ಮಗುವಾಗಿ ಒಂದೇ ತಿಂಗಳಿಗೆ ಹಸುಗೂಸನ್ನು ಶೂಟಿಂಗ್‌ಗೆ ಕರೆದೊಯ್ದ ನಟಿ ದಿವ್ಯಾ ಶ್ರೀಧರ್

ನ್ನಡದ ‘ಆಕಾಶದೀಪ’ (Akashadeepa) ಸೀರಿಯಲ್ ನಟಿ ದಿವ್ಯಾ ಶ್ರೀಧರ್ (Divya Shridhar) ಅವರು ನಟನೆಯ ಜೊತೆ ಮುದ್ದು ಮಗಳ ಪೋಷನೆಯ ಜವಾಬ್ದಾರಿ ಕೂಡ ನಿಭಾಯಿಸುತ್ತಿದ್ದಾರೆ. ಮಗು ಹುಟ್ಟಿದ ಒಂದೇ ತಿಂಗಳಿಗೆ ಹಸುಗೂಸನ್ನ (Child) ಶೂಟಿಂಗ್ (Shooting)  ಕರೆದುಕೊಂಡು ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ. ಎರಡನ್ನು ಹೇಗೆ ನಿಭಾಯಿಸುತ್ತಿದ್ದಾರೆ. ವರ್ಕಿಂಗ್ ವುಮೆನ್ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆಕಾಶದೀಪ, ಅಮ್ಮಾ, ಸೀರಿಯಲ್ ಸೇರಿದಂತೆ ‘ಸನಿಹ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಬಳಿಕ ತಮಿಳು ಸೀರಿಯಲ್‌ನಲ್ಲಿ ನಟಿ ಬ್ಯುಸಿಯಾದರು. ತಮಿಳು ನಟ ಅರ್ನವ್ ಜೊತೆಗಿನ ದಾಂಪತ್ಯದಲ್ಲಿ ಬಿರುಕಿನ ಬೆನ್ನಲ್ಲೇ ನಟಿ ಪೊಲೀಸ್ ಠಾಣೆ ಮಟ್ಟಿಲೇರಿ ಸುದ್ದಿಯಾದರು. ಏಪ್ರಿಲ್ 7ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅದಾಗಿ ಒಂದು ತಿಂಗಳು ಕಳೆಯುತ್ತಿದ್ದಂತೆ, ಮೇ 21ರಿಂದಲೇ ಅವರು ಮತ್ತೆ ಕೆಲಸ ಶುರು ಮಾಡಿದ್ದಾರೆ. ಹಸುಗೂಸನ್ನು ಕೂಡ ಅವರು ಶೂಟಿಂಗ್ ಸ್ಥಳಕ್ಕೆ ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಕೆಲಸ ಮಾಡುವ ಮಹಿಳೆ ಮಾಡದಿರುವ ಕೆಲಸ ಇಲ್ಲ, ಮರಳಿ ಕೆಲಸಕ್ಕೆ ಎಂದು ದಿವ್ಯಾ ಶ್ರೀಧರ್ ಅವರು ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ಶೂಟಿಂಗ್ ಸ್ಥಳಕ್ಕೆ ಬರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ:ಒಳ್ಳೇ ಹುಡುಗ ಪ್ರಥಮ್ ಹನಿಮೂನ್ ಗೆ ಎಲ್ಲಿಗೆ ಹೋಗ್ತಾರೆ?

ತಾಯಿಯ ಸಂಪತ್ತು ಮಗಳು ಎಂದು ಮುದ್ದು ಮಗಳ ಜೊತೆಗೆ ಆಟ ಆಡುತ್ತಿರುವ ವಿಡಿಯೋವನ್ನು ‘ಆಕಾಶದೀಪ’ ನಟಿ ದಿವ್ಯಾ ಹಂಚಿಕೊಂಡಿದ್ದರು. ದಿವ್ಯಾ ಅವರಿಗೆ ಮೊದಲ ಮದುವೆಯಿಂದ ಓರ್ವ ಹೆಣ್ಣು ಮಗಳಿದ್ದಾಳೆ. ಆ ನಂತರ ಪತಿಗೆ ವಿಚ್ಛೇದನ ಕೊಟ್ಟ ಬಳಿಕ ಅವರು ಅರ್ನವ್ (Arnaav) ಎನ್ನುವವರನ್ನು ಮದುವೆಯಾಗಿದ್ದಾರೆ. ಪರಭಾಷೆಯ ಸೀರಿಯಲ್‌ನಲ್ಲಿ ಆಕ್ಟೀವ್ ಆಗಿದ್ದ ವೇಳೆ ಅವರು ಸಹನಟ ಆರವ್ ಜೊತೆ ಸ್ನೇಹ ಬೆಳೆಸಿದರು, ಅದು ಪ್ರೀತಿಗೆ ತಿರುಗಿತ್ತು. ಆ ನಂತರ ಆರವ್, ದಿವ್ಯಾ ಅವರು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಆ ನಂತರ ಇವರಿಬ್ಬರು ಖಾಸಗಿಯಾಗಿ ಕೆಲವೇ ಕೆಲವರ ಸಾಕ್ಷಿಯಾಗಿ ಹಿಂದು, ಮುಸ್ಲಿಂ ಸಮುದಾಯದ ಪ್ರಕಾರ ಮದುವೆಯಾದರು.

ದಿವ್ಯಾ ಅವರು ಗರ್ಭಿಣಿಯಾದಾಗ ಇವರಿಬ್ಬರ ಮಧ್ಯೆ ಮನಸ್ತಾಪ ಶುರುವಾಗಿತ್ತು. ಆರವ್ ನನ್ನ ಕೇರ್ ಮಾಡೋದಿಲ್ಲ, ನಾನು ಟ್ಯಾಬ್ಲೆಟ್ ತಗೊಂಡೆನಾ? ಬಿಟ್ನಾ ಅಂತ ಕೇಳೋದಿಲ್ಲ, ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಅಂತ ದಿವ್ಯಾ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿ ಆರವ್ ವಿರುದ್ಧ ದೂರು ನೀಡಿದ್ದರು. ಆರವ್ ಹಾಗೂ ದಿವ್ಯಾ ಅವರು ಪರಸ್ಪರ ಸಾಕಷ್ಟು ಆರೋಪ ಮಾಡಿಕೊಂಡಿದ್ದರು. ಈಗ ಎರಡನೇ ಪತಿಯಿಂದ ದೂರ ಆಗಿರುವ ದಿವ್ಯಾ ಅವರು ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.