ದೊಡ್ಮನೆಗೆ ಎಂಟ್ರಿ ಕೊಟ್ಟು ಮಹಿಳಾ ಸ್ಪರ್ಧಿಗೆ ಕಿಸ್ ಮಾಡಿದ ಆಲಿಯಾ ತಂದೆ

ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ (Mahesh Bhatt) ಅವರು ಸದಾ ಒಂದಲ್ಲಾ ಒಂದು ವಿವಾದ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಕೆರಿಯರ್ ಶುರುವಿನಿಂದಲೂ ವಿವಾದ ಜೊತೆಗೆಯೇ ಹೈಲೆಟ್ ಆಗಿದ್ದಾರೆ. ಈ ಹಿಂದೆ ಸುಶಾಂತ್ ಸಿಂಗ್ ಸಾಯಲು ಪರೋಕ್ಷವಾಗಿ ಮಹೇಶ್ ಭಟ್ ಅವರೇ ಕಾರಣ, ರಿಯಾಗೆ (Riya) ಡೀಲ್ ಕೊಟ್ಟಿದ್ದೇ ಇವರು ಅಂತೆಲ್ಲಾ ಸುದ್ದಿಯಾಗಿತ್ತು. ಈಗ ಒಟಿಟಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಇಲ್ಲಿ ಪುತ್ರಿ ಪೂಜಾ ಭಟ್ ಅವರನ್ನ ಮಾತನಾಡಿಸುವ ಬದಲು ಬೇರೇ ಸ್ಪರ್ಧಿಯ ಕೈ ಹಿಡಿದಿರೋದು ಹಲವು ಟೀಕೆಗೆ ದಾರಿ ಮಾಡಿ ಕೊಟ್ಟಿದೆ.

ಮಹೇಶ್ ಭಟ್ ಪುತ್ರಿಯರಾದ ಪೂಜಾ ಭಟ್- ಆಲಿಯಾ ಭಟ್ (Alia Bhatt) ಬಾಲಿವುಡ್‌ನಲ್ಲಿ (Bollywood) ತಮ್ಮದೇ ಶೈಲಿಯಲ್ಲಿ ಸದ್ದು ಮಾಡ್ತಿದ್ದಾರೆ. ಆಲಿಯಾ ಭಟ್ ಟಾಪ್ ನಟಿಯಾಗಿ ಗಮನ ಸೆಳೆಯುತ್ತಿದ್ದಾರೆ. ಮದುವೆಯಾದ್ಮೇಲೆಯೂ ನಾಯಕಿಯಾಗಿ ಛಾಪೂ ಮೂಡಿಸುತ್ತಿದ್ದಾರೆ. ಪೂಜಾ ಭಟ್ ಸದ್ಯ ಬಿಗ್ ಬಾಸ್ ಓಟಿಟಿ 2ನಲ್ಲಿ (Bigg Boss Ott 2) ಸ್ಪರ್ಧಿಯಾಗಿ ಮಿಂಚ್ತಿದ್ದಾರೆ. ಅಲ್ಲಿ ತನ್ನ ಖಾಸಗಿ ಜೀವನದ ಬಗ್ಗೆ ಡಿವೋರ್ಸ್ ಕುರಿತು ನಟಿ ಮನಬಿಚ್ಚಿ ಮಾತನಾಡಿದ್ದರು.

ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್ ಆರಂಭ ಆಗಿ ಹಲವು ವಾರ ಕಳೆದಿದೆ. ಬಿಗ್ ಬಾಸ್ ಮನೆಯಲ್ಲಿ ನಡೆದ ಲಿಪ್ ಲಾಕ್ ದೃಶ್ಯದ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈಗ ಮಹೇಶ್ ಭಟ್ ಅವರು ದೊಡ್ಮನೆ ಒಳಗೆ ತೆರಳಿ ಮನಿಶಾ ರಾಣಿ (Manisha Rani) ಕೈ ಅನ್ನು ಹಿಡಿದುಕೊಂಡು ಕುಳಿತಿದ್ದಾರೆ. ಬಳಿಕ ಅವರ ಕೈಗೆ ಮುತ್ತಿಟ್ಟಿದ್ದಾರೆ. ಅನೇಕರು ಈ ಬಗ್ಗೆ ತಕರಾರು ತೆಗೆದಿದ್ದಾರೆ. ಇದನ್ನೂ ಓದಿ:ದಕ್ಷಿಣದ ಸಿನಿಮಾಗಳಲ್ಲಿ ಸಂಜಯ್ ದತ್ ಬ್ಯುಸಿ

ಈ ವಾರ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಈ ಕಾರಣಕ್ಕೆ ಒಳಗಿರುವ ಸ್ಪರ್ಧಿಗಳ ಮನೆ ಮಂದಿ ದೊಡ್ಮನೆ ಪ್ರವೇಶಿಸುತ್ತಿದ್ದಾರೆ. ಮಹೇಶ್ ಭಟ್ ಮಗಳು ಪೂಜಾ ಭಟ್ ಕೂಡ ಬಿಗ್ ಬಾಸ್ ಮನೆ ಒಳಗೆ ಇದ್ದಾರೆ. ಹೀಗಾಗಿ, ಮಹೇಶ್ ಭಟ್ ಅವರು ದೊಡ್ಮನೆ ಒಳಗೆ ಬಂದಿದ್ದರು. ಅವರು ಮಗಳ ಜೊತೆ ಮಾತುಕತೆ ನಡೆಸುವ ಬದಲು ಸ್ಪರ್ಧಿ ಮನಿಶಾ ರಾಣಿ ಕೈ ಹಿಡಿದು ಕುಳಿತಿದ್ದಾರೆ.

ಇದನ್ನು ಅನೇಕರು ಟೀಕೆ ಮಾಡಿದ್ದಾರೆ. ಮಹೇಶ್ ಭಟ್ ನಡೆದುಕೊಂಡ ರೀತಿ ಸರಿ ಇಲ್ಲ ಎಂದು ಹಲವರು ಟೀಕಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮತ್ತೊಂದು ಕಡೆ ಮಹೇಶ್ ಅವರು ಮನಿಶಾ ರಾಣಿ ಮಗಳ ಸಮಾನರು. ಆ ರೀತಿಯಲ್ಲೇ ಮಹೇಶ್ ಭಟ್ ಅವರು ನೋಡಿರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]