ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ದಿವ್ಯಾ ಉರುಡುಗ

‘ಬಿಗ್ ಬಾಸ್’ (Big Boss Kannada 8) ಖ್ಯಾತಿಯ ದಿವ್ಯಾ ಉರುಡುಗ (Divya Uruduga) ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಸೂಪರ್ ಸ್ಟಾರ್ ಆಗಿ ಮಿಂಚಲು ಮಲೆನಾಡಿನ ಬೆಡಗಿ ದಿವ್ಯಾ ಸಜ್ಜಾಗಿದ್ದಾರೆ. ಸದ್ಯ ಹೊಸ ಪ್ರೋಮೋ ಮೂಲಕ ನಟಿ ಗಮನ ಸೆಳೆಯುತ್ತಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ನಿನಗಾಗಿ’ (Ninagagi Serial) ಎಂಬ ಸೀರಿಯಲ್ ಮೂಲಕ ಮತ್ತೆ ಟಿವಿ ಪರದೆಗೆ ಎಂಟ್ರಿ ಕೊಡುತ್ತಿದ್ದಾರೆ. ರಚನಾ ಪಾತ್ರದಲ್ಲಿ ದಿವ್ಯಾ ನಟಿಸುತ್ತಿದ್ದು, ಸ್ಟಾರ್ ಆಗಿ ಮಿಂಚುತ್ತಿರುವ ಸಿನಿಮಾ ನಾಯಕಿಯ ಕಥೆಯನ್ನು ಹೇಳೋಕೆ ಹೊರಟಿದ್ದಾರೆ. ಸಿನಿಮಾ ಸ್ಟಾರ್ ಆಗಿರುವ ರಚನಾ ಬಾಳಿನ ಕಹಾನಿಯನ್ನು ‘ನಿನಗಾಗಿ’ ಸೀರಿಯಲ್ ಮೂಲಕ ಹೇಳಲಿದ್ದಾರೆ.

ಈ ಪ್ರೋಮೋದಲ್ಲಿ ದಿವ್ಯಾ ಲುಕ್ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ‘ನಿನಗಾಗಿ’ ಸೀರಿಯಲ್ ಪ್ರಸಾರದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ದಿವ್ಯಾರ ಹೊಸ ಪ್ರಾಜೆಕ್ಟ್ನಲ್ಲಿ ನೋಡಲು ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಇನ್ನೂ ಓದಿ:ಸದ್ಯದಲ್ಲೇ ಶುರುವಾಗಲಿದೆ ‘ಬಿಗ್ ಬಾಸ್’ ಒಟಿಟಿ- ಪ್ರಸಾರಕ್ಕೆ ಡೇಟ್‌ ಫಿಕ್ಸ್

‘ಅರ್ದಂ ಬರ್ಧ ಪ್ರೇಮ ಕಥೆ’ ಕಳೆದ ವರ್ಷ ರಿಲೀಸ್ ಆಗಿತ್ತು. ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಜೋಡಿಯಾಗಿ ನಟಿಸಿದ್ದರು. ಈಗ ಕಿರುತೆರೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.