ಮೆಗಾಸ್ಟಾರ್ ಚಿರಂಜೀವಿ ಚಿತ್ರದಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್

ನ್ನಡತಿ ಆಶಿಕಾ ರಂಗನಾಥ್‌ಗೆ (Ashika Ranganath) ಗೋಲ್ಡನ್ ಚಾನ್ಸ್ ಸಿಕ್ಕಿದೆ. ಚುಟು ಚುಟು ಬೆಡಗಿಗೆ ಟಾಲಿವುಡ್ ಅಂಗಳದಲ್ಲಿ ಬೇಡಿಕೆ ಹೆಚ್ಚಾಗಿದೆ. ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಜೊತೆ ತೆರೆಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ.

ಕನ್ನಡ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಆಶಿಕಾ ರಂಗನಾಥ್ ಟಾಲಿವುಡ್‌ನಲ್ಲಿ ಭರವಸೆ ಮೂಡಿಸಿದ್ದಾರೆ. ಸದ್ಯ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ (Vishwambhara Film) ಸಿನಿಮಾದಲ್ಲಿ ಆಶಿಕಾ ಬಹಳ ಮಹತ್ವದ ಪಾತ್ರವೇ ಸಿಕ್ಕಿದೆಯಂತೆ. ವಸಿಷ್ಠ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ತ್ರಿಷಾ, ಮೀನಾಕ್ಷಿ ಚೌಧರಿ, ಬಣ್ಣ ಹಚ್ಚಿದ್ದಾರೆ. ಇವರ ಜೊತೆಗೆ ಆಶಿಕಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ:ಪುಸ್ತಕದಲ್ಲೂ ನೋಡಿ ‘ಡೇರ್ ಡೆವಿಲ್‍ ಮುಸ್ತಾಫಾ’ ಸಿನಿಮಾ

ಕಳೆದ ವರ್ಷ ನಂದಮೂರಿ ಕಲ್ಯಾಣ್ ನಟನೆಯ ‘ಆಮಿಗೋಸ್’ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದ್ದರು. ಆದರೆ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ನಂತರ ನಾಗಾರ್ಜುನ ಜೊತೆ ‘ನಾ ಸಾಮಿ ರಂಗ’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಯ್ತು. ಈ ಬೆನ್ನಲ್ಲೇ ಮೆಗಾಸ್ಟಾರ್ ನಟಿಸುವ ಬಂಪರ್ ಅವಕಾಶ ನಟಿಗೆ ಸಿಕ್ಕಿದೆ.


ಕನ್ನಡದ ನಟಿಯರಾದ ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾ (Sreeleela), ಪೂಜಾ ಹೆಗ್ಡೆ, ಅನುಷ್ಕಾ ಶೆಟ್ಟಿ ಅವರಂತೆಯೇ ಆಶಿಕಾ ರಂಗನಾಥ್ ಪೈಪೋಟಿ ಗೆಲ್ತಾರಾ? ಎಂದು ಕಾದುನೋಡಬೇಕಿದೆ.