ಮತ್ತೊಮ್ಮೆ ಹೆಣ್ಣಾಗಿ ಮಿಂಚಲಿದ್ದಾರೆ ಶರಣ್!

ಬೆಂಗಳೂರು: ಈ ಹಿಂದೆ ಜಯಲಲಿತಾ ಸಿನಿಮಾದಲ್ಲಿ ಹೆಣ್ಣಿನ ಪಾತ್ರದಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದ ಶರಣ್ ಇದೀಗ ಮತ್ತೆ ಅದೇ ವೇಷದಲ್ಲಿ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಲಿದ್ದಾರೆ.

ಹೌದು. ಹಾಸ್ಯ ನಟ ಹಾಗೂ ನಾಯಕ ನಟನಾಗಿರೋ ಶರಣ್, ವಿಕ್ಟರಿ-2 ಸಿನಿಮಾದಲ್ಲಿ ಹೆಣ್ಣಾಗಿ ಮತ್ತೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ಮಿಂಚಲಿದ್ದಾರೆ. ಈ ಚಿತ್ರದಲ್ಲಿ ಸಾಧುಕೋಕಿಲ ಹಾಗೂ ರವಿಶಂಕರ್ ಕೂಡ ಅಭಿನಯಿಸಲಿದ್ದು, ಅವರು ಕೂಡ ಹೆಣ್ಣಿನ ಪಾತ್ರ ನಿರ್ವಹಿಸಲಿದ್ದಾರೆ.

`ವಿಕ್ಟರಿ 2′ ಸಿನಿಮಾವನ್ನು ಅಲೆಮಾರಿ ಸಂತು(ಹರಿ ಸಂತೋಷ್) ನಿರ್ದೇಶಿಸುತ್ತಿದ್ದು, ಸಿನಿಮಾದ ಹಾಡಿನ ಚಿತ್ರೀಕರಣ ಇತ್ತೀಚೆಗಷ್ಟೇ ರಷ್ಯಾದಲ್ಲಿ ನಡೆದಿದೆ. ಈ ಸಿನಿಮಾದ ಮೇಕಿಂಗ್ ಫೋಟೋಗಳು ಬಿಡುಗಡೆಯಾಗಿವೆ. ಫಸ್ಟ್ ಲುಕ್‍ನಲ್ಲಿ ಒಟ್ಟು ಎರಡು ಫೋಟೋಗಳನ್ನು ಚಿತ್ರತಂಡ ಬಿಡುಗೊಡೆಗೊಳಿಸಿತ್ತು. ಒಂದರಲ್ಲಿ ವೈಟ್ ಆ್ಯಂಡ್ ವೈಟ್ ಶರ್ಟ್, ಪಂಚೆ ತೊಟ್ಟು ಮಿಂಚಿದರೆ, ಇನ್ನೊಂದರಲ್ಲಿ ಮಾಸ್ ಗೆಟಪ್ ನಲ್ಲಿ ಕಂಡಿದ್ದರು. ಇದನ್ನೂ ಓದಿ:  ಎರಡನೇ ವಿಕ್ಟರಿಯಲ್ಲಿ ಡಬಲ್ ಫನ್ ಫಿಕ್ಸ್

‘ರಾಂಬೋ 2’ ಯಶಸ್ಸಿನ ನಂತರ ಶರಣ್ ‘ವಿಕ್ಟರಿ 2’ ಸಿನಿಮಾವನ್ನು ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಶರಣ್ ಅವರಿಗೆ ಅಪೂರ್ವ ಜೋಡಿಯಾಗಿದ್ದಾರೆ. ಅಲ್ಲದೇ ಈ ಹಿಂದೆ ವಿಕ್ಟರಿ ಸಿನಿಮಾದಲ್ಲಿ ನಟಿಸಿದ್ದ ಅಸ್ಮಿತಾ ಸೂದ್ ಕೂಡ ಇಲ್ಲಿ ಕಾಣಿಸಿಕೊಂಡಿದ್ದಾರೆ. ತಬಲಾ ನಾಣಿ, ನಾಸೀನ್, ಅವಿನಾಶ್, ಮಿತ್ರಾ, ಕಲ್ಯಾಣಿ, ಅರಸು ಮತ್ತು ಸಿದ್ದಿ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದೆ. ವಿಕ್ಟರಿಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ತರುಣ್ ಸುಧೀರ್ ಕಥೆ ಬರೆದಿದ್ದು, ಅಲೆಮಾರಿ ಸಂತು ನಿರ್ದೇಶನ ಮತ್ತು ತರುಣ್ ಶಿವಪ್ಪ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *