ಗೆಳತಿಯ ಮದ್ವೆಯಲ್ಲಿ ಆಲಿಯಾ ಭಟ್ ಫುಲ್ ಶೈನ್ – ವಿಡಿಯೋ ವೈರಲ್

ಬಾಲಿವುಡ್ ಬೆಡಗಿ ಆಲಿಯಾ ಭಟ್ (Alia Bhatt) ಸ್ಪೇನ್‌ಗೆ ತೆರಳಿದ್ದು ಗೆಳತಿಯ ಮದುವೆಯಲ್ಲಿ ನಟಿ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ- ಡಿವೋರ್ಸ್ ಬಗ್ಗೆ ಮೌನ ಮುರಿದ ಧನಶ್ರೀ

ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮಿಂಚಿದ ಬಳಿಕ ಗೆಳತಿಯ ಮದುವೆಗಾಗಿ ಸ್ಪೇನ್‌ಗೆ ಆಲಿಯಾ ಭಟ್ ತೆರಳಿದ್ದಾರೆ. ಲೆಹೆಂಗಾದೊಂದಿಗೆ ಸನ್‌ಗ್ಲಾಸ್ ಹಾಕಿಕೊಂಡು ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಇದು ನಿಮ್ಮ ಫೆಮಿನಿಸಂ?- ದೀಪಿಕಾ ಪಡುಕೋಣೆ ವಿರುದ್ಧ ಸಂದೀಪ್ ರೆಡ್ಡಿ ಆಕ್ರೋಶ

ಅಂದಹಾಗೆ, ಕಾನ್ ಚಲನಚಿತ್ರೋತ್ಸವದಲ್ಲಿ ಆಲಿಯಾ ನೀಡಿರುವ ಸಂದರ್ಶನ ಭಾರೀ ವೈರಲ್ ಆಗಿತ್ತು. ಕೆರಿಯರ್, ಫ್ಯಾಮಿಲಿಗೆ ಸಂಬಂಧಿಸಿದ ಕೆಲ ಪ್ರಶ್ನೆಗಳನ್ನು ಆಲಿಯಾಗೆ ಕೇಳಲಾಗಿತ್ತು. ಆಗ ನೆಚ್ಚಿನ ನಟ ಯಾರು ಎಂದು ಎದುರಾದ ಪ್ರಶ್ನೆಗೆ ಥಟ್ ಅಂತ ಮಲಯಾಳಂ ನಟ ಫಹಾದ್ ಫಾಸಿಲ್ ಹೆಸರನ್ನು ನಟಿ ಹೇಳಿದ್ದರು. ನನಗೆ ಫಹಾದ್ ಅವರ ಆ್ಯಕ್ಟಿಂಗ್ ಇಷ್ಟ. ಅವರು ನಟಿಸಿರುವ ‘ಆವೇಶಂ’ ಚಿತ್ರ ನನ್ನ ನೆಚ್ಚಿನ ಸಿನಿಮಾಗಳಲ್ಲಿ ಒಂದು. ಅವರು ಅದ್ಭುತ ನಟ, ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದಿದ್ದರು.

ಅದಷ್ಟೇ ಅಲ್ಲ, ಮಲಯಾಳಂ ಸಿನಿಮಾಗಳ ಬಗ್ಗೆ ಆಲಿಯಾ ಮೆಚ್ಚುಗೆ ವ್ಯಕ್ತಪಡಿಸಿದರು. ಆಗ ‘ಡಾರ್ಲಿಂಗ್ಸ್’ ಎಂಬ ಸಿನಿಮಾದಲ್ಲಿ ಮಲಯಾಳಂ ನಟ ರೋಷನ್ ಮ್ಯಾಥ್ಯು ಅವರೊಂದಿಗೆ ನಟಿಸಿದ್ದೆ. ಅವರು ಅದ್ಭುತ ಪ್ರತಿಭೆ ಎಂದಿದ್ದರು. ನಟಿಯ ಮಾತು ಮಲಯಾಳಂ ಪ್ರೇಕ್ಷಕರಿಗೆ ಖುಷಿ ಕೊಟ್ಟಿತ್ತು.

ಯಶ್ ರಾಜ್ ಫಿಲ್ಮ್ ನಿರ್ಮಾಣದ ‘ಆಲ್ಪಾ’ ಚಿತ್ರ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ & ವಾರ್’ ಸಿನಿಮಾದಲ್ಲೂ ಆಲಿಯಾ ನಟಿಸುತ್ತಿದ್ದಾರೆ.