ಓಪನ್ ವಾಟರ್ ಡ್ರೈವರ್‌ ಆದ ನಟಿ ಅನುಪಮಾ ಗೌಡ.!

ಸ್ಯಾಂಡಲ್‌ವುಡ್‌ನಲ್ಲಿ ನಟಿ ಕಮ್ ನಿರೂಪಕಿ ಅನುಪಮಾ ಗೌಡ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ನಟಿಯಾಗಿದ್ದ ಅನುಪಮಾ ಗೌಡ ಈಗ ಓಪನ್ ವಾಟರ್ ಡ್ರೈವರ್ ಆಗಿ ಬಡ್ತಿ ಪಡೆದಿದ್ದಾರೆ. ಅನುಪಮಾ ಅವರ ಹೊಸ ಸಾಹಸಕ್ಕೆ ಸರ್ಟಿಫಿಕೇಟ್ ಕೂಡ ಗಿಟ್ಟಿಸಿಕೊಂಡಿದ್ದಾರೆ.

ಬಿಗ್ ಬಾಸ್ ಶೋ ಸ್ಪರ್ಧಿಯಾಗಿ, ನಟಿಯಾಗಿ ನಿರೂಪಕಿಯಾಗಿ ಅಪಾರ ಅಭಿಮಾನಿಗಳ ಮನಗೆದ್ದ ಚೆಲುವೆ ಅನುಪಮಾ ಗೌಡ. ಇತ್ತೀಚಿನ `ನನ್ನಮ್ಮ ಸೂಪರ್ ಸ್ಟಾರ್’ ಶೋ ಮೂಲಕ ಸಖತ್ ಸದ್ದು ಮಾಡಿದ್ದರು. ಈಗ ಬ್ರೇಕ್ ಟೈಮ್‌ನಲ್ಲಿ ಗಟ್ಟಿಗಿತ್ತಿ ಅನುಪಮಾ ಗೌಡ ಹೊಸ ಸಾಹಸವೊಂದನ್ನ ಮಾಡಿ, ಮುಗಿಸಿದ್ದಾರೆ.

ಈ ನಟಿಗೆ ಟ್ರಾವೆಲ್ ಮಾಡೋದು ಅಂದ್ರೆ ತುಂಬಾ ಇಷ್ಟ. ಕಳೆದ ಬಾರಿ ಕಿರುತೆರೆ ನಟಿಯರೊಂದಿಗೆ ಗೋವಾ ಪ್ರವಾಸಕ್ಕೆ ಹೋಗಿ ಮಸ್ತ್ ಮಜಾ ಮಾಡಿ ಬಂದಿದ್ದರು. ಈಗ ಅನುಪಮಾ ಥೈಲಾಂಡ್‌ಗೆ ಹೋಗಿದ್ದಾರೆ. ಆದರೆ ಈ ಸಲ ಸುಮ್ಮನೆ ಮಜಾ ಮಾಡಲು ಹೋಗಿಲ್ಲ, ಬದಲಾಗಿ ಸಮುದ್ರ ಆಳದಲ್ಲಿ ಸಂಚರಿಸೋ ಬಗ್ಗೆ ಕೋರ್ಸ್ ಮಾಡಿ, ಎಕ್ಸಾಂ ಬರೆದು ಇದೀಗ ಓಪನ್ ವಾಟರ್ ಡ್ರೈವರ್ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ.‌ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹೋರಾಟಕ್ಕೆ ಮಣಿದ ಅಕ್ಷಯ್ ಕುಮಾರ್: ಬಾಲಿವುಡ್ ಮಂದಿಯ ನಿದ್ದೆಗೆಡಿಸುತ್ತಿದೆ ಕರಣಿ ಸೇನಾ ಸಂಘಟನೆ

 

View this post on Instagram

 

A post shared by Anupama Anandkumar (@anupamagowda)

ಅನುಪಮಾ ಪಡೆದಿರೋದು ಓಪನ್ ವಾಟರ್ ಡೈವರ್ ಅನ್ನೋ ಸ್ಕ್ಯೂಬಾದ ಮೊದಲ ಹಂತದ ಸರ್ಟಿಫಿಕೇಟ್. ಒಂದಿಷ್ಟು ಡಾಲರ್‌ಗಳನ್ನು ಪಾವತಿಸಿ ನಾಲ್ಕರಿಂದ ಏಳು ದಿನ ಅಂದರೆ ಟ್ರೈನಿಂಗ್ ಪಡೆದು ಎಕ್ಸಾಂ ಬರೆದು ಈ ಸರ್ಟಿಫಿಕೇಟ್ ಪಡೆದಿದ್ದಾರೆ. ಇನ್ನು ಈ ಕೋರ್ಸ್ನ ಕೊನೆಯಲ್ಲಿ ನಿಮಗೆ ಸಮುದ್ರದಾಳದಲ್ಲಿ ಸಂಚರಿಸೋ ಬಗ್ಗೆ ಜ್ಞಾನ ಸಿಗುತ್ತೆ. ಈ ಸರ್ಟಿಫಿಕೇಟ್ ಪಡೆದರೆ ವಿಶ್ವದ ಎಲ್ಲಿ ಬೇಕಿದ್ದರೂ ಹೋಗಿ ಅಂಡರ್‌ವಾಟರ್ ನಲ್ಲಿ ಸ್ಕ್ಯೂಬಾ ಡೈವಿಂಗ್ ಮಾಡಬಹುದಾಗಿದೆ. ಒಟ್ನಲ್ಲಿ ಗಟ್ಟಿಗಿತ್ತಿ ಅನುಪಮಾ ಹೊಸ ಸಾಹಸದ ವಿಚಾರ ಕೇಳಿ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ.

Comments

Leave a Reply

Your email address will not be published. Required fields are marked *