War 2: ಜ್ಯೂ.ಎನ್‌ಟಿಆರ್‌ಗೆ ಆಲಿಯಾ ಭಟ್ ನಾಯಕಿ

ಬಾಲಿವುಡ್ ಬ್ಯೂಟಿ ಆಲಿಯಾ ಭಟ್ (Aliaa Bhatt) ಇದೀಗ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ತೆಲುಗಿನ ಸ್ಟಾರ್ ನಟ ಜ್ಯೂ.ಎನ್‌ಟಿಆರ್‌ಗೆ ಆಲಿಯಾ ಹೀರೋಯಿನ್ ಆಗಿದ್ದಾರೆ. ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ‘ವಾರ್ 2’ (War 2) ಸಿನಿಮಾಗೆ ಆಲಿಯಾ ಎಂಟ್ರಿ ಕೊಟ್ಟಿದ್ದಾರೆ.

ರಣ್‌ಬೀರ್ ಕಪೂರ್ (Ranbir Kapoor) ಜೊತೆ ಮದುವೆಯಾಗಿ ರಾಹಾಗೆ ತಾಯಿಯಾದ್ಮೇಲೂ ಆಲಿಯಾ ಭಟ್ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ. ಮತ್ತಷ್ಟು ಫಿಟ್ ಆಗಿ ಹೊಸ ನಾಯಕಿಯರಿಗೆ ಆಲಿಯಾ ಠಕ್ಕರ್ ಕೊಡ್ತಿದ್ದಾರೆ. ಅಷ್ಟರ ಮಟ್ಟಿಗೆ ಆಲಿಯಾ ಫುಲ್ ಚೇಂಜ್ ಆಗಿದ್ದಾರೆ. ಇದನ್ನೂ ಓದಿ:ಗೋವಾದಲ್ಲಿ ಯಶ್ : ಸದ್ದಿಲ್ಲದೇ ಶುರುವಾಯ್ತಾ ‘ಟಾಕ್ಸಿಕ್’ ಶೂಟಿಂಗ್

ರಣ್‌ವೀರ್ ಸಿಂಗ್ ಜೊತೆಗಿನ ಚಿತ್ರ ಸಕ್ಸಸ್ ಕಂಡ ಮೇಲೆ ‘ವಾರ್ 2’ ಸಿನಿಮಾದ ಆಫರ್ ಆಲಿಯಾಗೆ ಸಿಕ್ಕಿದೆ. ಈ ಹಿಂದೆ ‘ಆರ್‌ಆರ್‌ಆರ್’ (RRR) ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್‌ (Jr.Ntr) ಜೊತೆ ಆಲಿಯಾ ನಟಿಸಿದ್ದರು. ರಾಮ್ ಚರಣ್‌ಗೆ ನಾಯಕಿಯಾಗಿದ್ದರು. ಆದರೆ ತಾರಕ್ ಜೊತೆ ಆಲಿಯಾಗೆ ಒಳ್ಳೆಯ ಒಡನಾಟ ಹೊಂದಿದ್ದರು. ಇದೀಗ ಈ ಜೋಡಿ ವಾರ್‌ 2 ಮೂಲಕ ಮನರಂಜನೆ ಕೊಡಲು ರೆಡಿಯಾಗಿದ್ದಾರೆ.

ಅಯಾನ್ ಮುಖರ್ಜಿ ನಿರ್ದೇಶನದ ‘ವಾರ್ 2’ ಸಿನಿಮಾದಲ್ಲಿ ಹೃತಿಕ್ ರೋಷನ್ (Hrithik Roshan), ಜ್ಯೂ.ಎನ್‌ಟಿಆರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸಿನಿಮಾಗಾಗಿ 60 ದಿನಗಳ ಕಾಲ್‌ಶೀಟ್ ಕೂಡ ನೀಡಿದ್ದಾರೆ. ಫುಲ್ ಮಾಸ್ & ಆ್ಯಕ್ಷನ್ ಅವತಾರದಲ್ಲಿ ಸಿನಿಮಾ ಮೂಡಿ ಬರಲಿದೆ.

‘ವಾರ್ 2’ ಸಿನಿಮಾದಲ್ಲಿ ಆಲಿಯಾ ಭಟ್ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಸದ್ಯ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್-ಆಲಿಯಾ ಜೋಡಿ ಹೇಗೆ ಕಮಾಲ್ ಮಾಡಲಿದೆ ಎಂದು ಅಭಿಮಾನಿಗಳು ಕೌತುಕದಿಂದ ಎದುರು ನೋಡ್ತಿದ್ದಾರೆ.