ಇನ್ಮುಂದೆ ಬಾಲಿವುಡ್ ನಿರ್ದೇಶಕರಿಗೆ ಸಿಗಲ್ಲ ಆಲಿಯಾ ಭಟ್

ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ಕೊಡುತ್ತಿರುವ ಆಲಿಯಾ ಭಟ್, ಇತರ ನಟಿಯರ ನಿದ್ದೆಗೆಡಿಸಿದ್ದಾರೆ. ಮೊದಲ ಬಾರಿಗೆ ಮಹಿಳಾ ನಟಿಯೊಬ್ಬರು ಕೆಲವೇ ದಿನಗಳಲ್ಲಿ 100 ಕೋಟಿ ಕ್ಲಬ್ ಸೇರುವಂತಹ ಸಿನಿಮಾ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಹಾಗಾಗಿ ಬಾಲಿವುಡ್ ನಲ್ಲಿ ಆಲಿಯಾ ಹವಾ ಜೋರಾಗಿದೆ. ಇದನ್ನೂ ಓದಿ : ರಾಧಿಕಾ ಪಂಡಿತ್ ಬರ್ತಡೇ ಸೆಲೆಬ್ರೆಷನ್: ಫೋಟೋ ಗ್ಯಾಲರಿ

ಸದ್ಯ ಬಿಡುಗಡೆ ಆಗಿರುವ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿದೆ. ಇದೇ ಹೊತ್ತಿನಲ್ಲಿ ಅವರಿಗೆ ಹಾಲಿವುಡ್ ನಲ್ಲಿ ಭಾರೀ ಆಫರ್ ಒಂದು ಬಂದಿದೆ. ಇನ್ನೇನು ಅವರು ಬಾಲಿವುಡ್ ನಿಂದ ಗಂಟುಮೂಟೆ ಕಟ್ಟಿಕೊಂಡು ಕೆಲ ವರ್ಷಗಳ ಕಾಲಿ ಹಾಲಿವುಡ್ ಅಂಗಳದಲ್ಲಿ ಠಿಕಾಣೆ ಹೂಡಲಿದ್ದಾರೆ. ಇದನ್ನೂ ಓದಿ : ಬಾಲಯ್ಯನ ಕ್ಯಾಂಪ್ ನಲ್ಲಿ ಕಾಣಿಸಿಕೊಂಡ ದುನಿಯಾ ವಿಜಯ್

ಹಾಲಿವುಡ್ ನ ಖ್ಯಾತ ನಿರ್ದೇಶಕ ಟಾಮ್ ಹಾರ್ಪರ್ ಸದ್ಯ ಹೊಸ ಸಿನಿಮಾ ಮಾಡುತ್ತಿದ್ದು, ಆಲಿಯಾ ಭಟ್ ಅವರಿಗೆ ನಟಿಸುವಂತೆ ವಿನಂತಿಸಿದ್ದಾರೆ. ಆಲಿಯಾ ಕೂಡ ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಮಾ.8 ರ ಮಹಿಳಾ ದಿನಾಚರಣೆ ದಿನದಂದು ಅಧಿಕೃತವಾಗಿ ಈ ವಿಷಯವನ್ನು ನಿರ್ಮಾಣ ಸಂಸ್ಥೆ ಬಹಿರಂಗ ಪಡಿಸಿದೆ. ಇದನ್ನೂ ಓದಿ : ವಾರದೊಳಗೆ 100 ಕೋಟಿ ಕ್ಲಬ್ ಸೇರಲಿದೆ ಪುನೀತ್ ನಟನೆಯ ಜೇಮ್ಸ್: ಪಕ್ಕಾ ಲೆಕ್ಕಾಚಾರ

ಅಂದಹಾಗೆ ಈ ಚಿತ್ರಕ್ಕೆ ‘ಹಾರ್ಟ್ ಆಫ್ ಸ್ಟೋನ್’ ಎಂದು ಹೆಸರಿಡಲಾಗಿದೆ. ಸ್ಪೈ ಮತ್ತು ಥ್ರಿಲ್ಲರ್ ಜಾನರ್ ನ ಈ ಸಿನಿಮಾದಲ್ಲಿ ಹಾಲಿವುಡ್ ನ ಖ್ಯಾತ ತಾರೆಯರಾದ ಜೇಮಿ ಡೊರ್ನಾನ್, ಗಾಲ್ ಗಾಡೋಡ್ ಸೇರಿದಂತೆ ಅನೇಕರು ಇರಲಿದ್ದಾರೆ. ಇದನ್ನೂ ಓದಿ : ಕಬ್ಜ ಸಿನಿಮಾದಲ್ಲಿ ಮಧುಮತಿಯಾದ ಶ್ರೀಯಾ ಶರಣ್: ಫಸ್ಟ್ ಲುಕ್ ರಿಲೀಸ್

ಎರಡು ವರ್ಷಗಳ ಹಿಂದೆಯೇ ಈ ಸಿನಿಮಾಗಾಗಿ ತಯಾರಿ ನಡೆದಿದ್ದು, ಈಗ ಶೂಟಿಂಗ್ ಶುರುವಾಗುತ್ತಿದೆ. ಯುಕೆಯಲ್ಲಿಯೇ ಬಹುತೇಕ ಚಿತ್ರೀಕರಣ ನಡೆಯಲಿದೆಯಂತೆ. ಹಾಲಿವುಡ್ ಆಫರ್ ನಿಂದಾಗಿ ಕೆಲ ತಿಂಗಳುಗಳ ಕಾಲ ಆಲಿಯಾ ಭಟ್ ಬಾಲಿವುಡ್ ಮಂದಿಗೆ ಸಿಗುವುದಿಲ್ಲವಂತೆ.

Comments

Leave a Reply

Your email address will not be published. Required fields are marked *