ವೈಟ್‌ ಡ್ರೆಸ್‌ನಲ್ಲಿ ಚೈತ್ರಾ ಬ್ರೈಟ್‌ – ಚುಮು ಚುಮು ಚಳಿಯಲ್ಲಿ ಪಡ್ಡೆಗಳ ಮೈಬಿಸಿ ಹೆಚ್ಚಿಸಿದ ನಟಿಯ ಲುಕ್

ಕನ್ನಡದ ‘ಟೋಬಿ’ (Toby) ನಟಿ ಚೈತ್ರಾ ಆಚಾರ್‌ (Chaithra Achar) ಸದಾ ಒಂದಲ್ಲಾ ಒಂದು ಫೋಟೋ ಶೂಟ್‌ನಲ್ಲಿ ಸದ್ದು ಮಾಡುತ್ತಲೇ ಇದ್ದಾರೆ. ಟೀಕೆ ಮಾಡೋರಿಗೆ ಡೋಂಟ್‌ ಕೇರ್‌ ಅನ್ನುತ್ತಲೇ ಹೊಸ ಹೊಸ ಹಾಟ್‌ ಅವತಾರದಲ್ಲಿ ಕಾಣಿಸಿಕೊಳ್ತಿದ್ದಾರೆ.

ಇದೀಗ ಬಿಳಿ ಬಣ್ಣದ ಬನಿಯನ್‌ ಹಾಗೂ ಬ್ರೌನ್‌ ಜೀನ್ಸ್‌ ಉಡುಗೆ ತೊಟ್ಟು ಬಿಳಿ ಒಳ ಉಡುಪು ಕಾಣುವಂತ ಫೋಟೋಗಳನ್ನ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದು, ಪಡ್ಡೆಗಳ ಹೃದಯಕ್ಕೆ ಬೆಂಕಿಯಿಟ್ಟಿದ್ದಾರೆ. ಪ್ರತಿ ಫೋಟೋದಲ್ಲೂ ಚೈತ್ರಾ ವಿಭಿನ್ನವಾದ ಭಾವುಗಳು ವ್ಯಕ್ತವಾಗಿವೆ. ಒಂದಕ್ಕಿಂತ ಕಿಂತ ಒಂದು ಚಂದ ಅನ್ನುವ ಹಾಗೇನೆ ಚೈತ್ರಾ ಎಕ್ಸ್‌ಪ್ರೆಷನ್ ಕ್ಯಾಪ್ಚರ್ ಆಗಿವೆ. ನಟಿಯ ಹೊಸ ಅವತಾರಕ್ಕೆ ʻಬೆಂಕಿʼ ಅಂತ ನೆಟ್ಟಿಗರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಇದನ್ನೂ ಓದಿ: ಸಿನಿಮಾ ಚಾನ್ಸ್‌ಗಾಗಿ ಸೆಕ್ಸ್ ಮಾಡಿದ್ದೀರಾ? ಎಂದವನಿಗೆ ಚೈತ್ರಾ ಆಚಾರ್ ತಿರುಗೇಟು

ಸದ್ಯ ತಮಿಳು ನಟ ಸಿದ್ಧಾರ್ಥ್‌, ಶರತ್‌ ಕುಮಾರ್‌ ಅವರೊಂದಿಗೆ 3BHK ಫ್ಯಾಮಿಲಿ ಓರಿಯಂಟೆಡ್‌ ಸಿನಿಮಾದಲ್ಲಿ ಬ್ಯುಸಿ ಆಗಿರುವ ಚೈತ್ರಾ ಆಚಾರ್‌, ಕನ್ನಡದಲ್ಲಿ ʻಮಾರ್ನಮಿʼ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ದೀಕ್ಷಾ ಅನ್ನೋ ಹಳ್ಳಿ ಹುಡುಗಿ ಪಾತ್ರದಲ್ಲಿ ಚೈತ್ರಾ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪಾತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದ್ದು, ಇದಕ್ಕೆ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಕೂಡ ಸಪೋರ್ಟ್ ಮಾಡಿದ್ದಾರೆ. ಇದನ್ನೂ ಓದಿ: ಉದಯಪುರ ಫೈಲ್ಸ್ ಭಾರೀ ವಿವಾದ: 150 ಕಡೆ ಕತ್ತರಿ

ಇನ್ನೂ ಕೆಲ ದಿನಗಳ ಹಿಂದೆ ನಟಿ ಇನ್‌ಸ್ಟಾ ಖಾತೆಯಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಲು ಆಸ್ಕ್‌ ಮಿ ಸೆಷನ್ ಮಾಡಿದ್ದರು. ಈ ವೇಳೆ ಅಭಿಮಾನಿಯೊಬ್ಬ, ನೀವು ಸಿನಿಮಾ ಅವಕಾಶಕ್ಕಾಗಿ ಸೆಕ್ಸ್ ಮಾಡಿದ್ದೀರಾ? ಎಂದು ನೇರವಾಗಿ ಪ್ರಶ್ನೆ ಕೇಳಿದ್ದರು.

ಅದಕ್ಕೆ ನಟಿ ತಕ್ಕ ಉತ್ತರವನ್ನೇ ನೀಡಿದ್ದರು. ಅವಕಾಶಕ್ಕಾಗಿ ಎಂದು ಪಲ್ಲಂಗ ಏರಿಲ್ಲ. ಯಾಕೆಂದರೆ ನಾನು ಪ್ರತಿಭಾವಂತೆ. ಹಾಗಾಗಿ ಸೆಕ್ಸ್ ಮಾಡಿ ಅವಕಾಶ ಪಡೆದುಕೊಳ್ಳಬೇಕು ಎಂಬ ಅಗತ್ಯ ನನಗಿಲ್ಲ ಖಡಕ್ ಆಗಿ ಹೇಳಿದ್ದರು. ಇದನ್ನೂ ಓದಿ: ತಪ್ಪಿದ ಭಾರಿ ಅನಾಹುತ: ಆಯತಪ್ಪಿ ಬಿದ್ದ ನಟಿ