ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಕರಾವಳಿ ಸುಂದರಿಯರು!

ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮತ್ತು ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಬಚ್ಚನ್ ಇಬ್ಬರು ಇದೇ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಐಶ್ವರ್ಯ ಮತ್ತು ಅನುಷ್ಕಾ ಇಬ್ಬರು ಕರ್ನಾಟಕದ ಕರಾವಳಿ ಭಾಗದವರು ಆಗಿದ್ದಾರೆ. ಇವರಿಬ್ಬರು ಇದುವರೆಗೂ ಯಾವ ಸಿನಿಮಾದಲ್ಲೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಆದ್ರೆ ಇದೀಗ ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ‘ಪೊನ್ನಿಯನ್ ಸೆಲ್ವಾನ್’ ಸಿನಿಮಾದಲ್ಲಿ ಐಶ್ವರ್ಯ ಮತ್ತು ಅನುಷ್ಕಾ ಶೆಟ್ಟಿ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಮಣಿರತ್ನಂ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಪೊನ್ನಿಯನ್ ಸೆಲ್ವಾನ್’ ಸಿನಿಮಾದಲ್ಲಿ ಈಗಾಗಲೇ ಐಶ್ವರ್ಯ ರೈ ಅಭಿನಯಿಸುತ್ತಿರುವುದು ಪಕ್ಕವಾಗಿದೆ.

ಈ ಸಿನಿಮಾದಲ್ಲಿ ಮೊದಲು ಅನುಷ್ಕಾ ಶೆಟ್ಟಿ ಅಭಿನಯಿಸಬೇಕಾಗಿದ್ದ ಪಾತ್ರಕ್ಕೆ ನಟಿ ನಯನತಾರಾ ಆಯ್ಕೆಯಾಗಿದ್ದರು. ಆದರೆ ಅವರು ಕಾರಣಾಂತರಗಳಿಂದ ಈ ಸಿನಿಮಾದಿಂದ ಹೊರ ಹೋಗಿದ್ದಾರೆ. ಹೀಗಾಗಿ ಆ ಪಾತ್ರಕ್ಕೆ ಅನುಷ್ಕಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ಸದ್ಯಕ್ಕೆ ಅನುಷ್ಕಾ ‘ಸೈಲೆನ್ಸ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾ ಮುಗಿದ ಬಳಿಕ ‘ಪೊನ್ನಿಯನ್ ಸೆಲ್ವಾನ್’ ಚಿತ್ರತಂಡ ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಸಿನಿಮಾದಲ್ಲಿ ಐಶ್ಚರ್ಯ ಅವರು ವಿಲನ್ ಪಾತ್ರದಲ್ಲಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಅವರು ಚಿತ್ರದಲ್ಲಿ ನೆಗೆಟಿವ್ ಪಾತ್ರ ಮಾಡಿದರೆ ಮೊದಲ ಬಾರಿಗೆ ಪ್ರೇಕ್ಷಕರ ಮುಂದೆ ಖಳನಟಿಯಾಗಿ ಬರಲಿದ್ದಾರೆ. ‘ಪೊನ್ನಿಯನ್ ಸೆಲ್ವಾನ್’ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಐಶ್ವರ್ಯ ರೈ, ಚಿಯಾನ್ ವಿಕ್ರಮ್, ಕೀರ್ತಿ ಸುರೇಶ್, ಕಾರ್ತಿಕ್, ಅಮಿತಾಬ್ ಬಚ್ಚನ್ ಮತ್ತು ಅನುಷ್ಕಾ ಕಾಣಿಸಿಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *