ್ ಯಾವುದರ ಬಗ್ಗೆ ಇರಬಹುದು ಎನ್ನುವ ಚರ್ಚೆ ಕೂಡ ಶುರುವಾಗಿತ್ತು. ಸಿನಿಮಾ ಬಗ್ಗೆ ಹೇಳ್ತಾರಾ? ವೈಯಕ್ತಿಕ ಜೀವನದ ಬಗ್ಗೆ ಸುದ್ದಿ ಕೊಡ್ತಾರಾ? ಅಥವಾ ಬೇರೆ ಯಾವುದರ ಬಗ್ಗೆ ಹೇಳಬಹುದು ಎನ್ನುವ ಅಂದಾಜನ್ನಂತೂ ಕೆಲವರು ಮಾಡಿದ್ದರು. ಈ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗುವಂತಹ ಸುದ್ದಿಯನ್ನು ಹರಿಪ್ರಿಯಾ ನೀಡಿದ್ದಾರೆ. ಇದನ್ನೂ ಓದಿ: ತೆರೆಗೆ ಅಪ್ಪಳಿಸಲು ಸಜ್ಜಾದ ರಕ್ಷಿತ್‌ ನಟನೆಯ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ

ಈ ಗುಡ್ ನ್ಯೂಸ್ ನಿಜವಾಗಿಯೂ ಶುಭಸುದ್ದಿನಾ? ಅಥವಾ ಅಭಿಮಾನಿಗಳಿಗೆ ಆತಂಕ ಮೂಡಿಸುವಂತಹ ಸುದ್ದಿನಾ ಗೊತ್ತಿಲ್ಲ. ಒಟ್ಟಿನಲ್ಲಿ ಗುಡ್ ನ್ಯೂಸ್ ಎಂದು ಹೇಳುತ್ತಾ, ತಾವೊಂದು ಯೂಟ್ಯೂಬ್ ಚಾನೆಲ್ ಶುರು ಮಾಡುತ್ತಿರುವ ಕುರಿತು ಹಂಚಿಕೊಂಡಿದ್ದಾರೆ. ಈ ಯೂಟ್ಯೂಬ್ ಮೂಲಕ ಅಭಿಮಾನಿಗಳಿಗೆ ಹೊಸ ಹೊಸ ವಿಷಯವನ್ನು ಹೇಳಲಿದ್ದಾರಂತೆ. ಅಲ್ಲದೇ, ಅಭಿಮಾನಿಗಳ ಜೊತೆ ಸಂವಹನವನ್ನೂ ಇಟ್ಟುಕೊಳ್ಳುತ್ತಾರಂತೆ.

ಮದುವೆಯ ನಂತರ ಹರಿಪ್ರಿಯಾ ಸಿನಿಮಾ ರಂಗದಲ್ಲಿ ಮುಂದುವರೆಯುತ್ತಾರಾ? ಅಥವಾ ಬ್ರೇಕ್ ತಗೆದುಕೊಳ್ಳುತ್ತಾರೆ ಎನ್ನುವ ಗೊಂದಲ ಕೂಡ ಇದೆ. ಯೂಟ್ಯೂಬ್ ಚಾನೆಲ್ ಶುರು ಮಾಡಿ, ಸಿನಿಮಾ ರಂಗದಿಂದ ದೂರ ಆಗುವಂತಹ ಪ್ಲ್ಯಾನ್ ಏನಾದರೂ ಮಾಡಿರಬಹುದಾ? ಈ ಕುರಿತು ಯಾವುದೇ ಕ್ಲ್ಯಾರಿಟಿ ನೀಡಿಲ್ಲ ಹರಿಪ್ರಿಯಾ.

Comments

Leave a Reply

Your email address will not be published. Required fields are marked *