ಮುದ್ದಿನ ಮಗಳು ಸಮನ್ವಿಯ ಲಾಸ್ಟ್ ಕಿಸ್ ಹಂಚಿಕೊಂಡ ನಟಿ ಅಮೃತಾ

ಬೆಂಗಳೂರು: ಮುದ್ದಿನ ಮಗಳು ಸಮನ್ವಿಯನ್ನು ಕಳೆದುಕೊಂಡು ದುಃಖದಲ್ಲಿರುವ ನಟಿ ಅಮೃತಾ ನಾಯ್ಡು ಅವರು ತಮ್ಮ ಇನ್ ಸ್ಟಾ ಖಾತೆಯಲ್ಲಿ 2 ವೀಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಹೌದು. ಮಗಳ ಜೊತೆಗಿನ ಲಾಸ್ಟ್ ವೀಡಿಯೋವನ್ನು ಅಮೃತಾ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ನನಗೆ ಅವಳ ಲಾಸ್ಟ್ ಕಿಸ್ ಇದಾಗಿದ್ದು, ನನ್ನನ್ನು ನಾನು ಲವ್ ಮಾಡಿಕೊಳ್ಳುತ್ತೀನಿ ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ವೀಡಿಯೋದಲ್ಲಿ ಸಮನ್ವಿ ತನ್ನ ಪಾಡಿಗೆ ತಾನು ಆಟವಾಡಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಮಗಳ ಸಾವಿನ ಬಗ್ಗೆ ಕಣ್ಣೀರುಡುತ್ತಲೇ ಎಳೆಎಳೆಯಾಗಿ ಬಿಚ್ಚಿಟ್ಟ ಅಮೃತಾ ನಾಯ್ಡು!

 

View this post on Instagram

 

A post shared by Amrutha Roopesh (@roopeshamrutha)

 

ನಿನ್ನೆಯಷ್ಟೇ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಅಮೃತಾ, ಅಂದು ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಕಣ್ಣೀರಾಕಿದ್ದರು. ಅಲ್ಲದೆ ಮನೆಯಿಂದ ಹೊರಡುವ ಮುಂಚೆ ಮಗಳ ಜೊತೆ ರೀಲ್ಸ್ ಕೂಡ ಮಾಡಿದ್ದೆ ಎಂದು ಹೇಳಿದ್ದರು. ಅದರಂತೆ ಆ ಲಾಸ್ಟ್ ರೀಲ್ಸ್ ಅನ್ನು ಇದೀಗ ಅವರು ತಮ್ಮ ಇನ್ ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಮಗಳ ತುಂಟಾಟಗಳನ್ನು ನೆನಪು ಮಾಡಿಕೊಳ್ಳುತ್ತಾ ಮರುಗುತ್ತಿದ್ದಾರೆ. ಇದನ್ನೂ ಓದಿ: ಕಣ್ಣೀರು ತರಿಸುವಂತಿದೆ ಸಮನ್ವಿ ತಾಯಿ ಅಮೃತಾ ನಾಯ್ಡು ಮನವಿ

 

View this post on Instagram

 

A post shared by Amrutha Roopesh (@roopeshamrutha)

 

ಕಳೆದ ಗುರುವಾರ ಕೋಣನಕುಂಟೆ ಬಳಿ ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ನಡೆದಿತ್ತು. ಈ ಅವಘಡದಲ್ಲಿ ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗುವ ನನ್ನಮ್ಮ ಸೂಪ್ ಸ್ಟಾರ್ ಖ್ಯಾತಿ ಸಮನ್ವಿ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಗರ್ಭಿಣಿಯಾಗಿರುವ ಅಮೃತಾ ನಾಯ್ಡು ಸಣ್ಣ-ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದರು. ಆ ಬಳಿಕ ಮಗಳನ್ನು ಕಳೆದುಕೊಂಡ ದುಃಖದಲ್ಲಿಯೂ ಅಮೃತಾ ಅವರು ಇನ್ ಸ್ಟಾದಲ್ಲಿ ಫೋಸ್ಟ್ ಮಾಡಿ, ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದರು. ನನ್ನ ಮಗಳು ಮತ್ತೆ ನನ್ನ ಹೊಟ್ಟೆಯಲ್ಲಿ ಹುಟ್ಟಿ ಬರಲಿ ಎಂದು ಎಲ್ಲರೂ ಪ್ರಾರ್ಥಿಸಿ ಅಂತ ಕೈಮುಗಿದು ಬೇಡಿಕೊಂಡಿದ್ದರು.

Comments

Leave a Reply

Your email address will not be published. Required fields are marked *