ಪ್ರವಾಸದಲ್ಲಿ ದೀಪಿಕಾ ದಾಸ್ ಮೋಜು- ಮಸ್ತಿ

ಸ್ಯಾಂಡಲ್‌ವುಡ್ (Sandalwood) ನಟಿ ದೀಪಿಕಾ ದಾಸ್ (Deepika Das) ಅವರು ಸದ್ಯ ವೆಕೇಷನ್ (Vacation) ಮೂಡ್‌ನಲ್ಲಿದ್ದಾರೆ. ಶೂಟಿಂಗ್ ಇಲ್ಲದೇ ಇದ್ದಾಗ ಆಗಾಗ ಪ್ರವಾಸ ಮಾಡುತ್ತ ಬ್ಯುಸಿಯಾಗಿರುತ್ತಾರೆ. ವೆಕೇಷನ್ ಮೂಡ್‌ನಲ್ಲಿರುವ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ನಾಗಿಣಿ, ಬಿಗ್ ಬಾಸ್ ಶೋ ಸೇರಿದಂತೆ ಹಲವು ಕಿರುತೆರೆಯ ಶೋಗಳ ಮೂಲಕ ಸದ್ದು ಗಮನ ಸೆಳೆದಿರುವ ದೀಪಿಕಾ ದಾಸ್ ಅವರು ಮೊದಲಿಗೆ ಡಾರ್ಲಿಂಗ್ ಕೃಷ್ಣಗೆ ತಂಗಿಯಾಗಿ ‘ಕೃಷ್ಣ ರುಕ್ಮಿಣಿ’ ಸೀರಿಯಲ್‌ನಲ್ಲಿ ನಟಿಸಿದ್ರು. ‘ನಾಗಿಣಿ’ ಸೀರಿಯಲ್‌ನಲ್ಲಿ ನಾಗಿಣಿಯಾಗಿ ಗಮನ ಸೆಳೆದರು. ಇದನ್ನೂ ಓದಿ:ಹೊಸ ಫೋಟೋಶೂಟ್‌ನಲ್ಲಿ ಲವ್‌ಬರ್ಡ್ಸ್- ತಮನ್ನಾ ತೊಡೆಯ ಮೇಲೆ ವಿಜಯ್ ವರ್ಮಾ

ಬಿಗ್ ಬಾಸ್ ಶೋನಲ್ಲಿ ಒಳ್ಳೆಯ ಗಟ್ಟಿ ಸ್ಪರ್ಧಿಯಾಗಿ ಮನಗೆದ್ದರು. ಟಿವಿ ಪರದೆಯಲ್ಲಿ ಒಂದಲ್ಲಾ ಒಂದು ಪಾತ್ರಗಳ ಮೂಲಕ ನಟಿ ಗಮನ ಸೆಳೆದಿದ್ದಾರೆ. ಇತ್ತೀಚಿಗೆ ‘ಅಂತರಪಟ’ ಎಂಬ ಧಾರಾವಾಹಿ ಅತಿಥಿ ಪಾತ್ರದ ಮೂಲಕ ಕಾಣಿಸಿಕೊಂಡರು. ಇದೀಗ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಮಿಂಚಲು ದೀಪಿಕಾ ದಾಸ್ ಸಜ್ಜಾಗಿದ್ದಾರೆ. ಇದನ್ನೂ ಓದಿ:ನಟ ಸಂಚಾರಿ ವಿಜಯ್‌ ಅವರ 2ನೇ ವರ್ಷದ ಪುಣ್ಯಸ್ಮರಣೆ

ಸದ್ಯ ಪ್ರವಾಸ ಖುಷಿಯಲ್ಲಿದ್ದಾರೆ ನಟಿ ದೀಪಿಕಾ ದಾಸ್, ಈ ಕುರಿತ ಚೆಂದದ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ. ಖುಷಿಯಿಂದ ನಟಿ ಮೋಜು- ಮಸ್ತಿ ಅಂತಾ ಎಂಜಾಯ್ ಮಾಡ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚಲು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಒಂದು ಸಿನಿಮಾ ಕಂಪ್ಲೀಟ್ ಆಗಿದ್ದರು. ತಮ್ಮ ಪಾತ್ರದ ಪೋಸ್ಟರ್ ಕೂಡ ನಟಿ ಶೇರ್ ಮಾಡಿದ್ದರು. ಪಾಯಲ್ ಎಂಬ ಪಾತ್ರದ ಮೂಲಕ ಬಿಗ್ ಬಾಸ್ ದೀಪಿಕಾ ಬರುತ್ತಿದ್ದಾರೆ.

[pwa-install-button]