ಯುವ ರಾಜ್‌ಕುಮಾರ್‌ಗೆ ರೋಹಿತ್ ಪದಕಿ ಆ್ಯಕ್ಷನ್ ಕಟ್

ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ (Yuva Rajkumar) ಅವರು ‘ಯುವ’ ಚಿತ್ರದ ಮೂಲಕ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದರು. ಅದಾದ ನಂತರ ಅವರ ಮುಂದಿನ ಸಿನಿಮಾ ಬಗ್ಗೆ ಯಾವುದೇ ಅಪ್‌ಡೇಟ್ ಸಿಕ್ಕಿರಲಿಲ್ಲ. ಇದೀಗ ಸ್ವತಃ ಅವರೇ ‘ಪಬ್ಲಿಕ್ ಟಿವಿ’ ಡಿಜಿಟಲ್‌ಗೆ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಡೈರೆಕ್ಟರ್ ರೋಹಿತ್ ಪದಕಿ (Rohit Padaki) ಜೊತೆ ಸಿನಿಮಾ ಮಾಡೋದಾಗಿ ತಿಳಿಸಿದ್ದಾರೆ.

‘ಯುವ’ (Yuva) ಚಿತ್ರದಲ್ಲಿ ಯುವನ ಎಂಟ್ರಿ ನೋಡಿ ಅಭಿಮಾನಿಗಳಲ್ಲಿ ಭರವಸೆ ಮೂಡಿತ್ತು. ಈ ಚಿತ್ರದ ನಂತರ ಮುಂದೇನು? ಅಂತ ಕೇಳುತ್ತಿದ್ದವರಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಒಂದೊಳ್ಳೆಯ ಕಂಟೆಂಟ್ ಇರುವ ಚಿತ್ರ ಇದಾಗಿದ್ದು, ಡಿಫರೆಂಟ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಚಿತ್ರವನ್ನು ಡೈರೆಕ್ಟರ್ ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಣದ ಹೊಣೆಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ವಹಿಸಿಕೊಂಡಿರೋದಾಗಿ ಯುವ ತಿಳಿಸಿದ್ದಾರೆ. ಇದನ್ನೂ ಓದಿ:‘ಕಾಂತಾರ’ ಚಿತ್ರದ ಪ್ರತಿ ಹಂತವು ವಿಶೇಷವಾಗಿತ್ತು – ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ

ಇನ್ನೂ ಈ ಚಿತ್ರಕ್ಕೆ ಇನ್ನೂಳಿದ ಕಲಾವಿದರ ಆಯ್ಕೆ ಆಗಬೇಕಿದೆ. ದಸರಾ ಹಬ್ಬದಂದು ಅಧಿಕೃತ ಘೋಷಣೆ ಆಗಲಿದೆ ಎಂದು ಯುವ ಮಾತನಾಡಿದ್ದಾರೆ.

ಇನ್ನೂ ‘ರತ್ನನ್ ಪ್ರಪಂಚ’ ನಿರ್ದೇಶಕನ ಜೊತೆ ಯುವನ ಹೊಸ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಚಿತ್ರದ ಹೆಚ್ಚಿನ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.