ಅರವಿಂದ್- ದಿವ್ಯಾ ಉರುಡುಗ ಪ್ರೀತಿಗೆ 2 ವರ್ಷಗಳ ಸಂಭ್ರಮ

ಬಿಗ್ ಬಾಸ್ ಶೋ (Bigg Boss Kannada) ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಜೋಡಿ ದಿವ್ಯಾ-ಅರವಿಂದ್ ಕೆ.ಪಿ (Aravind Kp) ಅವರ ಪ್ರೀತಿಗೆ ಇದೀಗ 2 ವರ್ಷಗಳ ಸಂಭ್ರಮವಾಗಿದ್ದು, ಸ್ಪೆಷಲ್ ವೀಡಿಯೋವನ್ನ ನಟಿ ದಿವ್ಯಾ ಉರುಡುಗ (Divya Uruduga) ಇದೀಗ ಹಂಚಿಕೊಂಡಿದ್ದಾರೆ.

ದೊಡ್ಮನೆಯ ಲವ್ ಬರ್ಡ್ಸ್ ದಿವ್ಯಾ ಉರುಡುಗ – ಅರವಿಂದ್ ಕೆಪಿ ಜೋಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌, ಅಡುಗೆ, ಡ್ಯಾನ್ಸ್‌ ಹೀಗೆ ಒಬ್ಬರಿಗೊಬ್ಬರು ಸಾಥ್‌ ನೀಡುತ್ತಲೇ ಬಂದಿದ್ದರು. ಇವರಿಬ್ಬರ ಸ್ನೇಹ, ಪ್ರೀತಿ ನೋಡಿಯೇ ಅಪಾರ ಅಭಿಮಾನಿಗಳು ಫಿದಾ ಆಗಿದ್ದರು.

ಬಿಗ್ ಬಾಸ್‌ನಲ್ಲಿ ಮೊದಲು ದಿವ್ಯಾ- ಮತ್ತು ಅರವಿಂದ್ ಭೇಟಿಯಾಗಿದ್ದರು. ಇದೀಗ ಇವರಿಬ್ಬರ ಪ್ರೀತಿ ಅನುಬಂಧಕ್ಕೆ 2 ವರ್ಷವಾಗಿದೆ. ಈ ಕುರಿತ ಸ್ಪೆಷಲ್ ವೀಡಿಯೋವನ್ನ ಹಂಚಿಕೊಂಡು ಅಭಿಮಾನಿಗಳಿಗೆ ದಿವ್ಯಾ-ಅರವಿಂದ್‌ ಜೋಡಿ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: `ಸೀತಾ ರಾಮಂ’ ನಾಯಕಿಗೆ ಮದುವೆ ಪ್ರಪೋಸಲ್‌, ಖಡಕ್‌ ಉತ್ತರ ಕೊಟ್ಟ ನಟಿ

 

View this post on Instagram

 

A post shared by DU✨ (@divya_uruduga)

ಬಿಗ್ ಬಾಸ್ ಶೋನ ಸುಂದರ ಕ್ಷಣಗಳನ್ನ ಹೊಂದಿರುವ ಈ ವೀಡಿಯೋ ಇದೀಗ ಅಭಿಮಾನಿಗಳ ಮನಗೆದ್ದಿದೆ. ಇನ್ನೂ ಆದಷ್ಟು ಬೇಗ ಮದುವೆಯ ಬಗ್ಗೆ ಗುಡ್ ನ್ಯೂಸ್ ಕೊಡಿ ಎಂದು ಕಾಮೆಂಟ್ ಮೂಲಕ ಫ್ಯಾನ್ಸ್ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *