ಪ್ರಪಂಚವೇ ಎದುರಾದ್ರು ತಮ್ಮನಾಗಿ ದರ್ಶನ್ ಜೊತೆ ಇರುತ್ತೇನೆ- ವಿನೋದ್ ಪ್ರಭಾಕರ್

ಸ್ಟಾರ್ ನಟ ದರ್ಶನ್ (Darshan) ಮತ್ತು ಧ್ರುವ ಸರ್ಜಾ (Dhruva Sarja) ನಡುವೆ ಕೋಲ್ಡ್ ವಾರ್ ನಡೀತಾ ಇದೆ ಎನ್ನುವ ವಿಚಾರ ಹಲವು ದಿನಗಳಿಂದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಕಾವೇರಿ ಹೋರಾಟ ಸಂದರ್ಭದಲ್ಲಿ ಧ್ರುವ- ದರ್ಶನ್ ಹತ್ತಿರದಲ್ಲೇ ಕುಳಿತುಕೊಂಡಿದ್ದರೂ ಇಬ್ಬರೂ ಮಾತನಾಡಲಿಲ್ಲ ಎನ್ನುವುದು ಇದಕ್ಕೆ ಸಾಕ್ಷಿಯಾಗಿತ್ತು. ಧ್ರುವ ಮತ್ತು ದರ್ಶನ್ ಅಭಿಮಾನಿಗಳು ಈ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಆರೋಪ ಪ್ರತ್ಯಾರೋಪವನ್ನೂ ಮಾಡುತ್ತಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಧ್ರುವ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ದರ್ಶನ್ ಆಪ್ತ, ನಟ ವಿನೋದ್ ಪ್ರಭಾಕರ್ (Vinod Prabhakar) ಮಾತನಾಡಿದ್ದಾರೆ. ಇದನ್ನೂ ಓದಿ:ಬಿಕಿನಿ ಬಳಿಕ ಮತ್ತೆ ಬೋಲ್ಡ್ ಲುಕ್‌ನಲ್ಲಿ ‘ಗೀತಾ’ ಸೀರಿಯಲ್ ನಟಿ

ದರ್ಶನ್-ಧ್ರುವ ಮನಸ್ತಾಪದ ಕುರಿತು ವಿನೋದ್ ಪ್ರಭಾಕರ್ ಮಾತನಾಡಿ, ಧ್ರುವ (Dhruva) ಏನಂದ್ರು ಅಂತ ನಾನು ಸಂಪೂರ್ಣವಾಗಿ ನೋಡಿಲ್ಲ. ಆದರೆ ಒಂದು ಮಾತು ಹೇಳೋಕೆ ಇಷ್ಟಪಡ್ತೀನಿ. ಇಡೀ ಪ್ರಪಂಷನೇ ಎದುರು ಬಂದರೂ ಸರಿ ಅಣ್ಣ ದರ್ಶನ್‌ಗೆ ಒಬ್ಬ ತಮ್ಮನಾಗಿ ಸದಾ ಇರುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್ ಜೊತೆಗಿನ ಮುನಿಸಿನ ಬಗ್ಗೆ ಮಾತನಾಡಿದ ಧ್ರುವ, ‘ದರ್ಶನ್ ನಮ್ಮ ಸೀನಿಯರ್ ಆಕ್ಟರ್. ಅವರ ಪ್ರಸೆನ್ಸ್, ಆಬ್ಸೆಂಟ್ ಅಲ್ಲೂ ಗೌರವ ಇದೆ. ಆದರೆ, ದರ್ಶನ್ ಅವ್ರಿಗೆ ಒಂದೆರಡು ಪ್ರಶ್ನೆ ಕೇಳಬೇಕಿದೆ. ಆ ಪ್ರಶ್ನೆಗಳನ್ನ ಕ್ಲಿಯರ್ ಮಾಡಿಕೊಳ್ಳದೇ ಮನಸ್ಸಲ್ಲೊಂದು, ಎದುರು ಒಂದು ಮಾತಾಡೋಕ್ ಆಗಲ್ಲ. ಮನಸ್ಸಲ್ಲಿ ಒಂದ್ ಇಟ್ಕೊಂಡು ಯಾರನ್ನೋ ಮೆಚ್ಚಿಸಲು ನಾಟಕ ಆಡುವ ಅವಶ್ಯಕತೆ ನನಗೆ ಇಲ್ಲ. ಆರ್ಟಿಫಿಸಿಯಲ್ ಆಗಿ ಫೇಕ್ ಆಗಿ ಇರೋಕ್ ನನಗೆ ಬರಲ್ಲ. ನಮ್ಗೂ ಸೆಲ್ಫ್ ರೆಸ್ಪೆಕ್ಟ್, ಸ್ವಾಭಿಮಾನ ಇದೆ ಅಲ್ವಾ. ದರ್ಶನ್ ಸೀನಿಯರ್ ಆಕ್ಟರ್. ಅವರ ಬಗ್ಗೆ ಗೌರವ ಇದ್ದೇ ಇರುತ್ತೆ’ ಎಂದು ಹೇಳುವ ಮೂಲಕ ಮತ್ತಷ್ಟು ಅನುಮಾನ ಮೂಡಿಸಿದ್ದಾರೆ ಧ್ರುವ.ಇದನ್ನೂ ಓದಿ:ದರ್ಶನ್ ಜೊತೆಗಿನ ಮನಸ್ತಾಪ: ಅವರಿಗೆ ಒಂದಷ್ಟು ಪ್ರಶ್ನೆ ಕೇಳಬೇಕಿದೆ ಎಂದ ಧ್ರುವ

ಮುಂದುವರೆದು ಮಾತನಾಡಿದ ಧ್ರುವ, ‘ನಮ್ಮ ಸಿನಿಮಾಗಳಿಗೆ ಅವ್ರು ಡಬ್ಬಿಂಗ್ ಮಾಡಿಕೊಟ್ಟಿದ್ದಾರೆ. ಮನಸ್ಸಲ್ಲಿ ಒಂದು ಇಟ್ಕೊಂಡು ನಾಟಕ ಆಡೋಕ್ ನನಗೆ ಬರಲ್ಲ. ಅದು ನಾನಲ್ಲ ಅನ್ಸುತ್ತೆ. ನನಗೆ ದರ್ಶನ್ ಅವ್ರ ಬಳಿ ಕೇಳಲು ಕೆಲ ಪ್ರಶ್ನೆಗಳಿವೆ.ನಾನು ಅವರ ಬಳಿ ಮಾತನಾಡಿ ನೋಡ್ತೀನಿ. ಮನಸ್ತಾಪ ಕ್ಲಿಯರ್ ಆಗಬಹುದು, ಇಲ್ಲ ಆಗದೇ ಇರಬಹುದು. ಅದು ನಮ್ಮ ವೈಯಕ್ತಿಕ’ ಎಂದು ಹೇಳುವ ಮೂಲಕ ಮನಸ್ತಾಪ ಇರುವುದನ್ನು ಪರೋಕ್ಷವಾಗಿ ಅವರು ಒಪ್ಪಿಕೊಂಡಿದ್ದಾರೆ.

ಧ್ರುವ ಮತ್ತು ದರ್ಶನ್ ಅವರ ಮನಸ್ತಾಪಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಅವರ ಮಧ್ಯ ಮತ್ತಷ್ಟು ಮನಸ್ತಾಪ ಆಗುವಂತೆ ಕೆಲವರು ಕುತಂತ್ರ ನಡೆಸಿದ್ದಾರಂತೆ. ಅವರಿಗೆ ಧ್ರುವ ಖಡಕ್ ವಾರ್ನಿಂಗ್ ನೀಡಿದ್ದಾರೆ. ‘ಈ ಬೆಳವಣಿಗೆ ಆದ್ಮೇಲೆ ನನ್ನ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಆಗಿವೆ. ನಮ್ಮ ನಮ್ಮಲ್ಲೇ ವೈರಿಂಗ್ ಮಾಡ್ತಿದ್ದಾರೆ. ಈ ರೀತಿ ಮಾಡುವವರಿಗೆ ಒಂದು ರಿಕ್ವೆಸ್ಟ್. ದಯವಿಟ್ಟು ನನ್ನ ಹತ್ರ ತಗಲಾಕ್ಕೊಬೇಡಿ. ಫೇಕ್ ಆಕೌಂಟ್ ಕ್ರಿಯೇಟ್ ಮಾಡ್ತಿರೋರು ಎಚ್ಚರವಾಗಿರಿ’ ಎಂದು ಧ್ರುವ ಎಚ್ಚರಿಕೆಯನ್ನು ನೀಡಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]