ಭಾವುಕರಾದ ನಟ ವಿನೋದ್ ರಾಜ್

ಬೆಂಗಳೂರು: ಕಳೆದುಕೊಂಡಿದ್ದ ಹಣ ವಾಪಸ್ ಸಿಕ್ಕಿದ ಖುಷಿಯಲ್ಲಿ ನಟ ವಿನೋದ್ ರಾಜ್ ಅವರು ಭಾವುಕರಾಗಿದ್ದಾರೆ.

ಒಂದೂವರೆ ತಿಂಗಳ ಹಿಂದೆ ನಟ ವಿನೋದ್ ರಾಜ್ ಅವರ ಹಣ ಕಳ್ಳತನವಾಗಿತ್ತು. ಬಳಿಕ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದು, ಆರೋಪಿಯನ್ನು ಬಂಧಿಸಿ ಆತನಿಂದ ಹಣವನ್ನು ವಶಪಡಿಸಿಕೊಂಡಿದ್ದರು. ಬಂಧಿತ ಆರೋಪಿಯಿಂದ ವಶಪಡಿಸಿಕೊಂಡಿದ್ದ ಹಣವನ್ನು ಪೊಲಿಸರು ಇಂದು ನಟ ವಿನೋದ್ ರಾಜ್ ಅವರಿಗೆ ವಾಪಸ್ ಕೊಟ್ಟಿದ್ದಾರೆ. ಕಳೆದುಹೋದ ಹಣ ಮತ್ತೆ ಸಿಕ್ಕ ಕ್ಷಣದಲ್ಲಿ ನಟ ವಿನೋದ್ ರಾಜ್ ಅವರು ಭಾವುಕರಾದರು. ಇದನ್ನೂ ಓದಿ: ವಿನೋದ್‍ರಾಜ್ ಕಾರಿನಲ್ಲಿದ್ದ 1 ಲಕ್ಷ ರೂ. ದೋಚಿದ ಕಳ್ಳರು!

ಈ ವೇಳೆ ಮಾತನಾಡಿದ ವಿನೋದ್ ರಾಜ್ ಅವರು, ನಾನು ಹಣ ಕಳೆದುಕೊಂಡಾಗ ತುಂಬಾ ನೊಂದುಕೊಂಡಿದ್ದೆ. ಆದರೆ ಪೊಲೀಸರು ಒಂದೂವರೆ ತಿಂಗಳಿನಲ್ಲಿ ಹಣವನ್ನು ರಿಕವರಿ ಮಾಡಿದ್ದಾರೆ. ಆದ್ದರಿಂದ ನಮ್ಮ ಕರ್ನಾಟಕದ ಪೊಲೀಸರಿಗೆ ಮತ್ತು ಈ ಬಗ್ಗೆ ಸುದ್ದಿ ಮಾಡಿದ್ದ ಮಾಧ್ಯಮದವರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ. ಜೊತೆಗೆ ಪೊಲೀಸರು, ಮಾಧ್ಯಮದವರು ಹೇಳುವ ವಿಷಯದ ಬಗ್ಗೆ ನಾವು ತುಂಬಾ ಎಚ್ಚರಿಕೆಯಿಂದ ಇರಬೇಕು. ಹಣ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.

ನೆಲಮಂಗಲ ಪಟ್ಟಣದ ಕೆನರಾ ಬ್ಯಾಂಕ್ ಮುಂದೆ ಈ ಘಟನೆ ನಡೆದಿತ್ತು. ವಿನೋದ್ ರಾಜ್ ಅವರು ತೋಟದ ಕೆಲಸಗಾರರಿಗೆ ಸಂಬಳವನ್ನ ನೀಡಲು ಬ್ಯಾಂಕ್ ನಿಂದ ಹಣ ಡ್ರಾ ಮಾಡಿ ಮನೆಗೆ ಹಿಂದಿರುಗಿ ಹೋಗುವಾಗ ಹಣ ಕಳ್ಳತನವಾಗಿತ್ತು. ನಂತರ ನೆಲಮಂಗಲ ಪಟ್ಟಣ ಪೊಲೀಸರು ಕಾರ್ಯಚರಣೆ ಮಾಡಿ ಓರ್ವ ಆರೋಪಿಯನ್ನು ಬಂಧಿಸಿದ್ದರು. ಬಂಧಿತ ಆರೋಪಿಯಿಂದ 80 ಸಾವಿರ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *