ಅನುಪಮಾ ಪರಮೇಶ್ವರನ್ ಎಫ್‍ಬಿ ಹ್ಯಾಕ್, ಫೋಟೋ ಮಾರ್ಫ್- ಗರಂ ಆದ ನಟಸಾರ್ವಭೌಮ ಬೆಡಗಿ

ಬೆಂಗಳೂರು: ಸಿನಿಮಾ ತಾರೆಯ ಫೋಟೋಗಳನ್ನು ಎಡಿಟ್ ಮಾಡಿ ವಿಕೃತಗೊಳಿಸುವುದನ್ನು ಕಿಡಿಗೇಡಿಗಳು ಮಾಡುತ್ತಲೇ ಇರುತ್ತಾರೆ. ಇದಕ್ಕಾಗಿ ಹಲವು ನಟಿಯರು ಮುಜುಗರಕ್ಕೆ ಈಡಾಗಿರುವುದೂ ಉಂಟು. ಇದೀಗ ನಟ ಸಾರ್ವಭೌಮ ಬೆಡಗಿ ಸಹ ಇಂತಹದ್ದೇ ಕಷ್ಟಕ್ಕೆ ಸಿಲುಕಿಕೊಂಡಿದ್ದು, ಬೇರೆ ಯುವತಿಯ ದೇಹಕ್ಕೆ ಅನುಪಮಾ ಪರಮೇಶ್ವರನ್ ಮುಖವನ್ನು ಜೋಡಿಸಲಾಗಿದೆ ಇದನ್ನು ಕಂಡ ಅವರು ಆಶ್ಚರ್ಯಕ್ಕೊಳಗಾಗಿದ್ದಾರೆ.

ಇಂಟರ್ನೆಟ್ ಜಾಲಾಡಿದರೆ ನೈಜ ಫೋಟೋಗಳಿಗಿಂತ ಫೇಕ್, ಎಡಿಟೆಡ್, ಮಾರ್ಫ್ ಮಾಡಿದ ಫೋಟೋಗಳು ಕಾಣುವುದೇ ಹೆಚ್ಚು. ಅದರಲ್ಲೂ ನಟ, ನಟಿಯರ ಫೋಟೋಗಳನ್ನು ಕಿಡಿಗೇಡಿಗಳು ಮನಬಂದಂತೆ ಎಡಿಟ್ ಮಾಡಿ ಅಪ್‍ಲೋಡ್ ಮಾಡಿರುತ್ತಾರೆ. ಇದರಿಂದ ಹಲವು ನಟಿಯರಿಗೆ ಮುಜುಗರ ಸಹ ಉಂಟಾಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವನ್ನು ಸಹ ವ್ಯಕ್ತಪಡಿಸುತ್ತಿರುತ್ತಾರೆ. ಎಷ್ಟು ಬಾರಿ ಈ ಕುರಿತು ಮನವಿ, ಜಾಗೃತಿ ಮೂಡಿಸಿದರೂ ಆಗಾಗ ಈ ರೀತಿಯ ಫೋಟೋಗಳು ಕಾಣಿಸುತ್ತಿರುತ್ತವೆ.

ಅದೇ ರೀತಿ ಇದೀಗ ಅನುಪಮಾ ಪರಮೇಶ್ವರ್ ಅವರ ಫೋಟೋವನ್ನು ಸಹ ಎಡಿಟ್ ಮಾಡಲಾಗಿದ್ದು, ಯಾವುದೋ ಯುವತಿಯ ದೇಹಕ್ಕೆ ಅನುಪಮಾ ಮುಖವನ್ನು ಅಂಟಿಸಲಾಗಿದೆ. ಇದರಿಂದಾಗಿ ನಟಿ ತೀವ್ರ ಬೇಸರಕ್ಕೊಳಗಾಗಿದ್ದು, ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಫೇಸ್ಬುಕ್ ಖಾತೆ ಸಹ ಹ್ಯಾಕ್ ಆಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.

ಸಮ್ ಇಡಿಯಟ್ ಹ್ಯಾಸ್ ಹ್ಯಾಕಡ್ ಮೈ ಅಕೌಂಟ್, ಜಸ್ಟ್ ಅಲರ್ಟ್ ಎಂದು ಪೋಸ್ಟ್ ಮಾಡಿದ್ದಾರೆ. ಇದಾದ ನಂತರ ಅವರ ಫೇಕ್ ಫೋಟೋ ಹಾಕಿ, ಸಮಯ ಸಿಕ್ಕಿದೆ ಎಂದು ಇಂತಹ ನಾನ್‍ಸೆನ್ಸ್ ಕೆಲಸ ಮಾಡಿದ್ದೀರಾ, ನಿಮ್ಮ ಮನೆಯಲ್ಲಿ ತಾಯಿ, ಅಕ್ಕ, ತಂಗಿಯರು ಇಲ್ಲವೇ, ಯಾವುದಾದರು ಒಳ್ಳೆಯ ಕೆಲಸಗಳಿಗೆ ನಿಮ್ಮ ತಲೆಯನ್ನು ಉಪಯೋಗಿಸಿ, ಇಂತಹ ಮೂರ್ಖತನದ ಕೆಲಸಗಳಿಗಲ್ಲ ಎಂದು ಕಿಡಿಕಾರಿದ್ದಾರೆ. ಅಲ್ಲದೆ ತಮ್ಮ ಫೇಕ್ ಫೋಟೋ ಹಾಕಿ, ಈ ಕುರಿತು ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಸಹ ಮಾಡಿರುವ ಅವರು, ನಿಮ್ಮಲ್ಲಿ ವಿನಮ್ರವಾಗಿ ಕೇಳಿಕೊಳ್ಳುತ್ತೇನೆ ದಯವಿಟ್ಟು ಮಾಫ್ರ್ಡ್ ಫೋಟೋಗಳನ್ನು ಹಂಚಿಕೊಳ್ಳಬೇಡಿ, ಇದರಿಂದಾಗಿ ತುಂಬಾ ನೋವಾಗುತ್ತದೆ. ಅವಳು ಒಬ್ಬ ಹುಡುಗಿ, ಮಾರ್ಫ್ ಮಾಡುವವರಿಗೆ ಈ ರೀತಿ ಮಾಡಲು ಹೇಗಾದರೂ ಮನಸ್ಸು ಬರುತ್ತದೆ. ಕಾಮನ್ ಸೆನ್ಸ್ ಇಲ್ಲವೇ, ಇದು ನಕಲಿ ಚಿತ್ರ ಇನ್ನೊಂದು ಬಾರಿ ಈ ರೀತಿ ಮಾಡಬೇಡಿ ಎಂದು ಕಿಡಿ ಕಾರಿದ್ದಾರೆ.

ಈ ಸಂಬಂಧ ಅನುಪಮಾ ಪರಮೇಶ್ವರನ್ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಅನುಪಮಾ ಫೇಕ್ ಫೋಟೋವನ್ನು ಹಂಚಿಕೊಳ್ಳಬೇಡಿ ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾರೆ.

ಸ್ಯಾಂಡಲ್‍ವುಡ್‍ನ ನಟಸಾರ್ವಭೌಮ ನಂತರ ಅನುಪಮಾ ಪರಮೇಶ್ವರನ್ ತೆಲುಗಿನ ರಾಕ್ಷಸುಡು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ತಮಿಳಿನ ಥಲ್ಲಿ ಪೊಗಠೇ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *