ಸದ್ದಿಲ್ಲದೆ ಹಸೆಮಣೆ ಏರಿದ ನಟಿ ದೀಪ್ತಿ ಕಾಪ್ಸೆ-ಫೋಟೋಗಳಲ್ಲಿ ನೋಡಿ

ಬೆಂಗಳೂರು: ಚಂದನವದಲ್ಲಿ ಈ ವರ್ಷ ಮದುವೆ ಪರ್ವವೇ ನಡೆದಿದೆ. ಸ್ಯಾಂಡಲ್‍ವುಡ್ ನಟ-ನಟಿಯರು ಗೃಹಸ್ಥಾಶ್ರಮಕ್ಕೆ ಎಂಟ್ರಿ ಕೊಡುತ್ತಿದ್ದು, ಕೆಲವರು ಅದ್ದೂರಿಯಾಗಿ ತಮ್ಮ ಮದುವೆಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಸದ್ದು-ಗದ್ದಲಗಳಿಲ್ಲದೇ ಸರಳವಾಗಿ ಮದುವೆ ಆಗಿ ಅಭಿಮಾನಿಗಳಿಗೆ ಶಾಕ್ ಕೊಡುತ್ತಿದ್ದಾರೆ. ಈಗ ನಟಿ ದೀಪ್ತಿ ಕಾಪ್ಸೆ ಕೂಡ ಸಿಂಪಲ್ ಆಗಿ ಮದುವೆ ಆಗುವುದರ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಹೌದು, ಅಕ್ಟೋಬರ್ 15ರಂದು ನಟಿ ದೀಪ್ತಿ ತಮ್ಮ ಬಾಲ್ಯದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಹನಿ ಹನಿ ಇಬ್ಬನಿ, ಜ್ವಲಂತಂ, ಮಾಲ್ಗುಡಿ ಡೇಸ್, ಕಿರೀಟ ಮತ್ತು ಉಪೇಂದ್ರ ಮತ್ತೆ ಬಾ ಸಿನಿಮಾಗಳಲ್ಲಿ ದೀಪ್ತಿ ನಟಿಸಿದ್ದಾರೆ. ದೀಪ್ತಿ ಅವರು ತಮ್ಮ ಸಹಜ ನಟನೆ ಮೂಲಕ ವಿಮರ್ಶಕರ ಮೆಚ್ಚುಗೆಯನ್ನು ಸಹ ಪಡೆದುಕೊಂಡಿದ್ದರು. ಮದುವೆಯಲ್ಲಿ ಕೇವಲ ಆಪ್ತ ಬಂಧುಗಳು ಹಾಗು ಸ್ನೇಹಿತರು ಭಾಗಿಯಾಗಿದ್ದರು.

 

ಇದೇ ವರ್ಷ ನಟಿಯರಾದ ಸಿಂಧೂ ಲೋಕನಾಥ್, ಪ್ರಿಯಾಮಣಿ ಮತ್ತು ರಮ್ಯಾ ಬಾರ್ನಾ ಕೂಡ ಸರಳವಾಗಿ ಮದುವೆಯಾಗಿದ್ದಾರೆ. ಇತ್ತೀಚೆಗೆ ನಟ ಯೋಗೇಶ್ ತಮ್ಮ ಬಾಲ್ಯದ ಗೆಳತಿ ಸಾಹಿತ್ಯರೊಂದಿಗೆ ವಿವಾಹ ನಡೆದಿತ್ತು. ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ಕೂಡ ಉದ್ಯಮಿ ಜಗದೀಶ್ ಅವರೊಂದಿಗೆ ಮದುವೆ ನಡೆದಿತ್ತು.

https://www.instagram.com/p/BbGjzVHBKMK/?hl=en&taken-by=deepthi_kapse_official

https://www.instagram.com/p/BbADzCShaZx/?hl=en&taken-by=deepthi_kapse_official

https://www.instagram.com/p/BasyU-YBJ6Z/?hl=en&taken-by=deepthi_kapse_official

https://www.instagram.com/p/Baf8hj4hSwk/?hl=en&taken-by=deepthi_kapse_official

https://www.instagram.com/p/BaWLsLWhPH3/?hl=en&taken-by=deepthi_kapse_official

https://www.instagram.com/p/BaRE-98Bhh6/?hl=en&taken-by=deepthi_kapse_official

https://www.instagram.com/p/BZDCbEBBM7g/?hl=en&taken-by=deepthi_kapse_official

https://www.instagram.com/p/BWEyk8UBqF_/?hl=en&taken-by=deepthi_kapse_official

https://www.instagram.com/p/BUQufe2glLN/?hl=en&taken-by=deepthi_kapse_official

https://www.instagram.com/p/BT_RSJaggn4/?hl=en&taken-by=deepthi_kapse_official

https://www.instagram.com/p/BULcO_yAbDo/?hl=en&taken-by=deepthi_kapse_official

Comments

Leave a Reply

Your email address will not be published. Required fields are marked *