Bigg Boss Kannada 10: ದೊಡ್ಮನೆ ಆಟಕ್ಕೆ ‘ಗೀತಾ’ ಭವ್ಯಾ ಗೌಡ ಎಂಟ್ರಿ?

‘ಗೀತಾ’ (Geetha) ಸೀರಿಯಲ್ ಮೂಲಕ ಮನೆ ಮಾತಾದ ನಟಿ ಭವ್ಯಾ ಗೌಡ (Bhavya Gowda) ಅವರು ಇದೀಗ ಬಿಗ್ ಬಾಸ್ ಮನೆಗೆ (Bigg Boss House) ಬರಲಿದ್ದಾರೆ. ಗೀತಾ ಆಗಿ ಸಿನಿಪ್ರಿಯರ ಮನ ಗೆದ್ದಿರುವ ನಟಿ, ದೊಡ್ಮನೆ ಆಟದಲ್ಲಿ ಭಾಗವಹಿಸಲಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ:ಪ್ಯಾರಿಸ್‌ನಲ್ಲಿ ಸ್ನೇಹಿತರ ಮದುವೆಯಲ್ಲಿ ಮಿಂಚಿದ ರಾಮ್ ಚರಣ್ ದಂಪತಿ

ಟಿಕ್ ಟಾಕ್ ಮೂಲಕ ಫೇಮಸ್ ಆಗಿದ್ದ ಭವ್ಯಾ ‘ಗೀತಾ’ ಧಾರಾವಾಹಿಯಲ್ಲಿ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡರು. ಮೊದಲ ಸೀರಿಯಲ್‌ನಲ್ಲೇ ಗಮನ ಸೆಳೆದ ಯುವ ನಟಿಗೆ ಸಿನಿಮಾ ಆಫರ್ಸ್‌ಗಳು ಸಿಗುತ್ತಿವೆ. ಹೀಗಿರುವಾಗ ಈ ಬಾರಿಯ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ನಟಿ ಭವ್ಯಾ ಕೂಡ ಬರುತ್ತಿದ್ದಾರೆ ಎನ್ನಲಾಗುತ್ತಿದೆ.

ಕಳೆದ ಬಾರಿ ಮಿನಿ ಬಿಗ್ ಬಾಸ್ ಸೀಸನ್‌ನಲ್ಲಿ ನಟಿ ಭಾಗವಹಿಸಿದ್ದರು. ಈ ಬಾರಿ ಕೂಡ ದೊಡ್ಮನೆ ಆಟದಲ್ಲಿ ಅವರು ಇರುತ್ತಾರೆ ಎಂದು ಗಾಸಿಪ್ ಶುರುವಾಗಿದೆ. ಹಾಗಾದ್ರೆ ಗೀತಾ(Geetha Serial) ಸೀರಿಯಲ್‌ಗೆ ಬ್ರೇಕ್ ಬೀಳುತ್ತಾ? ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ:ಕೀರ್ತಿ ಪಾಂಡಿಯನ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಮಿಳು ನಟ ಅಶೋಕ್‌ ಸೆಲ್ವನ್‌

‘ಅನುಬಂಧ ಅವಾರ್ಡ್’ ಕಾರ್ಯಕ್ರಮದಲ್ಲಿ ಹೊಸ ಸೀರಿಯಲ್ ಲಾಂಚ್ ಆಗಿದೆ. ಬೃಂದಾವನ ಎಂಬ ಸೀರಿಯಲ್ ಬರುತ್ತಿದೆ. ಟಿವಿಯಲ್ಲಿ ಈ ಶೋ ಇನ್ನೂ ಪ್ರಸಾರವಾಗಬೇಕಿದೆ. ಹಾಗಾಗಿ ಬಿಗ್ ಬಾಸ್ ಮನೆಗೆ (Bigg Boss Kannada) ನಟಿ ಬರುತ್ತಾರೆ ಎನ್ನಲಾಗುತ್ತಿದೆ.

ಸ್ಯಾಂಡಲ್‌ವುಡ್ ನಟಿ ಅಮೂಲ್ಯ (Amulya) ಸಂಬಂಧಿ ಆಗಿರುವ ಭವ್ಯಾಗೆ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಗೀತಾ ಸೀರಿಯಲ್ ಸಹನಟ ಧನುಷ್ ಗೌಡ ಜೊತೆಗಿನ ಸ್ನೇಹದ ವಿಚಾರವಾಗಿ ನಟಿ ಹೈಲೆಟ್ ಆಗಿದ್ದರು. ಇಬ್ಬರು ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಬಳಿಕ ಇದೆಲ್ಲಾ ಸುಳ್ಳು ಎಂದು ಈ ಜೋಡಿ ಡೇಟಿಂಗ್ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದರು.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]