ಬೆಂಗಳೂರು: ಬಿಗ್‍ಬಾಸ್ ಖ್ಯಾತಿಯ ನಟಿ ಗೀತಾ ಭಾರತಿ ಭಟ್ ಅವರು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಇರುವ ನಟಿ ಮಣಿಯರ ಸಾಲಿನಲ್ಲಿ ಇದ್ದಾರೆ. ಹಾಡಿನ ವೀಡಿಯೋಗಳು ಮೂಲಕ ಸದ್ದು ಮಾಡುತ್ತಿರುತ್ತಾರೆ. ಈಗ ಈ ನಟಿ ದೇಹದ ತೂಕ ಇಳಿಸಿಕೊಳ್ಳಲು ಮುಂದಾಗಿದ್ದಾರೆ.

ಅತಿಯಾದ ದೇಹದ ತೂಕದಿಂದಲೇ ಸಾಕಷ್ಟು ಅವಕಾಶಗಳನ್ನು ಕಳೆದುಕೊಂಡಿರುವ ಈ ನಟಿ ಈಗ ದೇಹದ ತೂಕ ಇಳಿಸಿಕೊಳ್ಳುವತ್ತ ಗಮನ ಹರಿಸಿದ್ದಾರೆ. ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಾವು ವರ್ಕೌಟ್ ಮಾಡುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಒಂದೊಂದು ದಿನವೂ ನಿಮ್ಮದೇ ದಾಖಲೆಯನ್ನು ಒಡೆದು ಹಾಕುತ್ತಿರಿ, ಚೆನ್ನಾಗಿದೆ ಎಂದು ಬಿಗ್‍ಬಾಸ್ ಖ್ಯಾತಿಯ ಕೆ ಪಿ ಅರವಿಂದ್ ಕಾಮೆಂಟ್ ಮಾಡಿದ್ದಾರೆ.
View this post on Instagram
ಕಳೆದ ಕೆಲವು ದಿನಗಳಿಂದ ಜಿಮ್‍ನತ್ತ ಮುಖ ಮಾಡಿದ್ದಾರೆ. ತಮ್ಮ ವರ್ಕೌಟ್ ವೀಡಿಯೋ ಹಂಚಿಕೊಳ್ಳುತ್ತಿರುವ ನಟಿ ಜಿಮ್‍ನಲ್ಲಿನ ಅನುಭವಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಕಿರಣ್ ಸಾಗರ್ ಎಂಬ ಫಿಟ್ನೆಸ್ ಕೋಚ್ ಬಳಿ ತರಬೇತಿ ಪಡೆಯುತ್ತಿದ್ದಾರೆ. ತಮ್ಮ ದೇಹದ ತೂಕ ಇಳಿಸಿಕೊಳ್ಳಲು ತುಂಬಾ ಶ್ರಮ ಪಟ್ಟು ಬೆವರು ಸುರಿಸುತ್ತಿದ್ದಾರೆ. ಇದನ್ನೂ ಓದಿ: ಕುಚ್ಚಲಕ್ಕಿ ರೊಟ್ಟಿ ಮಾಡಿದ ರಾಬರ್ಟ್ ನಟಿ ಆಶಾ ಭಟ್
View this post on Instagram
ಕಿರುತೆರೆಯಲ್ಲಿ ನಟಿಸುವ ಮೂಲಕ ಮುನ್ನಲೆಗೆ ಬಂದ ಗೀತಾ ಭಾರತಿ ಭಟ್ ಅವರು ತಮ್ಮದೇ ಆಗಿರುವ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಬಿಗ್‍ಬಾಸ್ ಮನೆಯಿಂದ ಹೊರ ಬಂದ ನಂತರ ಸಾಕಷ್ಟು ಫೋಟೋಶೂಟ್‍ಗಳಿಗೆ ಪೋಸ್ ಕೊಟ್ಟಿದ್ದಾರೆ. ನಟಿ ತಮನ್ನಾ ಭಾಟಿಯಾ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ. ಗುತುರ್ಂದಾ ಸೀತಾಕಾಲಂ ಸಿನಿಮಾದಲ್ಲಿ ಗೀತಾ ಭಾರತಿ ನಟಿಸುತ್ತಿದ್ದಾರೆ.

Leave a Reply