ಅಪ್ಪನ ಕೈ ಬೆರಳ ಬಿಗಿದಪ್ಪಿದ ಮಗಳು – ಪುಳಕಗೊಂಡ ಯಶ್

ಬೆಂಗಳೂರು: ಮನದಾಸೆಯಂತೆ ಜನಿಸಿದ ಮುದ್ದಿನ ಮಗಳು ಕೈ ಬೆರಳನ್ನು ಬಿಗಿದಪ್ಪಿದ್ದ ವೇಳೆ ಪುಳಗೊಂಡಿರುವ ನಟ ಯಶ್, ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.

ತಮ್ಮ ಆಸೆಯಂತೆ ಹೆಣ್ಣು ಮಗುವಿಗೆ ತಂದೆಯಾದ ಯಶ್ ಮಗಳ ಬಗ್ಗೆ, “ನನ್ನ ಬೆರಳುಗಳನ್ನು ಬಿಗಿಹಿಡಿದು ತಂದೆತನದೆಡೆಗೆ ದಾರಿ ತೋರಿಸಿದ ನನ್ನ ದೇವತೆಯ ಪುಟ್ಟಹಸ್ತ! ಯಾರನ್ನಾದರೂ ಕನಿಷ್ಠ ನೋಡದೆಯೇ ಪ್ರೀತಿಸುವುದು ಒಂದು ಅದ್ಭುತ ಭಾವ. ಇನ್ನು ಅವಳನ್ನು ಕಣ್ತುಂಬಿಕೊಂಡ ಮೇಲಂತೂ ಅವಳೊಂದಿಗೆ ನನ್ನ ಪ್ರೀತಿ ನೂರ್ಮಡಿಯಾಗಿದೆ” ಎಂದು ಫೇಸ್ ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

ನಟಿ ರಾಧಿಕ ಪಂಡಿತ್ ಅವರು ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಪ್ರೀತಿಯ ಮಗಳೊಂದಿಗೆ ಯಶ್ ಕಾಣಿಸಿಕೊಂಡಿರುವ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಮಗಳನ್ನು ಒಂದೇ ನೋಟದೊಂದಿಗೆ ಸೂಕ್ಷ್ಮವಾಗಿ ಗಮನಿಸುತ್ತಿರುವ ಫೋಟೋ ಕಂಡ ಅಭಿಮಾನಿಗಳು ಸಂತಸಗೊಂಡು ಶುಭ ಕೋರಿದ್ದಾರೆ.

ಅಂದಹಾಗೇ ಯಶ್ ತಮಗೆ ಹೆಣ್ಣು ಮಗು ಬೇಕೆಂದು ಇಷ್ಟ ಪಟ್ಟಿದ್ದ ಸಂಗತಿ ಈಗಾಗಲೇ ತಿಳಿದಿದೆ. ಮುದ್ದಿನ ಮಗಳ ಜನನದ ಸುದ್ದಿ ಕೇಳಿದ ಯಶ್ ಕಣ್ಣಲ್ಲಿ ಆನಂದಭಾಷ್ಪ ತುಂಬಿತ್ತು ಎಂದು ವೈದ್ಯರು ತಿಳಿಸಿದ್ದರು.

https://www.youtube.com/watch?v=VxelNRK-5H0

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *